ಕೊಹ್ಲಿ ಬಳಿಕ ಈತನೇ ಭಾರತದ ಬ್ಯಾಟಿಂಗ್ ಅಸ್ತ್ರ ಎಂದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್

ದಶಕಗಳಿಗೂ ಅಧಿಕ ಕಾಲದ ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿ ನಾಯಕನಾಗಿ ಸಾಕಷ್ಟು ದಾಖಲೆಗಳನ್ನು ಬರೆದ ಆಟಗಾರ ವಿರಾಟ್ ಕೊಹ್ಲಿ. ಅನೇಖ ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿರುವ ವಿರಾಟ್ ಕ್ರಿಕೆಟ್‌ನ ಬೃಹತ್ ದಾಖಲೆಗಳ ಮೇಲೂ ಕಣ್ಣಿಟ್ಟಿದ್ದಾರೆ. ಈಗಾಗಲೇ ಅನೇಕ ದಿಗ್ಗಜ ಆಟಗಾರರನ್ನು ಹಿಂದಿಕ್ಕಿರುವ ವಿರಾಟ್ ಕಳೆದುಕೊಂಡಿದ್ದ ಫಾರ್ಮ್‌ಗೆ ಮತ್ತೆ ಮರಳಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಭವಿಷ್ಯದಲ್ಲಿ ಭಾರತ ತಂಡದಲ್ಲಿ ಕೊಹ್ಲಿ ಸ್ಥಾನವನ್ನು ತುಂಬಬಲ್ಲ ಆಟಗಾರನ್ನು ಹೆಸರಿಸಿದ್ದಾರೆ.
ಟೀಮ್ ಇಂಡಿಯಾ ಬಾಂಗ್ಲಾ್ದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಉತ್ತಮ ಸ್ಥಿತಿಯಲ್ಲಿದೆ. ಈ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಶುಬ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಪದಾರ್ಪನೆ ಮಾಡಿ ಮೂರು ವರ್ಷಗಳ ಬಳಿಕ ಗಿಲ್ ಚೊಚ್ಚಕ ಶತಕವನ್ನು ಬಾರಿಸಿದ್ದಾರಾದರೂ ಅನೇಕ ಭರವಸೆಯ ಇನ್ನಿಂಗ್ಸ್‌ಗಳನ್ನು ಈಗಾಗಲೇ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಬ್ಮನ್ ಗಿಲ್ ಬಗ್ಗೆ ವಾಸಿಮ್ ಜಾಫರ್ ಪ್ರಶಂಸೆಯ ಮಾತುಗಳನ್ನಾಡಿದ್ದು ಭಾರತ ತಂಡದ ಭವಿಷ್ಯದ ಭರವಸೆ ಶುಬ್ಮನ್ ಗಿಲ್ ಎಂದಿದ್ದಾರೆ.

ಕೊಹ್ಲಿ ಬಳಿಕ ಭಾರತದ ಬ್ಯಾಟಿಂಗ್ ಅಸ್ತ್ರ
ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಟೀಮ್ ಇಂಡಿಯಾದ ಯುವ ಆಟಗಾರ ಶುಬ್ಮನ್ ಗಿಲ್ ಅವರ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ವಿರಾಟ್ ಕೊಹ್ಲಿ ಬಳಿಕ ಭಾರತದ ದೊಡ್ಡ ಬ್ಯಾಟಿಂಗ್ ಅಸ್ತ್ರ ಎಂದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ ತಮ್ಮ ಚೊಚ್ಚಲ ಶತಕ ಸಿಡಿಸಿದರು. ಅನೇಕ ಸಂದರ್ಭಗಳಲ್ಲಿ ಶತಕಗಳಿಸುವ ಅವಕಾಶ ಹೊಂದಿದ್ದರಾದರೂ ಅದನ್ನು ಸಾಧಿಸಲು ಗಿಲ್‌ಗೆ ಸಾಧ್ಯವಾಗಿರಲಿಲ್ಲ. ಇದೀಗ ತಮ್ಮ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದ ಸಂತಸದಲ್ಲಿದ್ದಾರೆ ಯುವ ಆಟಗಾರ ಶುಬ್ಮನ್ ಗಿಲ್.

ಗಿಲ್ ಕ್ಲಾಸ್ ಆಟಗಾರ
ಅವರಿಂದ ಶತಕ ಬಂದಿರುವುದು ನಿಜಕ್ಕೂ ಉತ್ತಮವಾದ ಸಂಗತಿ. ಇದಕ್ಕೂ ಮುನ್ನ ಒಂದೆರಡು ಅವಕಾಶಗಳು ಬಂದಿದ್ದರೂ ಅದನ್ನು ಅವರು ಕಳೆದುಕೊಂಡಿದ್ದರು. ಈಗ ಅದನ್ನು ಸಾಧಿಸಲು ಅವರಿಂದ ಸಾಧ್ಯವಾಗಿರುವುದಕ್ಕೆ ನಾನು ಸಂತಸಗೊಂಡಿದ್ದೇನೆ. ಆತನೋರ್ವ ಕ್ಲಾಸ್ ಆಟಗಾರ, ಹೀಗಾಗಿಯೇ ನಾನು ಆತನನ್ನು ವಿರಾಟ್ ಕೊಹ್ಲಿ ಬಳಿಕ ಭಾರತದ ಬ್ಯಾಟಿಂಗ್‌ನ ಪ್ರಮುಖ ಅಸ್ತ್ರ ಎಂದು ಭಾವಿಸುತ್ತೇನೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್.

ಮೂರು ಮಾದರಿಯ ಆಟಗಾರ ಶುಬ್ಮನ್ ಗಿಲ್
ಮುಂದುವರಿದು ಮಾತನಾಡಿದ ಅವರು ಶುಬ್ಮನ್ ಗಿಲ್ ಮೂರು ಮಾದರಿಯ ಆಟಗಾರ ಎಂದಿದ್ದಾರೆ. "ಶುಬ್ಮನ್ ಗಿಲ್ ಮೂರು ಮಾದರಿಯ ಆಟಗಾರ. ಅವರಿಂದ ಸಾಕಷ್ಟು ಒಳ್ಳೆಯ ವಿಚಾರಗಳನ್ನು ನೋಡಲು ಬಯಸುತ್ತೇನೆ" ಎಂದಿದ್ದಾರೆ ಜಾಫರ್. ಇನ್ನು ಇದೇ ಸಂದರ್ಭದಲ್ಲಿ ಅವರು ಶಯಬ್ಮನ್ ಗಿಲ್ ಆರಂಭಿಕ ಆಟಗಾರನಿಂತಲೂ ಮಧ್ಯಮ ಕ್ರಮಾಂಖದಲ್ಲಿ ಹೆಚ್ಚು ಪರಿಣಾಮಕಾರಿಯಾಗಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದಿದ್ದಾರೆ. ರಾಜ್ಯ ತಂಡದಲ್ಲಿಯೂ ಮಧ್ಯಮ ಕ್ರಮಾಂಖದಲ್ಲಿ ಗಿಲ್ ಆಡುತ್ತಿದ್ದು ಆರಂಭಿಕನಾಗಿ ಹೆಚ್ಚು ಆಡಿದ ಅನುಭವ ಹೊಂದಿಲ್ಲ ಎಂದಿದ್ದಾರೆ. ಭಾರತ ತಂಡದಲ್ಲಿಯೂ ಮದ್ಯಮ ಕ್ರಮಾಂಖದಲ್ಲಿ ಅವಕಾಶ ದೊರೆತರೆ ಖಂಡಿತವಾಗಿಯೂ ಮತ್ತಷ್ಟು ಪರಿಣಾಮಕಾರಿ ಇನ್ನಿಂಗ್ಸ್‌ಗಳನ್ನು ನಿರೀಕ್ಷಿಸಬಹುದು ಎಂದಿದ್ದಾರೆ ಜಾಫರ್.

ಅಮೋಘ ಶತಕ ಬಾರಿಸಿದ ಗಿಲ್
ಇನ್ನು ಶುಬ್ಮನ್ ಗಿಲ್ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ ಅಮೋಗ ಶತಕ ಸಿಡಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲ 20 ರನ್‌ಗಳಿಗೆ ಔಟಾಗಿ ನಿರಾಸೆ ಅನುಭವಿಸಿದ್ದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡರು. 152 ಎಸೆತಗಳನ್ನು ಎದುರಿಸಿದ ಗಿಲ್ 110 ರನ್‌ಗಳನ್ನು ಬಾರಿಸಿದ್ದಾರೆ. ಪೂಜಾರ ಜೊತೆಗೆ ಸೇರಿ ಶತಕದ ಜೊತೆಯಾಟ ನೀಡುವ ಮೂಲಕ ಭಾರತ ತಂಡ ಬಾಂಗ್ಲದೇಶಕ್ಕೆ ಬೃಹತ್ ಮೊತ್ತದ ಗುರಿ ನಿಡಲು ಕಾರಣವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications