IND vs BAN: ಮೂವರು ವಿಕೆಟ್ ಕೀಪರ್‌ಗಳಲ್ಲಿ ಯಾರಿಗೆ ಅವಕಾಶ? ಯಾರು ಆಯ್ಕೆ ಆದರೆ ಬೆಸ್ಟ್?
ಟೀಮ್ ಇಂಡಿಯಾ ಆಟಗಾರರು ಸದ್ಯ ರಜೆಯ ಮಜೆಯಲ್ಲಿದ್ದಾರೆ. ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಬಾಂಗ್ಲಾದೇಶ ವಿರುದ್ಧದ ಸರಣಿಗೆ ಟೀಮ್ ಇಂಡಿಯಾವನ್ನು ಮುಂದಿನ ತಿಂಗಳು ಮೊದಲು ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ಆಯ್ಕೆದಾರರು ಯಾವ ವಿಕೆಟ್ ಕೀಪರ್‌ಗೆ ಮಣೆ ಹಾಕುತ್ತಾರೆ ಎಂಬುದು ಕುತೂಹಲ ಹೆಚ್ಚಿಸಿದೆ. ತಂಡದ ಮೂವರು ವಿಕೆಟ್ ಕೀಪರ್‌ಗಳು ಫಿಟ್ ಆಗಿದ್ದು, ಆಯ್ಕೆಗೆ ಲಭ್ಯರಾಗಿದ್ದಾರೆ. ಇದು ಆಯ್ಕೆದಾರರ ಚಿಂತೆಯನ್ನು ಹೆಚ್ಚಿಸಿದೆ.

ಮೂವರು ವಿಕೆಟ್ ಕೀಪರ್
ಟೀಮ್ ಇಂಡಿಯಾದಲ್ಲಿ ಸದ್ಯ ಮೂವರು ವಿಕೆಟ್ ಕೀಪರ್‌ಗಳು ಇದ್ದಾರೆ. ಗಾಯದಿಂದ ಚೇತರಿಸಿಕೊಂಡು ಭರ್ಜರಿ ಕಂ ಬ್ಯಾಕ್ ಮಾಡಿರುವ ರಿಷಭ್ ಪಂಥ್, ವೈಟ್ ಜೆರ್ಸಿ ತೊಡಲು ರೆಡಿ ಆಗಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಆಯ್ಕೆದಾರರ ಮನ ಗೆದ್ದಿದ್ದ ಧೃವ ಜುರೇಲ್ ಆಯ್ಕೆಗೆ ಲಭ್ಯ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಕೀಪಿಂಗ್ ಗ್ಲೌಸ್ ತೊಟ್ಟಿದ್ದ ರಾಹುಲ್ ಸಹ ಗಾಯದಿಂದ ಚೇತರಿಸಿಕೊಂಡಿದ್ದಾರೆ.
ಯಾರಿಗೆ ಅವಕಾಶ?
ಸದ್ಯ ಟೀಮ್ ಇಂಡಿಯಾದ ಶೆಡ್ಯೂಲ್ ನೋಡಿದರೆ ರಿಷಭ್ ಪಂತ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಮಿಡ್ಲ್ ಆರ್ಡರ್‌ನಲ್ಲಿ ಕೆಎಲ್ ರಾಹುಲ್ ಸಹ ತಂಡದಲ್ಲಿ ಇರುತ್ತಾರೆ. ಹೀಗಾಗಿ ಈ ಇಬ್ಬರನ್ನೇ ವಿಕೆಟ್ ಕೀಪಿಂಗ್ ಕೆಲಸವನ್ನು ಮಾಡಬಹುದು. ಹೀಗಾಗಿ ಈ ಇಬ್ಬರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಧ್ರುವ್ ಜುರೇಲ್‌ಗೆ ಅವಕಾಶ ಸಿಗುವುದಿಲ್ಲವೇ?
ಬಾಂಗ್ಲಾದೇಶದ ವಿರುದ್ಧದ ಸರಣಿಗೆ ತಂಡವನ್ನು ಆಯ್ಕೆ ಮಾಡುವುದೇ ದೊಡ್ಡ ತಲೆ ನೋವು. ಅದರಲ್ಲಿ ಅನುಭವಿ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಿ, ಧ್ರುವ್ ಜುರೇಲ್ ಅವರನ್ನು ಕೈ ಬಿಟ್ಟರೆ, ಆಯ್ಕೆ ಸಮಿತಿ ಟೀಕೆಗೆ ಗುರಿಯಾಗ ಬೇಕಾಗುತ್ತದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡುವ ಅವಶ್ಯಕತೆ ಇದೆ.
ಯಾರು ಸೂಕ್ತರು?
ಆಯ್ಕೆ ಸಮಿತಿ ಬಾಂಗ್ಲಾ ವಿರುದ್ಧದ ಸರಣಿಗೆ ತಂಡವನ್ನು ಆಯ್ಕೆ ಮಾಡುವಾಗ ಹಲವು ವಿಷಯಗಳ ಬಗ್ಗೆ ಗಮನ ಹರಿಸಲಿದೆ. ಭಾರತ ಈ ವರ್ಷ ಸಾಲು ಸಾಲು ಟೆಸ್ಟ್ ಸರಣಿಗಳನ್ನು ಆಡಲಿದೆ. ಇಷ್ಟೇ ಅಲ್ಲದೆ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳಲಿದೆ. ಇದನ್ನೇಲ್ಲಾ ಗಮನಿಸಿದರೆ, ರಿಷಭ್ ಪಂತ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಕಳೆದ ಬಾರಿ ರಿಷಭ್ ಪಂತ್, ಆಸೀಸ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೆ ಸರಣಿ ಗೆಲುವಿನಲ್ಲಿ ಮಿಂಚಿದ್ದರು.
ಪಂತ್ ಆಯ್ಕೆ ಏಕೆ ಮುಖ್ಯ?
ರಿಷಭ್ ಪಂತ್ ಒಬ್ಬ ನುರಿತ ಆಟಗಾರ. ಪಂದ್ಯವನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಈ ಆಟಗಾರನಿಗೆ ಇರುತ್ತದೆ. ಅಲ್ಲದೆ ವಿಕೆಟ್ ಹಿಂದೆ ಸಹ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇನ್ನು ತಂಡಕ್ಕೆ ಅಗತ್ಯ ಇರುವ ಲೆಫ್ಟ್ ಹಾಗೂ ರೈಟ್ ಹ್ಯಾಂಡ್ ಕಾಂಬಿನೇಷನ್‌ಗೆ ರಿಷಭ್ ಹೊಂದುತ್ತಾರೆ. ಹೀಗಾಗಿ ಇವರೇ ಆಯ್ಕೆದಾರರ ಮೊದಲ ಆಯ್ಕೆಯ ವಿಕೆಟ್ ಕೀಪರ್..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications