For Quick Alerts
ALLOW NOTIFICATIONS  
For Daily Alerts
 

IND vs BAN World Cup 2023: ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತದ ಸಾಧನೆ; 2007ರಂತೆ ಕಾದಿದ್ಯಾ ಶಾಕ್?

ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ 2007ರ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಮೊದಲ ಬಾರಿಗೆ ಮುಖಾಮುಖಿಯಲ್ಲೇ ಭಾರತಕ್ಕೆ ಬಾಂಗ್ಲಾದೇಶ ತಂಡ ದೊಡ್ಡ ಶಾಕ್ ನೀಡಿತ್ತು.

ಮುಶ್ರಫೆ ಮೊರ್ತಜಾ, ಯುವ ತಮೀಮ್ ಇಕ್ಬಾಲ್ ಮತ್ತು ಮುಶ್ಫಿಕರ್ ರಹೀಮ್ ಐತಿಹಾಸಿಕ ಗೆಲುವಿಗೆ ಮಾರ್ಗದರ್ಶನ ನೀಡಿದ ನಂತರ ಬಾಂಗ್ಲಾ ಟೈಗರ್ಸ್ ತಮ್ಮ ಮೊದಲ ವಿಶ್ವಕಪ್ ಪಂದ್ಯವನ್ನು ಗೆದ್ದರು. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದ ಭಾರತವನ್ನು ಸೋಲಿಸುವ ಮೂಲಕ ಕ್ರಿಕೆಟ್ ಜಗತ್ತಿಗೆ ಅಚ್ಚರಿ ನೀಡಿದರು.

ಭಾರತ ತಂಡವನ್ನು 191 ರನ್‌ಗಳಿಗೆ ಆಲೌಟ್ ಮಾಡಿದ ನಂತರ, ಬಾಂಗ್ಲಾದೇಶ ತಂಡ ಕೇವಲ 5 ವಿಕೆಟ್ ಕಳೆದುಕೊಂಡು ನಿಗದಿತ ಗುರಿ ತಲುಪಿತು. 2007ರ ವಿಶ್ವಕಪ್ ಸೇರಿದಂತೆ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ವಿಶ್ವಕಪ್‌ಗಳಲ್ಲಿ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಆದರೆ ಭಾರತ 2011, 2015 ಮತ್ತು 2019ರಲ್ಲಿ ಮೂರು ಬಾರಿ ಬಾಂಗ್ಲಾದೇಶವನ್ನು ಮಣಿಸಿದೆ.

ind-vs-ban-world-cup-2023

ಭಾರತ ವಿರುದ್ಧದ ವಿಶ್ವಕಪ್ ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡದ ಯಾವೊಬ್ಬ ಬ್ಯಾಟರ್ ಶತಕ ಸಿಡಿಸಿಲ್ಲ. ತಮೀಮ್ ಇಕ್ಬಾಲ್ ಅವರು 2011ರಲ್ಲಿ ಮೀರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 70 ರನ್ ಗಳಿಸಿದ್ದು, ಅವರ ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್‌ನ ದಾಖಲೆ ಹೊಂದಿದ್ದಾರೆ.

ಆದರೆ, ಭಾರತದ ಮೂರು ಬ್ಯಾಟರ್‌ಗಳು ಶತಕ ಗಳಿಸಿದ್ದಾರೆ. ವಿಶ್ವಕಪ್‌ ಪಂದ್ಯಗಳಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತದ ಶತಕವೀರರ ಪಟ್ಟಿ ಇಲ್ಲಿದೆ.

ವೀರೇಂದ್ರ ಸೆಹ್ವಾಗ್ (2011)
2011ರಲ್ಲಿ ವೀರೇಂದ್ರ ಸೆಹ್ವಾಗ್ ಭಾರತ ತಂಡದ ಅಭಿಯಾನವನ್ನು ಅತ್ಯುತ್ತಮ ರೀತಿಯಲ್ಲಿ ಪ್ರಾರಂಭಿಸಿದರು. ಮಿರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಶಫಿಯುಲ್ ಇಸ್ಲಾಂ ಬೌಲಿಂಗ್‌ನ ಮೊದಲ ಎಸೆತದಲ್ಲಿ ಬಾರಿಸಿದ ಬೌಂಡರಿ ಭಾರತದ ಚಾಂಪಿಯನ್ ಪಯಣದ ಟೋನ್ ಅನ್ನು ಸ್ಥಾಪಿಸಿತು.

ind-vs-ban-world-cup-2023

ವೀರೇಂದ್ರ ಸೆಹ್ವಾಗ್ ಎರಡು ತಂಡಗಳ ನಡುವಿನ ಏಕದಿನ ಪಂದ್ಯಗಳಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ್ದರು. ಈ ದಾಖಲೆಯನ್ನು ಕಳೆದ ವರ್ಷವಷ್ಟೇ ಇಶಾನ್ ಕಿಶನ್ ದ್ವಿಶತಕ ಬಾರಿಸಿ ಮುರಿದರು. ವೀರೇಂದ್ರ ಸೆಹ್ವಾಗ್ 140 ಎಸೆತಗಳಲ್ಲಿ 14 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 175 ರನ್ ಗಳಿಸಿದರು.

ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್ ನೆರವಿನಿಂದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 370 ರನ್ ಗಳಿಸಿತು. ಭಾರತ 70 ರನ್‌ಗಳಿಂದ ಗೆದ್ದ ನಂತರ ವೀರೇಂದ್ರ ಸೆಹ್ವಾಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ವಿರಾಟ್ ಕೊಹ್ಲಿ (2011)
ವಿರಾಟ್ ಕೊಹ್ಲಿ ಭಾರತದ ಪರ ಶತಕಗಳನ್ನು ಬಾರಿಸುವ ಅಭ್ಯಾಸವನ್ನು ಹೊಂದಿದ್ದರು. ತಮ್ಮ ಮೊದಲ ವಿಶ್ವಕಪ್ ಪಂದ್ಯದಲ್ಲೇ ವಿರಾಟ್ ಕೊಹ್ಲಿ ದಾಖಲೆ ಬಾರಿಸಿದರು. ಆಗಿನ ಯುವ ಆಟಗಾರ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿದ್ದರು.

ind-vs-ban-world-cup-2023

ವಿರಾಟ್ ಕೊಹ್ಲಿ 83 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 100 ರನ್ ಗಳಿಸಿದರು. ನಾಲ್ಕನೇ ವಿಕೆಟ್‌ಗೆ ವೀರೇಂದ್ರ ಸೆಹ್ವಾಗ್ ಜೊತೆಗೂಡಿ 203 ರನ್‌ಗಳ ಬೃಹತ್ ಜೊತೆಯಾಟ ನೀಡಿದರು. ಅಂದು ವಿಶ್ವದಲ್ಲೇ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ವಿರಾಟ್ ಕೊಹ್ಲಿ ಒಬ್ಬರಾಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ.

ರೋಹಿತ್ ಶರ್ಮಾ (2015, 2019)

ವಿಶ್ವಕಪ್‌ಗೆ ಬಂದರೆ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಆಡಲು ಇಷ್ಟಪಡುತ್ತಾರೆ. ಆಡಿದ ಎರಡು ಪಂದ್ಯಗಳಿಂದ 241 ರನ್‌ಗಳೊಂದಿಗೆ 120.50ರ ಸರಾಸರಿ ಹೊಂದಿದ್ದಾರೆ. 2015ರಲ್ಲಿ ರೋಹಿತ್ ಶರ್ಮಾ ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ 126 ಎಸೆತಗಳಲ್ಲಿ 14 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 137 ರನ್ ಗಳಿಸಿದರು.

ರೋಹಿತ್ ಶರ್ಮಾ ಅವರು ಸುರೇಶ್ ರೈನಾ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 122 ರನ್‌ಗಳ ಜೊತೆಯಾಟ ನೀಡಿದರು. ಭಾರತ ತಂಡ 109 ರನ್‌ಗಳಿಂದ ಜಯ ಸಾಧಿಸಿದ ನಂತರ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.

ನಂತರ 2019ರಲ್ಲಿ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ರೋಹಿತ್ ಶರ್ಮಾ ಮತ್ತೊಂದು ಶತಕ ಗಳಿಸಿದರು. 10 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ತಮೀಮ್ ಇಕ್ಬಾಲ್ ಕ್ಯಾಚ್ ಕೈಬಿಟ್ಟು ಭಾರತೀಯ ಬ್ಯಾಟರ್‌ಗೆ ದೊಡ್ಡ ಜೀವದಾನ ನೀಡಿದರು.

ರೋಹಿತ್ ಶರ್ಮಾ 92 ಎಸೆತಗಳಲ್ಲಿ 104 ರನ್ ಗಳಿಸುವ ಮೂಲಕ ಬಾಂಗ್ಲಾದೇಶ ವಿರುದ್ಧ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಕೆಎಲ್ ರಾಹುಲ್ ಅವರೊಂದಿಗೆ ಮೊದಲ ವಿಕೆಟ್‌ಗೆ 180 ರನ್‌ಗಳ ಜೊತೆಯಾಟ ನೀಡಿದರು. ಈ ಪಂದ್ಯವನ್ನು ಭಾರತ 28 ರನ್‌ಗಳಿಂದ ಗೆದ್ದುಕೊಂಡಿತು.

Story first published: Tuesday, October 17, 2023, 16:42 [IST]
Other articles published on Oct 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+