ಒಂದೇ ಕೈನಲ್ಲಿ ಸೂಪರ್ ಮ್ಯಾನ್ ರೀತಿ ಕ್ಯಾಚ್ ಹಿಡಿದ ಕನ್ನಡಿಗ ಕೆಎಲ್ ರಾಹುಲ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ಬರ್ಮಿಂಗ್‌ಹ್ಯಾಮ್ ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಆರಂಭದಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳಾದ ಬೆನ್ ಡಕೆಟ್ ಹಾಗೂ ಜಾಕಬ್ ಬೆಥೆಲ್ ಜೋಡಿ 61 ರನ್ ಗಳ ಜೊತೆಯಾಟವನ್ನು ನೀಡಿತು. ಈ ವೇಳೆ ಟೀಮ್ ಇಂಡಿಯಾದ ವೇಗದ ಬೌಲರ್‌ಗಳು ಭರ್ಜರಿ ಕಮ್ ಬ್ಯಾಕ್ ಮಾಡಿದರು.
ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಹಿಡಿದ ಕ್ಯಾಚ್ ಒಂದು ಸಖತ್ ವೈರಲ್ ಆಗುತ್ತಿದೆ. ಇಂಗ್ಲೆಂಡ್ 107 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದಾಗ, ಶಿವಂ ದುಬೆ ಮತ್ತೊಂದು ಶಾಕ್ ನೀಡಿದರು. 19 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 20 ರನ್ ಬಾರಿಸಿದ್ದಾಗ ಔಟ್ ಆದರು.

ಶಿವಂ ದುಬೆ ಅವರು ಔಟ್ ಸೈಡ್ ಆಫ್ ಸ್ಟಂಪ್‌ನಲ್ಲಿ ಬಿದ್ದ ಲೆಂಥ್ ಚೆಂಡನ್ನು ಎಸೆದರು. ಈ ವೇಳೆ ಇದನ್ನು ಕಟ್ ಮಾಡಿ ರನ್‌ಗಳಿಸುವ ಯೋಚನೆ ವಿಲ್ ಜಾಕ್ಸ್ ಅವರದ್ದಾಗಿತ್ತು. ಆದರೆ ಚೆಂಡು ಇವರ ಬ್ಯಾಟ್‌ಗೆ ಮುತ್ತಿಟ್ಟು ಹೋಯಿತು. ಆಗ ವಿಕೆಟ್ ಕೀಪರ್ ಕೆಎಲ್ ರಾಹುಲ್ ತಮ್ಮ ಬಲಕ್ಕೆ ಡೈವ್ ಮಾಡಿ ಅಮೋಘ ಕ್ಯಾಚ್ ಪಡೆದರು. ಶಿವಂ ದುಬೆ ಅವರ ಮುಖದಲ್ಲಿ ಮಂದಹಾಸ ಮೂಡಿತು.
700ಕ್ಕೂ ಹೆಚ್ಚು ದಿನಗಳ ಬಳಿಕ ಏಕದಿನ ತಂಡದಲ್ಲಿ ಆಡುವ ಅವಕಾಶವನ್ನು ಪಡೆದ ಶಿವಂ ದುಬೆ ವಿಲ್ ಜಾಕ್ಸ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇವರು 6 ಓವರ್‌ಗಳಲ್ಲಿ 27 ರನ್ ನೀಡಿ ಒಂದು ವಿಕೆಟ್ ಪಡೆದರು.
ಬುಮ್ರಾ ಕಮಾಲ್ ಕ್ಯಾಚ್
ಇಂಗ್ಲೆಂಡ್ ತಂಡದ ಆರಂಭಿಕ ಬೆನ್ ಡಕೆಟ್ ಅವರ ಕ್ಯಾಚ್‌ನ್ನು ಸಹ ಜಸ್ಪ್ರೀತ್ ಬುಮ್ರಾ ಅವರು ಅಮೋಘ ಕ್ಯಾಚ್ ಪಡೆದರು. ವೇಗದ ಬೌಲರ್ ಗುರ್ನೂರ್ ಬ್ರಾರ್ ಅವರು ಎಸೆದ ಇನಿಂಗ್ಸ್‌ನ 13ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬೆನ್ ಡಕೆಟ್ ಬಿಗ್ ಹಿಟ್ ಬಾರಿಸಲು ಮುಂದಾದರು. ಆದರೆ ಡೀಪ್ ಥರ್ಡ್ ಮ್ಯಾನ್‌ನತ್ತ ಬೆನ್ ಡಕೆಟ್ ಬಾರಿಸಿದ ಚೆಂಡನ್ನು, ಬೌಂಡರಿ ಗೆರೆಯ ಹತ್ತಿರದಲ್ಲಿ ಫೀಲ್ಡ್ ಮಾಡುತ್ತಿದ್ದ ಜಸ್ಪ್ರೀತ್ ಬುಮ್ರಾ ಉತ್ತಮವಾಗಿ ಕ್ಯಾಚ್ ಪಡೆದರು. ಮೊದಲು ಇವರು ರಿವರ್ಸ್ ಕಪ್‌ಗಳಲ್ಲಿ ಕ್ಯಾಚ್ ಪಡೆದು, ಬೌಂಡರಿ ಲೈನ್‌ಗೆ ಕಾಲು ತಾಗಬಹುದು ಎಂದು ತಿಳಿದು ಚೆಂಡನ್ನು ಗಾಳಿಯಲ್ಲಿ ತೂರಿ ಮತ್ತೆ ಕ್ಯಾಚ್ ಪಡೆದರು. ಈ ಕ್ಯಾಚ್ ಪರಿಶೀಲಿಸಿದ ಮೂರನೇ ಅಂಪೈರ್ ಕ್ಯಾಚ್ ಎಂದು ತೀರ್ಪು ನೀಡಿದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಭರವಸೆಯ ಆಟಗಾರ ಜೋ ರೂಟ್ ಆಧಾರವಾದರು. ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 76 ರನ್ ಸಿಡಿಸಿದರು. ಅಂತಿಮವಾಗಿ ಇಂಗ್ಲೆಂಡ್ 47.5 ಓವರ್‌ಗಳಲ್ಲಿ 258 ರನ್‌ಗಳಿಗೆ ಆಲೌಟ್ ಆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications