IND vs ENG ಪ್ರಥಮ ಏಕದಿನ: ಈ ಮೈಲಿಗಲ್ಲುಗಳ ಮೇಲೆ ರೋಹಿತ್, ಶಿಖರ್ ಧವನ್ ಮತ್ತು ರೂಟ್ ಕಣ್ಣು

ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮುಕ್ತಾಯವಾಗಿದ್ದು, ಟೀಂ ಇಂಡಿಯಾ ಆಂಗ್ಲರಿಗೆ ಅವರ ತವರು ನೆಲದಲ್ಲಿಯೇ 2 - 1 ಅಂತರದಿಂದ ಮಣ್ಣುಮುಕ್ಕಿಸಿ ಸರಣಿಯನ್ನು ಕೈವಶ ಮಾಡಿಕೊಂಡಿತು. ಹೀಗೆ ರೋಹಿತ್ ಶರ್ಮಾ ಬಳಗ ಮುಂಬರುವ ಏಕದಿನ ಸರಣಿಯಲ್ಲಿಯೂ ಕೂಡ ಇಂಗ್ಲೆಂಡ್ ತಂಡವನ್ನು ಸೋಲಿಸಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸುವತ್ತ ಕಣ್ಣಿಟ್ಟಿದ್ದರೆ, ತವರಿನಲ್ಲಿ ಸೋತು ಮುಖಭಂಗ ಅನುಭವಿಸಿರುವ ಇಂಗ್ಲೆಂಡ್ ಏಕದಿನ ಸರಣಿಯನ್ನು ಗೆದ್ದು ಪುಟಿದೇಳುವ ಯೋಜನೆಯಲ್ಲಿದೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ಜರುಗಲಿದ್ದು, ಪ್ರಥಮ ಪಂದ್ಯ ಇಂದು ( ಜುಲೈ 12 ) ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 5.30ಕ್ಕೆ ಆರಂಭಗೊಳ್ಳಲಿದೆ.
ಇನ್ನು ಇತ್ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಗಿಂತ ಏಕದಿನ ಸರಣಿಗೆ ಪ್ರಕಟವಾಗಿರುವ ತಂಡಗಳು ಸಾಕಷ್ಟು ವಿಭಿನ್ನವಾದ ಆಟಗಾರರಿಂದ ಕೂಡಿದ್ದು, ಪ್ರಥಮ ಪಂದ್ಯದಲ್ಲಿ ಇತ್ತಂಡಗಳ ಆಟಗಾರರು ನಿರ್ಮಿಸಬಹುದಾದ ಮೈಲಿಗಲ್ಲುಗಳ ಪಟ್ಟಿ ಕೆಳಕಂಡಂತಿದೆ ಓದಿ.

ಈ ಮೈಲಿಗಲ್ಲುಗಳತ್ತ ರೋಹಿತ್ ಶರ್ಮಾ ಕಣ್ಣು
• 9283 ಅಂತರರಾಷ್ಟ್ರೀಯ ಏಕದಿನ ರನ್ ಕಲೆಹಾಕಿರುವ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 96 ರನ್ ಕಲೆಹಾಕಿದರೆ 9378 ರನ್ ಬಾರಿಸಿರುವ ಮಹಮ್ಮದ್ ಅಜರುದ್ದೀನ್ ಅವರನ್ನು ಹಿಂದಿಕ್ಕಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ಅಂತರರಾಷ್ಟ್ರೀಯ ಏಕದಿನ ರನ್ ಬಾರಿಸಿರುವ ಆಟಗಾರರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿಕೆ ಕಾಣಲಿದ್ದಾರೆ.
• 845 ಬೌಂಡರಿಗಳನ್ನು ( 4 ) ಬಾರಿಸಿರುವ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 5 ಬೌಂಡರಿ ಬಾರಿಸಿದರೆ 850 ಏಕದಿನ ಬೌಂಡರಿಗಳನ್ನು ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• 245 ಸಿಕ್ಸರ್ ಬಾರಿಸಿರುವ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 5 ಸಿಕ್ಸರ್ ಬಾರಿಸಿದರೆ 250 ಏಕದಿನ ಸಿಕ್ಸರ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ವಿದೇಶಿ ನೆಲದಲ್ಲಿ ಒಟ್ಟು 99 ಏಕದಿನ ಇನ್ನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 100ನೇ ವಿದೇಶಿ ಏಕದಿನ ಇನ್ನಿಂಗ್ಸ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಇನ್ನಿತರ ಟೀಮ್ ಇಂಡಿಯಾ ಆಟಗಾರರು ಮುಟ್ಟಬಹುದಾದ ಮೈಲಿಗಲ್ಲುಗಳು
• ಇಲ್ಲಿಯವರೆಗೂ 149 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ಶಿಖರ್ ಧವನ್ ಈ ಪಂದ್ಯದ ಮೂಲಕ 150ನೇ ಏಕದಿನ ಪಂದ್ಯವನ್ನಾಡಲಿದ್ದಾರೆ.
• 947 ಏಕದಿನ ರನ್ ಕಲೆಹಾಕಿರುವ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ 53 ರನ್ ಕಲೆಹಾಕಿದರೆ 1000 ಅಂತರರಾಷ್ಟ್ರೀಯ ಏಕದಿನ ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• 49 ಏಕದಿನ ಸಿಕ್ಸರ್ ಬಾರಿಸಿರುವ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ಇನ್ನೊಂದು ಸಿಕ್ಸರ್ ಬಾರಿಸಿದರೆ 50 ಅಂತರರಾಷ್ಟ್ರೀಯ ಏಕದಿನ ಸಿಕ್ಸರ್ ಬಾರಿಸಿದ ಮೈಲಿಗಲ್ಲು ಮುಟ್ಟಲಿದ್ದಾರೆ.
• 148 ಏಕದಿನ ವಿಕೆಟ್ ಪಡೆದಿರುವ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ 2 ವಿಕೆಟ್ ಪಡೆದರೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ 150 ವಿಕೆಟ್ ಪಡೆದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• 93 ಏಕದಿನ ಬೌಂಡರಿಗಳನ್ನು ಬಾರಿಸಿರುವ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ 7 ಬೌಂಡರಿ ಬಾರಿಸಿದರೆ 100 ಏಕದಿನ ಬೌಂಡರಿಗಳನ್ನು ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಶ್ರೇಯಸ್ ಅಯ್ಯರ್ ರೀತಿ ಹಾರ್ದಿಕ್ ಪಾಂಡ್ಯ ಕೂಡ 93 ಏಕದಿನ ಬೌಂಡರಿಗಳನ್ನು ಬಾರಿಸಿದ್ದು ಈ ಪಂದ್ಯದಲ್ಲಿ 7 ಬೌಂಡರಿ ಬಾರಿಸಿದರೆ 100 ಅಂತರರಾಷ್ಟ್ರೀಯ ಏಕದಿನ ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• 45 ಏಕದಿನ ವಿಕೆಟ್ ಪಡೆದಿರುವ ಅಕ್ಷರ್ ಪಟೇಲ್ ಈ ಪಂದ್ಯದಲ್ಲಿ 5 ವಿಕೆಟ್ ಪಡೆದರೆ 50 ಅಂತರರಾಷ್ಟ್ರೀಯ ಏಕದಿನ ವಿಕೆಟ್ ಪಡೆದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಈ ಮೈಲಿಗಲ್ಲುಗಳತ್ತ ಆಂಗ್ಲರ ಚಿತ್ತ
ಇಂಗ್ಲೆಂಡ್ ತಂಡದ ಆಟಗಾರರು ಈ ಕೆಳಕಂಡ ಮೈಲಿಗಲ್ಲುಗಳನ್ನು ನಿರ್ಮಿಸುವತ್ತ ಚಿತ್ತ ನೆಟ್ಟಿದ್ದಾರೆ
• ಎಲ್ಲಾ ಮಾದರಿಯ ಕ್ರಿಕೆಟ್ ಸೇರಿದಂತೆ ಒಟ್ಟು 299 ಪಂದ್ಯಗಳನ್ನಾಡಿರುವ ಜೋಸ್ ಬಟ್ಲರ್ ಈ ಪಂದ್ಯದಲ್ಲಿ ಕಣಕ್ಕಿಳಿದರೆ 300 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• 491 ಏಕದಿನ ಬೌಂಡರಿಗಳನ್ನು ( 4 ) ಬಾರಿಸಿರುವ ಜೋ ರೂಟ್ ಈ ಪಂದ್ಯದಲ್ಲಿ 9 ಬೌಂಡರಿ ಬಾರಿಸಿದರೆ 500 ಏಕದಿನ ಬೌಂಡರಿಗಳನ್ನು ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• 3498 ಏಕದಿನ ರನ್ ಬಾರಿಸಿರುವ ಜಾನಿ ಬೈರ್ ಸ್ಟೋವ್ ಈ ಪಂದ್ಯದಲ್ಲಿ 2 ರನ್ ಕಲೆಹಾಕಿದರೆ 3500 ಏಕದಿನ ರನ್ ಪೂರೈಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications