For Quick Alerts
ALLOW NOTIFICATIONS  
For Daily Alerts
 

IND vs ENG: ವೆಸ್ಟ್ ಇಂಡೀಸ್ ಪ್ರವಾಸದಿಂದ ಫೇಲ್, ಫೇಲ್; ನಂಬಿಕೆ ಕಳೆದುಕೊಂಡ ಶುಭ್ಮನ್ ಗಿಲ್!

ಭಾನುವಾರ, ಜನವರಿ 28ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್‌ನ 4ನೇ ಇನ್ನಿಂಗ್ಸ್‌ನಲ್ಲಿ ಡಕ್‌ಗೆ ಔಟಾಗುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ತಾರೆ ಎನ್ನಲಾಗುವ ಶುಭ್ಮನ್ ಗಿಲ್ ಮತ್ತೊಂದು ವೈಫಲ್ಯ ಅನುಭವಿಸಿದರು.

ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಅವರಿಗೆ ಟೆಸ್ಟ್‌ ತಂಡದಲ್ಲಿ 3ನೇ ಕ್ರಮಾಂಕ ಪಡೆದ ಶುಭ್ಮನ್ ಗಿಲ್, ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಹಂತದಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದಾರೆ. ಇದು ಭಾರತ ತಂಡದಲ್ಲಿ ಅವರ ಆಯ್ಕೆಯನ್ನು ಪ್ರಶ್ನಿಸುವಂತೆ ಮಾಡಿದೆ.

IND vs ENG 1st Test: Shubman Gill Out for Duck in Indias 2nd Innings Against England

ಮೊದಲ ಟೆಸ್ಟ್ ಪಂದ್ಯದ 4ನೇ ದಿನದಂದು ಇಂಗ್ಲೆಂಡ್ ತಂಡವು ಆತಿಥೇಯ ಭಾರತ ತಂಡಕ್ಕೆ ಗೆಲ್ಲಲು 231 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಭಾರತದ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 42 ರನ್‌ಗಳ ಜೊತೆಯಾಟದೊಂದಿಗೆ ತಂಡಕ್ಕೆ ಉತ್ತಮ ಆರಂಭ ನೀಡಿದರು.

ಆದರೆ, ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್‌ಗಳ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಟಾಮ್ ಹಾರ್ಟ್ಲಿ ಔಟ್ ಮಾಡುವಲ್ಲಿ ಯಶಸ್ವಿಯಾದರು.

22 ವರ್ಷದ ಬ್ಯಾಟರ್ 4ನೇ ಇನಿಂಗ್ಸ್‌ನ 12ನೇ ಓವರ್‌ನಲ್ಲಿ ಕೇವಲ 15 ರನ್‌ ಗಳಿಸಿ ದೊಡ್ಡ ಶಾಟ್ ಬಾರಿಸಲು ಹೋಗಿ ಔಟಾದರು. ಶಾರ್ಟ್ ಫೈನ್ ಲೆಗ್‌ನಲ್ಲಿ ಶತಕವೀರ ಓಲ್ಲಿ ಪೋಪ್ ಹಿಡಿದ ಅತ್ಯುತ್ತಮ ರಿಫ್ಲೆಕ್ಸ್ ಕ್ಯಾಚ್‌ಗೆ ಔಟಾದರು.

ನಂತರ ಬಂದ ಶುಭ್ಮನ್ ಗಿಲ್ ಒಂದು ಬಾಲ್‌ನ ನಂತರ, ಟಾಮ್ ಹಾರ್ಟ್ಲಿ ಅವರು ಡಕ್‌ಗೆ ಔಟ್ ಮಾಡಿದರು ಮತ್ತು ಮತ್ತೊಮ್ಮೆ ಸಿಲ್ಲಿ ಪಾಯಿಂಟ್‌ನಲ್ಲಿ ಇಂಗ್ಲೆಂಡ್‌ನ ಉಪನಾಯಕ ಒಲ್ಲಿ ಪೋಪ್ ಅವರು ಕ್ಯಾಚ್ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲೂ ವಿಫಲವಾಗಿದ್ದ ಶುಭ್ಮನ್ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲೂ ನಿರಾಸೆ ಮೂಡಿಸಿದರು.

18ನೇ ಓವರ್‌ನ ಕೊನೆಯ ಎಸೆತದಲ್ಲಿ ಎಡಗೈ ಸ್ಪಿನ್ನರ್‌ ಟಾಮ್ ಹಾರ್ಟ್ಲಿ ಎಸೆತದಲ್ಲಿ ಭಾರತದ ನಾಯಕ ಎಲ್‌ಬಿಡಬ್ಲ್ಯೂ ಆಗಿ ಔಟಾದರು. ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಟಾಮ್ ಹಾರ್ಟ್ಲಿ ಅವರು ಭಾರತದ ಅಗ್ರ 3 ಬ್ಯಾಟರ್‌ಗಳನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು.

IND vs ENG 1st Test: Shubman Gill Out for Duck in Indias 2nd Innings Against England

3ನೇ ಕ್ರಮಾಂಕದಲ್ಲಿ ಶುಭ್ಮನ್ ಗಿಲ್ ಫೇಲ್

ಭಾರತ ವಿರುದ್ಧ ತಮ್ಮ 2ನೇ ಇನ್ನಿಂಗ್ಸ್‌ನಲ್ಲಿ 196 ರನ್ ಗಳಿಸಿದ ಇಂಗ್ಲೆಂಡ್ ಬ್ಯಾಟರ್ ಒಲ್ಲಿ ಪೋಪ್ ಮತ್ತು ಭಾರತದ ಅಗ್ರ ಮೂರು ವಿಕೆಟ್ ಪಡೆದ ಟಾಮ್ ಹಾರ್ಟ್ಲಿ ಅವರು ಭಾನುವಾರ ಸಂತೋಷಪಟ್ಟರೆ, ಬ್ಯಾಟಿಂಗ್‌ನಲ್ಲಿ ಶುಭ್ಮನ್ ಗಿಲ್‌ನ ನಿರಾಶೆ ಮುಂದುವರೆಯಿತು.

ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಶುಭ್ಮನ್ ಗಿಲ್ 23 ರನ್‌ಗಳಿಗೆ ಔಟಾದರು ಮತ್ತು ಟಾಮ್ ಹಾರ್ಟ್ಲಿಯ ಮೊದಲ ಟೆಸ್ಟ್ ವಿಕೆಟ್ ಆದರು. ಬ್ಯಾಟರ್‌ನ ಶಾಟ್ ಆಯ್ಕೆಯು ಭಾರತೀಯ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರನ್ನು ಕೆರಳಿಸಿದೆ.

ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದಿಂದ ಶುಭ್ಮನ್ ಗಿಲ್ 3ನೇ ಕ್ರಮಾಂಕವನ್ನು ಪಡೆದರು ಮತ್ತು ಅಲ್ಲಿಂದೀಚೆಗೆ ಒಂದೇ ಒಂದು 50 ಪ್ಲಸ್ ಸ್ಕೋರ್ ಕೂಡ ಗಳಿಸಿಲ್ಲ. ಶುಭ್ಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧದ 2 ಟೆಸ್ಟ್‌ ಪಂದ್ಯಗಳಲ್ಲಿ 74 ರನ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್‌ ಪಂದ್ಯಗಳಲ್ಲಿ 45 ರನ್ ಗಳಿಸಿದರು.

ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ, ಭಾರತ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಶುಭ್ಮನ್ ಗಿಲ್ ದೊಡ್ಡ ಮೊತ್ತ ಗಳಿಸುವುದಾಗಿ ಅನೇಕ ಕ್ರಿಕೆಟ್ ಪರಿಣತರು ಅಭಿಪ್ರಾಯಪಟ್ಟಿದ್ದರು. ಇದೀಗ ಅವರ ಕಡಿಮೆ ಸ್ಕೋರ್‌ಗಳ ಸರಮಾಲೆಯು ಪರಿಶೀಲನೆಗೆ ಒಳಗಾಗಿದೆ.

ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರನ್ ಗಳಿಸಲು ಶುಭ್ಮನ್ ಗಿಲ್ ಅವರಲ್ಲಿ ವಿಶ್ವಾಸವನ್ನು ತೋರಿಸಿದ್ದರು. ಆದರೆ 24 ವರ್ಷದ ಆಟಗಾರ ಮೊದಲನೇ ಟೆಸ್ಟ್‌ನ 2 ಇನ್ನಿಂಗ್ಸ್‌ಗಳಲ್ಲಿ ಕೇವಲ 23 ರನ್ ಗಳಿಸಲು ಸಾಧ್ಯವಾಗಿದೆ.

Story first published: Sunday, January 28, 2024, 17:09 [IST]
Other articles published on Jan 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+