ಭಾರತಕ್ಕೆ ಇಂಗ್ಲೆಂಡ್ ಪ್ರವಾಸ: ಸುದೀರ್ಘ ಸರಣಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟ

ಮುಂದಿನ ಫೆಬ್ರವರಿ ತಿಂಗಳಿನಿಂದ ಭಾರತ ಇಂಗ್ಲೆಂಡ್ ವಿರುದ್ಧ ಸುದೀರ್ಘ ಸರಣಿಗೆ ಸಾಕ್ಷಿಯಾಗಲಿದೆ. ಟೆಸ್ಟ್ ಟಿ20 ಹಾಗೂ ಏಕದಿನ ಪಂದ್ಯಗಳ ಸಂಪೂರ್ಣ ಸರಣಿ ಇದಾಗಿದೆ. ಈ ಸರಣಿಯ ಮೂಲಕ ಭಾರತದಲ್ಲಿ ಸುದೀರ್ಘ ಒಂದು ವರ್ಷದ ಬಳಿಕ ಮತ್ತೆ ಕ್ರಿಕೆಟ್ ಆರಂಭವಾಗಲಿದೆ. ಫೆಬ್ರವರಿ 5 ರಿಂದ ಈ ಸರಣಿಗೆ ಚಾಲನೆ ದೊರೆಯಲಿದೆ. ಬಿಸಿಸಿಐ ಹಾಗೂ ಇಸಿಬಿ ಈ ಮಹತ್ವದ ಸರಣಿಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಘೋಷಿಸಿದೆ.
ಇಂಗ್ಲೆಂಡ್ ವಿರುದ್ಧದ ಈ ಮಹತ್ವದ ಸರಣಿ ಟೆಸ್ಟ್ ಸರಣಿಯ ಮೂಲಕ ಆರಂಭವಾಗಲಿದೆ. ಫೆಬ್ರವರಿ 5 ರಂದು ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಎರಡು ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದ್ದು ಉಳಿದ ಎರಡು ಟೆಸ್ಟ್ ಪಂದ್ಯಗಳು ಹೊಸದಾಗಿ ನಿರ್ಮಾಣವಾಗಿರುವ ಅಹ್ಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಟೆಸ್ಟ್ ಸರಣಿ ಫೆಬ್ರವರಿ 4 ರಿಂ ಆರಂಭವಾದರೆ ಅದಾದ ಬಳಿಕ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಟಿ20 ಸರಣಿಯ ಮುಕ್ತಾಯದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮೂರು ಮಾದರಿಯ ಕ್ರಿಕೆಟ್‌ಗಳು ಕೇವಲ ಮೂರು ಕ್ರೀಡಾಂಗಣಗಳಲ್ಲಿ ಆಯೋಜನೆಯಾಗಲಿದೆ.

ಟೆಸ್ಟ್ ಸರಣಿಯ ಪಂದ್ಯ ದಿನಾಂಕ ಹಾಗೂ ಸ್ಥಳ
ಮೊದಲ ಟೆಸ್ಟ್ ಫೆಬ್ರವರಿ 5ರಿಂದ 9, ಸ್ಥಳ: ಚೆನ್ನೈ
ಎರಡನೇ ಟೆಸ್ಟ್ ಫೆಬ್ರವರಿ 13 ರಿಂದ 17 ಸ್ಥಳ: ಚೆನ್ನೈ
ಮೂರನೇ ಟೆಸ್ಟ್ ಫೆಬ್ರವರಿ 3 ನೇ ಟೆಸ್ಟ್ (ಡೇ/ನೈಟ್) ಸ್ಥಳ: ಅಹಮದಾಬಾದ್
ನಾಲ್ಕನೇ ಟೆಸ್ಟ್ ಮಾರ್ಚ್ 4 ರಿಂದ 8, ಸ್ಥಳ: ಅಹಮದಾಬಾದ್

ಟಿ20 ಸರಣಿಯ ಪಂದ್ಯ ದಿನಾಂಕ ಹಾಗೂ ಸ್ಥಳ
ಮೊದಲ ಟಿ20 ಪಂದ್ಯ ಮಾರ್ಚ್ 12, ಸ್ಥಳ: ಅಹ್ಮದಾಬಾದ್
ಎರಡನೇ ಟಿ20 ಪಂದ್ಯ ಮಾರ್ಚ್ 14, ಸ್ಥಳ: ಅಹ್ಮದಾಬಾದ್
ಮೂರನೇ ಟಿ20 ಪಂದ್ಯ ಮಾರ್ಚ್ 16, ಸ್ಥಳ: ಅಹ್ಮದಾಬಾದ್
ನಾಲ್ಕನೇ ಟಿ20 ಪಂದ್ಯ ಮಾರ್ಚ್ 18, ಸ್ಥಳ: ಅಹ್ಮದಾಬಾದ್
ಐದನೇ ಟಿ20 ಪಂದ್ಯ ಮಾರ್ಚ್ 20, ಸ್ಥಳ: ಅಹ್ಮದಾಬಾದ್

ಏಕದಿನ ಸರಣಿಯ ಪಂದ್ಯ ದಿನಾಂಕ ಹಾಗೂ ಸ್ಥಳ
ಮೊದಲ ಏಕದಿನ ಪಂದ್ಯ ಮಾರ್ಚ್ 23, ಸ್ಥಳ: ಪುಣೆ
ಎರಡನೇ ಏಕದಿನ ಪಂದ್ಯ ಮಾರ್ಚ್ 26, ಸ್ಥಳ: ಪುಣೆ
ಮೂರನೇ ಏಕದಿನ ಪಂದ್ಯ ಮಾರ್ಚ್ 28, ಸ್ಥಳ: ಪುಣೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications