Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ರಾಹುಲ್ ದ್ರಾವಿಡ್ ದಾಖಲೆಯ ಮೇಲೆ ವಿರಾಟ್‌ ಕಣ್ಣು

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ಕಾರ್ಡಿಫ್‌ನಲ್ಲಿ ಗುರುವಾರ ನಡೆಯಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಪರ ಸೂಪರ್ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಇವರು ಮೊದಲ ಏಕದಿನ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾಗಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್‌ 4 ರನ್‌ ಬಾರಿಸುತ್ತಲೇ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ.

ವಿರಾಟ್‌ ಕೊಹ್ಲಿ ಆರು ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಅಂಗಳಕ್ಕೆ ಇಳಿದಿದ್ದಾರೆ. ಆದರೆ ಇವರು ಇಂಗ್ಲೆಂಡ್ ಪ್ರವಾಸದಲ್ಲಿ ಆಡಲಾದ ಮೊದಲ ಪಂದ್ಯದಲ್ಲಿ 6 ಎಸೆತಗಳನ್ನು ಎದುರಿಸಿ 5 ರನ್‌ ಬಾರಿಸಿ ಔಟ್ ಆಗಿದ್ದರು. ಇವರು ಈಗ ಎರಡನೇ ಏಕದಿನ ಪಂದ್ಯದಲ್ಲಿ ಬಿಗ್ ಇನಿಂಗ್ಸ್‌ ಕಟ್ಟುವ ಯೋಜನೆಯನ್ನು ರೂಪಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಇವರು 4 ರನ್‌ ಬಾರಿಸುತ್ತಲೇ ಭಾರತದ ದಿಗ್ಗಜ ಬ್ಯಾಟರ್‌ ರಾಹುಲ್ ದ್ರಾವಿಡ್‌ ಅವರ ದೊಡ್ಡ ದಾಖಲೆಯನ್ನು ಅಳಿಸುವ ಕನಸಿನಲ್ಲಿದ್ದಾರೆ.

Virat Kohli

ದೊಡ್ಡ ದಾಖಲೆಯ ಮೇಲೆ ವಿರಾಟ್ ಕಣ್ಣು

ವಿರಾಟ್‌ ಕೊಹ್ಲಿ ಅವರು ಇಂಗ್ಲೆಂಡ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ವರೆಗೆ ಇವರು ಮೂರು ಫಾರ್ಮೆಟ್‌ಗಳಲ್ಲಿ ಬ್ಯಾಟ್ ಮಾಡಿ 2642 ರನ್‌ ಕಲೆ ಹಾಕಿದ್ದಾರೆ. ಇನ್ನು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ ರಾಹುಲ್ ದ್ರಾವಿಡ್ 1996 ರಿಂದ 2011 ರ ವರೆಗೆ ಒಟ್ಟು 46 ಪಂದ್ಯಗಳ 56 ಇನಿಂಗ್ಸ್‌ಗಳಲ್ಲಿ 2645 ರನ್‌ ಬಾರಿಸಿದ್ದಾರೆ. ಕಾರ್ಡಿಫ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್‌ 4 ರನ್‌ ಬಾರಿಸುತ್ತಿದ್ದಂತೆ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.

IND vs ENG ODI: ವಿರಾಟ್‌, ರೋಹಿತ್‌ ರನ್‌ ಕಲೆ ಹಾಕುವಲ್ಲಿ ಫೇಲ್‌

IND vs ENG ODI: ವಿರಾಟ್‌, ರೋಹಿತ್‌ ರನ್‌ ಕಲೆ ಹಾಕುವಲ್ಲಿ ಫೇಲ್‌

ವಿರಾಟ್‌ ಕೊಹ್ಲಿ ಈ ವರೆಗೆ ಇಂಗ್ಲೆಂಡ್‌ನಲ್ಲಿ ಆಡಿದ 58 ಪಂದ್ಯಗಳ 74 ಇನಿಂಗ್ಸ್‌ಗಳಲ್ಲಿ 2642 ರನ್‌ ಸಿಡಿಸಿದ್ದಾರೆ. ಈ ವೇಳೆ ವಿರಾಟ್‌ ಟೆಸ್ಟ್‌ನಲ್ಲಿ 1096 ರನ್, ಏಕದಿನ ಕ್ರಿಕೆಟ್‌ನಲ್ಲಿ 1354 ರನ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ 192 ರನ್‌ ಬಾರಿಸಿದ್ದಾರೆ.

ಇಂಗ್ಲೆಂಡ್‌ ನೆಲದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟರ್‌ಗಳು

ರಾಹುಲ್ ದ್ರಾವಿಡ್‌, 2645 ರನ್
ವಿರಾಟ್‌ ಕೊಹ್ಲಿ, 2642 ರನ್‌
ಸಚಿನ್ ತೆಂಡೂಲ್ಕರ್‌, 2626 ರನ್‌
ರೋಹಿತ್ ಶರ್ಮಾ, 2298 ರನ್‌

ಇಂಗ್ಲೆಂಡ್‌ನಲ್ಲಿ ವಿರಾಟ್‌ ಕೊಹ್ಲಿ ಯಶಸ್ಸು ಕಂಡಿದ್ದು ಹೇಗೆ? ಸಿಕ್ರೇಟ್‌ ರಿವೀಲ್ ಮಾಡಿದ ಸಂಜಯ್ ಬಂಗಾರ್

ಇಂಗ್ಲೆಂಡ್‌ನಲ್ಲಿ ವಿರಾಟ್‌ ಕೊಹ್ಲಿ ಯಶಸ್ಸು ಕಂಡಿದ್ದು ಹೇಗೆ? ಸಿಕ್ರೇಟ್‌ ರಿವೀಲ್ ಮಾಡಿದ ಸಂಜಯ್ ಬಂಗಾರ್

ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸರಣಿಯನ್ನು ಇನ್ನು ಒಂದು ಪಂದ್ಯ ಬಾಕಿ ಇರುವಂತೆ ಜಯ ಸಾಧಿಸುವ ಆಸೆ ಭಾರತ ತಂಡದ್ದಾಗಿದೆ. ಇನ್ನು ಟೀಮ್ ಇಂಡಿಯಾದ ನಾಯಕ ಶುಭಮನ್‌ ಗಿಲ್‌ ಮೊದಲ ಏಕದಿನ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಗುರುವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಇವರು ಆಡಲು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಭಾರತ ಮತ್ತೊಂದು ಗೆಲುವು ದಾಖಲಿಸವು ಕನಸು ಹೊಂದಿದೆ.

Story first published: Wednesday, July 15, 2026, 23:39 [IST]
Other articles published on Jul 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+