ಟಿ20 ಕ್ರಿಕೆಟ್‌ನಲ್ಲಿ ಭಾರತದ ಯಾವುದೇ ಸ್ಪಿನ್ ಬೌಲರ್ ಮಾಡದ ದಾಖಲೆ ಬರೆದ ಅಕ್ಷರ್ ಪಟೇಲ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟಿ20 ಪಂದ್ಯ ಶನಿವಾರ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್‌ಗಳಿಂದ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಅತಿಥೇಯ ಇಂಗ್ಲೆಂಡ್ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಶ್ರೇಯಸ್ ಪಡೆ ಸೋಲು ಕಂಡರೂ ಸಹ ಆಲ್‌ರೌಂಡರ್ ಅಕ್ಷರ್ ಪಟೇಲ್ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.
ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 190 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ 19 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 191 ರನ್ ಸೇರಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಭಾರತದ ಪರ ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದು ಸಾಧನೆ ಮಾಡಿದರು.

ಭರವಸೆಯ ಬೌಲರ್ ಅಕ್ಷರ್ ಪಟೇಲ್ ಇನಿಂಗ್ಸ್‌ನ 5ನೇ ಓವರ್ ಬೌಲ್ ಮಾಡಲು ಮುಂದಾದರು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರಿಗೆ ಅಕ್ಷರ್ ಖೆಡ್ಡಾ ತೋಡಿದರು. ಅಸಲಿಗೆ ಇದನ್ನು ಫೀಲ್ಡ್ ಅಂಪೈರ್ ನಾಟೌಟ್ ಎಂದು ತಿಳಿಸಿದ್ದರು. ಆದರೆ ಭಾರತ ಮೇಲ್ಮನವಿ ಸಲ್ಲಿಸಿ ಡಿಆರ್‌ಎಸ್ ಪಡೆಯಿತು. ಟಿವಿ ಅಂಪೈರ್ ಮರು ಪರಿಶೀಲನೆ ನಡೆಸಿ ಔಟ್ ಎಂದು ತಿಳಿಸಿದರು. ಭಾರತದ ಪಾಳಯದಲ್ಲಿ ಸಂತಸ ಮನೆ ಮಾಡಿತ್ತು. ಅಲ್ಲದೆ ಅಕ್ಷರ್ ಪಟೇಲ್ ಸಹ ಫುಲ್ ಖುಷ್ ಆದರು.
ಅಕ್ಷರ್ ಸಾಧನೆ
ಟೀಮ್ ಇಂಡಿಯಾದ ಪರ ಮೂರು ಸ್ವರೂಪಗಳಲ್ಲಿ ಆಡುವ ಅಕ್ಷರ್ ಪಟೇಲ್ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಯಾವೊಬ್ಬ ಬೌಲರ್ ಮಾಡದ ಸಾಧನೆಯನ್ನು ಮಾಡಿದರು. ಇವರು ತಮ್ಮ 98ನೇ ಟಿ20 ಪಂದ್ಯದಲ್ಲಿ 100 ವಿಕೆಟ್ ಪಡೆದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬೌಲರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಇವರಿಗಿಂತಲೂ ಮೊದಲು ಈ ಸಾಧನೆಯನ್ನು ಭಾರತದ ಪರ ಯಾವೊಬ್ಬ ಸ್ಪಿನ್ ಬೌಲರ್ ಮಾಡಿರಲಿಲ್ಲ.
ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ 100ಕ್ಕೂ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
ಅರ್ಷದೀಪ್ ಸಿಂಗ್, 88 ಪಂದ್ಯ, 134 ವಿಕೆಟ್
ಜಸ್ಪ್ರೀತ್ ಬುಮ್ರಾ, 95 ಪಂದ್ಯ, 121 ವಿಕೆಟ್
ಹಾರ್ದಿಕ್ ಪಾಂಡ್ಯ, 138 ಪಂದ್ಯ, 114 ವಿಕೆಟ್
ಅಕ್ಷರ್ ಪಟೇಲ್, 98 ಪಂದ್ಯ, 100 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications