ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಭಾರತೀಯರನ್ನು ಕೆಣಕಿದರೆ ಇದೇ ಗತಿ'; ಆಂಗ್ಲರಿಗೆ ಎಚ್ಚರಿಕೆ ರವಾನಿಸಿದ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ!

Ind vs Eng 2nd test: Dont provoke team India they are very very strong says Michael Vaughan

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು 151 ರನ್‌ಗಳಿಂದ ಸೋಲಿಸುವುದರ ಮೂಲಕ ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ.

ಭಾರತ vs ಇಂಗ್ಲೆಂಡ್: ಜೋ ರೂಟ್ ಮಾಡಿದ ಈ 3 ತಪ್ಪುಗಳಿಂದ ಭಾರತದ ಗೆಲುವು ಸುಲಭವಾಯಿತು!ಭಾರತ vs ಇಂಗ್ಲೆಂಡ್: ಜೋ ರೂಟ್ ಮಾಡಿದ ಈ 3 ತಪ್ಪುಗಳಿಂದ ಭಾರತದ ಗೆಲುವು ಸುಲಭವಾಯಿತು!

ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಐದನೇ ದಿನದವರೆಗೂ ಇಂಗ್ಲೆಂಡ್ ತಂಡ ಗೆಲ್ಲಲಿದೆ ಎಂದೇ ಹೇಳಲಾಗುತ್ತಿತ್ತು. ಅದರಲ್ಲಿಯೂ ಐದನೇ ದಿನ ಆರಂಭವಾದಾಗ ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಔಟ್ ಆದ ನಂತರ ಈ ಪಂದ್ಯವನ್ನು ಖಂಡಿತವಾಗಿಯೂ ಇಂಗ್ಲೆಂಡ್ ಗೆಲ್ಲಲಿದೆ ಎಂದು ಕ್ರೀಡಾಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸತೊಡಗಿದರು. ಆದರೆ ಒಂಬತ್ತನೇ ವಿಕೆಟ್‍ಗೆ ಜೊತೆಯಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ 89 ರನ್‌ಗಳ ಜತೆಯಾಟವಾಡುವ ಮೂಲಕ ಟೀಮ್ ಇಂಡಿಯಾವನ್ನು ಸೋಲಿನ ಸುಳಿಯಿಂದ ಪಾರುಮಾಡಿದರು.

ಹೀಗೆ ಅತ್ಯದ್ಬುತ ಜತೆಯಾಟವಾಡಿದ ಬುಮ್ರಾ ಮತ್ತು ಮೊಹಮ್ಮದ್ ಶಮಿ ಜೋಡಿ ಭಾರತ ತಂಡದ ಪಾಲಿನ ಆಪದ್ಬಾಂಧವರಾಗಿ ನಿಂತರು. ಇನ್ನು ಭಾರತ ನೀಡಿದ 272 ರನ್‌ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಭಾರತೀಯ ಬೌಲರ್‌ಗಳ ದಾಳಿಗೆ ಅಕ್ಷರಶಃ ನಲುಗಿ ಹೋದರು. ಪಂದ್ಯ ಗೆಲ್ಲಲಿದ್ದಾರೆ ಎಂದು ಹೇಳಲಾಗುತ್ತಿದ್ದ ಇಂಗ್ಲೆಂಡ್ ತಂಡ 120 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಭಾರತದ ಎದುರು 151 ರನ್‌ಗಳ ಅಂತರದಿಂದ ಸೋಲನುಭವಿಸಿತು.

'ಅವರಿಗೂ ನಮಗೂ ವ್ಯತ್ಯಾಸವಿದೆ'; ಸೋತ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಜೋ ರೂಟ್!'ಅವರಿಗೂ ನಮಗೂ ವ್ಯತ್ಯಾಸವಿದೆ'; ಸೋತ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಜೋ ರೂಟ್!

ಹೀಗೆ ಸೋಲುವ ಹಂತದಲ್ಲಿದ್ದ ಟೀಮ್ ಇಂಡಿಯಾ ಆಂಗ್ಲರ ಮೇಲೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಹಿಡಿತ ಸಾಧಿಸಿ ಎರಡನೇ ಟೆಸ್ಟ್ ಪಂದ್ಯವನ್ನು ತನ್ನ ಕೈವಶ ಮಾಡಿಕೊಂಡಿದೆ. ಭಾರತ ತಂಡ ಸಿಡಿದೆದ್ದ ಪರಿಯ ಕುರಿತು ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್ ವಾನ್ 'ಭಾರತ ತಂಡವನ್ನು ಪ್ರಚೋದಿಸಬೇಡಿ, ಅವರ ತಂಡ ತುಂಬಾ ತುಂಬಾ ಶಕ್ತಿಶಾಲಿ' ಎಂದು ಆಂಗ್ಲರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಆಂಗ್ಲರಿಗೆ ಎಚ್ಚರಿಕೆ ನೀಡಿ ಹೇಳಿದ ಮಾತುಗಳು ಈ ಕೆಳಕಂಡಂತಿವೆ..

ಬೆಂಕಿಯನ್ನು ಪ್ರಚೋದಿಸುವ ಅಗತ್ಯವಿಲ್ಲ ಎಂದ ಮೈಕಲ್ ವಾನ್

ಬೆಂಕಿಯನ್ನು ಪ್ರಚೋದಿಸುವ ಅಗತ್ಯವಿಲ್ಲ ಎಂದ ಮೈಕಲ್ ವಾನ್

ಟೀಮ್ ಇಂಡಿಯಾ ತಂಟೆಗೆ ಹೋಗಬೇಡಿ ಎಂದು ಆಂಗ್ಲರಿಗೆ ಎಚ್ಚರಿಕೆಯನ್ನು ನೀಡಿರುವ ಮೈಕಲ್ ವಾನ್ ಪಂದ್ಯದ ವೇಳೆ ಟೀಮ್ ಇಂಡಿಯಾ ಆಟಗಾರರನ್ನು ಯಾವುದೇ ಕಾರಣಕ್ಕೂ ಪ್ರಚೋದಿಸಲು ಹೋಗಬೇಡಿ, ಟೀಮ್ ಇಂಡಿಯಾ ಆಟಗಾರರು ಬೆಂಕಿಯಿದ್ದಂತೆ ಅವರನ್ನು ಪ್ರಚೋದಿಸುವುದು ಅನಗತ್ಯ ಎಂದು ಮೈಕಲ್ ವಾನ್ ಎಚ್ಚರಿಕೆ ನೀಡಿದ್ದಾರೆ.

ಕೊಹ್ಲಿ ಮತ್ತು ರವಿ ಶಾಸ್ತ್ರಿ ಗರಡಿಯ ಹುಡುಗರು ತುಂಬಾ ಶಕ್ತಿಶಾಲಿ

ಕೊಹ್ಲಿ ಮತ್ತು ರವಿ ಶಾಸ್ತ್ರಿ ಗರಡಿಯ ಹುಡುಗರು ತುಂಬಾ ಶಕ್ತಿಶಾಲಿ

ಇನ್ನೂ ಮುಂದುವರೆದು ಮಾತನಾಡಿರುವ ಮೈಕಲ್ ವಾನ್ ಪ್ರಸ್ತುತ ಭಾರತ ತಂಡದ ಆಟಗಾರರು ತುಂಬಾ ಶಕ್ತಿಶಾಲಿಗಳು, ಈಗಿರುವ ಭಾರತ ತಂಡ ತುಂಬಾ ತುಂಬಾ ಶಕ್ತಿಶಾಲಿ, ಅವರು ಕೊಹ್ಲಿ ಮತ್ತು ರವಿ ಶಾಸ್ತ್ರಿ ನೇತೃತ್ವದಲ್ಲಿ ಪಳಗಿರುವ ಆಟಗಾರರು. ಅಂಥವರನ್ನು ಕೆಣಕಿ ಕೆಟ್ಟ ಪರಿಸ್ಥಿತಿ ನಿರ್ಮಿಸಿಕೊಳ್ಳುವುದು ಬೇಡ ಎಂದು ಮೈಕಲ್ ವಾನ್ ಎಚ್ಚರಿಸಿದ್ದಾರೆ.

ಭಾರತೀಯರನ್ನು ಆಗಸ್ಟ್ 15ರಂದು ಕೆಣಕಬೇಡಿ ಎಂದಿದ್ದ ವಾಸಿಮ್ ಜಾಫರ್

ಭಾರತೀಯರನ್ನು ಆಗಸ್ಟ್ 15ರಂದು ಕೆಣಕಬೇಡಿ ಎಂದಿದ್ದ ವಾಸಿಮ್ ಜಾಫರ್

ಇನ್ನು ಈ ಪಂದ್ಯದ ಕುರಿತು ಪ್ರತಿಕ್ರಿಯೆ ನೀಡಿದ್ದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಸ್ವಾತಂತ್ರ್ಯ ದಿನಾಚರಣೆಯ ದಿನ ಯಾವುದೇ ಕಾರಣಕ್ಕೂ ಭಾರತೀಯರನ್ನು ಕೆಣಕಬೇಡಿ ಕೆಣಕಿದರೆ ಅದರ ಫಲಿತಾಂಶ ಇದೇ ರೀತಿ ಇರುತ್ತದೆ ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು.

Story first published: Tuesday, August 17, 2021, 17:01 [IST]
Other articles published on Aug 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X