IND vs ENG: 2ನೇ ಟೆಸ್ಟ್ ಪಂದ್ಯದಿಂದ ರಾಹುಲ್-ಜಡೇಜಾ ಔಟ್; ಸರ್ಫರಾಜ್ ಸೇರಿದಂತೆ ಮೂವರ ಸೇರ್ಪಡೆ
ಫೆಬ್ರವರಿ 2ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಹೊರಗುಳಿದಿದ್ದಾರೆ.
ಇದೇ ವೇಳೆ ಬಿಸಿಸಿಐನ ಭಾರತ ಪುರುಷರ ಕ್ರಿಕೆಟ್ ಆಯ್ಕೆ ಸಮಿತಿಯು ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಇಂಗ್ಲೆಂಡ್ ವಿರುದ್ಧದ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿದೆ.
ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ 4ನೇ ದಿನದ ಆಟದಲ್ಲಿರವೀಂದ್ರ ಜಡೇಜಾ ಮಂಡಿರಜ್ಜು ಗಾಯಗೊಂಡರು. ಇನ್ನು ಕೆಎಲ್ ರಾಹುಲ್ ಬಲ ಕ್ವಾಡ್ರೈಸ್ಪ್ ನೋವಿನಿಂದ ಬಳಲುತ್ತಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡ ಇಬ್ಬರು ಆಟಗಾರರ ಪ್ರಗತಿಯನ್ನು ಗಮನಿಸುತ್ತಿದೆ.

ಭಾರತೀಯ ಪುರುಷರ ಆಯ್ಕೆ ಸಮಿತಿಯು ಸರ್ಫರಾಜ್ ಖಾನ್ ಮತ್ತು ಸೌರಭ್ ಕುಮಾರ್ ಅವರಿಗೆ ಚೊಚ್ಚಲ ಕರೆ ನೀಡಿದ್ದರೆ, ಮತ್ತೊಬ್ಬ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಂಡಿದೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್ ಅವರ ಕೆಲವು ವರ್ಷಗಳಿಂದ ಕಠಿಣವಾಗಿ ಪರಿಶ್ರಮಪಡುತ್ತಿದ್ದು, ಅಂತಿಮವಾಗಿ ಅವರ ಪರಿಶ್ರಮಕ್ಕೆ ಫಲ ನೀಡಿದೆ.
ಇನ್ನು ಫೆಬ್ರವರಿ 1ರಂದು ಅಹಮದಾಬಾದ್‌ನಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೂರನೇ ಮತ್ತು ಅಂತಿಮ ನಾಲ್ಕು-ದಿನದ ಪಂದ್ಯಕ್ಕಾಗಿ ಭಾರತ ಎ ತಂಡದಲ್ಲಿ ವಾಷಿಂಗ್ಟನ್ ಸುಂದರ್ ಬದಲಿಗೆ ಸರನ್ಶ್ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ.

ಅವೇಶ್ ಖಾನ್ ತಮ್ಮ ರಣಜಿ ಟ್ರೋಫಿ ತಂಡ, ಮಧ್ಯಪ್ರದೇಶ ತಂಡದೊಂದಿಗೆ ಪ್ರಯಾಣಿಸುವುದನ್ನು ಮುಂದುವರೆಸುತ್ತಾರೆ ಮತ್ತು ಅಗತ್ಯವಿದ್ದರೆ ಟೆಸ್ಟ್ ತಂಡವನ್ನು ಸೇರಿಕೊಳ್ಳುತ್ತಾರೆ.
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಭಾರತದ ನವೀಕರಿಸಿದ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications