IND vs ENG: ಸ್ಪಿನ್ ಸ್ನೇಹಿ ಪಿಚ್‌ನಲ್ಲೂ ಮೋಡಿ ಮಾಡಿದ ಯಾರ್ಕರ್ ಸ್ಪೆಷಲಿಸ್ಟ್ ಬೂಮ್ ಬೂಮ್ ಬುಮ್ರಾ
ಸೋಮವಾರ, ಜನವರಿ 5ರಂದು ವಿಶಾಖಪಟ್ಟಣದ ವೈಎಸ್ ರಾಜಶೇಖರ್ ರೆಡ್ಡಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಆತಿಥೇಯ ಭಾರತ ತಂಡ 106 ರನ್‌ಗಳ ಅಮೋಘ ಗೆಲುವು ಸಾಧಿಸಿ, ಸರಣಿಯಲ್ಲಿ 1-1 ಅಂತರದ ಸಮಬಲಗೊಳಿಸಿತು.
ಭಾರತ ತಂಡ ನೀಡಿದ್ದ 399 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಪಂದ್ಯದ ನಾಲ್ಕನೇ ದಿನದಂದು 69.2 ಓವರ್‌ಗಳಲ್ಲಿ 292 ರನ್‌ಗಳಿಗೆ ಸರ್ವಪತನ ಕಂಡಿತು. ತನ್ನ ಬಜ್‌ಬಾಲ್ ಶೈಲಿಯ ಬ್ಯಾಟಿಂಗ್ ಮೂಲಕ ಆಕ್ರಮಣಕಾರಿಯಾಗಿ ಹೊರಟಿದ್ದ ಇಂಗ್ಲೆಂಡ್ ತಂಡವನ್ನು ಭಾರತೀಯ ಬೌಲರ್‌ಗಳು ಕಟ್ಟಿಹಾಕಿದರು.

ಇದೇ ವೇಳೆ ಎರಡನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಜಸ್ಪ್ರೀತ್ ಬುಮ್ರಾ ತಮ್ಮ ಯಾರ್ಕರ್ ಬೌಲಿಂಗ್‌ಗೆ ಸ್ಫೂರ್ತಿಯಾದ ಬೌಲರ್‌ಗಳನ್ನು ಹೆಸರಿಸಿದ್ದಾರೆ.
ಭಾರತದ ಮಾಜಿ ವೇಗಿ ಜಹೀರ್ ಖಾನ್, ಪಾಕಿಸ್ತಾನ ವೇಗಿಗಳಾದ ವಾಸಿಂ ಅಕ್ರಮ್ ಮತ್ತು ವಕಾರ್ ಯೂನಿಸ್ ಅವರು ನಾನು ಚಿಕ್ಕವನಿದ್ದಾಗ ಯಾರ್ಕರ್ ಬೌಲ್ ಮಾಡಲು ಪ್ರೇರೇಪಿಸಿದರು ಎಂದು ಜಸ್ಪ್ರೀತ್ ಬುಮ್ರಾ ಹೇಳಿದರು.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 91 ರನ್‌ಗಳಿಗೆ 9 ವಿಕೆಟ್‌ಗಳನ್ನು ಪಡೆದರು. ಅದರಲ್ಲಿ ಒಲ್ಲಿ ಪೋಪ್ ಅವರ ವಿಕೆಟ್ ಪಡೆದ ಅದ್ಭುತ ಯಾರ್ಕರ್ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿತು.
ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 30 ವರ್ಷದ ಜಸ್ಪ್ರೀತ್ ಬುಮ್ರಾ ಮಾರಕ ಇನ್-ಸ್ವಿಂಗ್ ಯಾರ್ಕರ್‌ನೊಂದಿಗೆ ಒಲ್ಲಿ ಪೋಪ್‌ನ ಸ್ಟಂಪ್‌ಗಳನ್ನು ಕೆಡವಿದರು.
"ನಾನು ಅಂಕಿಸಂಖ್ಯೆಗಳನ್ನು ನೋಡುವುದಿಲ್ಲ. ಚಿಕ್ಕವನಾಗಿದ್ದಾಗಲೂ ನಾನು ಅದನ್ನು ಮಾಡಿದ್ದೇನೆ ಮತ್ತು ಅದು ನನ್ನನ್ನು ಉತ್ಸುಕಗೊಳಿಸಿತು. ಆದರೆ ಇದೀಘ ಅದು ಹೆಚ್ಚುವರಿ ಲಗೇಜ್ ಆಗಿದೆ. ಯುವಕನಾಗಿದ್ದ ನಾನು ಕಲಿತ ಮೊದಲ ಎಸೆತ ಯಾರ್ಕರ್".
"ವಕಾರ್ ಯೂನಿಸ್, ವಾಸಿಂ ಅಕ್ರಮ್ ಮತ್ತು ಜಹೀರ್ ಖಾನ್ ಅವರಂತಹ ಲೆಜೆಂಡ್‌ಗಳ ಆಟವನ್ನು ನೋಡಿದ್ದೇನೆ," ಎಂದು ಜಸ್ಪ್ರೀತ್ ಬುಮ್ರಾ ಪಂದ್ಯದ ನಂತರದ ಪ್ರಶಸ್ತಿ ಸಮಾರಂಭದಲ್ಲಿ ಹೇಳಿದರು.
ಜೇಮ್ಸ್ ಆಂಡರ್ಸನ್ ಜೊತೆ ಪೈಪೋಟಿ ಇಲ್ಲ: ಜಸ್ಪ್ರೀತ್ ಬುಮ್ರಾ
ಬೌಲಿಂಗ್ ದಾಳಿಯ ನಾಯಕನಾಗಿ ತನ್ನನ್ನು ತಾನು ಪರಿಗಣಿಸಿಲ್ಲ ಎಂದ ಜಸ್ಪ್ರೀತ್ ಬುಮ್ರಾ, ಬದಲಿಗೆ ತಾವು ಆಟದ ಶುದ್ಧ ಸ್ವರೂಪದಲ್ಲಿ ಭಾರತ ತಂಡದ ಪರಿವರ್ತನೆಯ ಹಂತಕ್ಕೆ ಅಮೂಲ್ಯ ಕೊಡುಗೆ ನೀಡುವ ಬಗ್ಗೆ ಮಾತನಾಡಿದರು.
"ಬಹಳ ಸಮಯದಿಂದ ರೋಹಿತ್ ಶರ್ಮಾ ಅವರೊಂದಿಗೆ ಆಡುತ್ತಿದ್ದೇನೆ. ನಾವು ಪರಿವರ್ತನೆಯ ಮೂಲಕ ಹೋಗುತ್ತಿದ್ದೇವೆ, ಆದ್ದರಿಂದ ನಾನು ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದು ನನ್ನ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ನಾವು ಕೆಲವು ವಿಷಯಗಳನ್ನು ಚರ್ಚಿಸುತ್ತೇವೆ," ಎಂದು ಅವರು ಹೇಳಿದರು.
ವಿಶಾಖಪಟ್ಟಣ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದ ಜೇಮ್ಸ್ ಆಂಡರ್ಸನ್ ಮತ್ತು ತಮ್ಮ ನಡುವೆ ಯಾವುದೇ ಪೈಪೋಟಿ ಇಲ್ಲ ಎಂದು ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ.
"ಇಲ್ಲ, ನಿಜವಾಗಿಯೂ ಅಲ್ಲ. ಕ್ರಿಕೆಟಿಗನಿಗಿಂತ ಮೊದಲು ನಾನು ವೇಗದ ಬೌಲಿಂಗ್ ಅಭಿಮಾನಿ. ಯಾರಾದರೂ ಚೆನ್ನಾಗಿ ಕೆಲಸ ಮಾಡುತ್ತಿದ್ದರೆ, ಅವರಿಗೆ ಅಭಿನಂದನೆಗಳು. ನಾನು ಪರಿಸ್ಥಿತಿಯನ್ನು ವಿಕೆಟ್‌ನಲ್ಲಿ ನೋಡುತ್ತೇನೆ ಮತ್ತು ನನ್ನ ಆಯ್ಕೆಗಳೇನು ಎಂದು ಯೋಚಿಸುತ್ತೇನೆ," ಎಂದು ಜಸ್ಪ್ರೀತ್ ಬುಮ್ರಾ ತಿಳಿಸಿದರು.
ಇದಕ್ಕೂ ಮೊದಲು ಭಾರತದ ವೇಗದ ವೇಗಿ ಜಸ್ಪ್ರೀತ್ ಬುಮ್ರಾ ಅವರು ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅನಿಲ್ ಕುಂಬ್ಳೆ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ಪೂರೈಸಿದ ನಾಲ್ಕನೇ ಬೌಲರ್ ಎನಿಸಿದರು.
ವಾಸ್ತವವಾಗಿ, ಟೆಸ್ಟ್ ಸ್ವರೂಪದಲ್ಲಿ 150 ವಿಕೆಟ್‌ಗಳನ್ನು ಹೊಂದಿರುವ ಬೌಲರ್‌ಗಳಲ್ಲಿ ಇಂಗ್ಲೆಂಡ್ ಮಾಜಿ ವೇಗಿ ಸಿಡ್ನಿ ಬಾರ್ನ್ಸ್ ನಂತರ, ಜಸ್ಪ್ರೀತ್ ಬುಮ್ರಾ 20.19ರ ಎರಡನೇ ಅತ್ಯುತ್ತಮ ಸರಾಸರಿಯನ್ನು ಹೊಂದಿದ್ದಾರೆ.
ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಆಡಿದ 2 ಪಂದ್ಯಗಳಿಂದ 15 ವಿಕೆಟ್‌ಗಳೊಂದಿಗೆ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications