IND vs ENG 3rd T20: ಆರ್‌ಸಿಬಿ ಬ್ಯಾಟರ್ ಫಿಲ್ ಸಾಲ್ಟ್ ಅರ್ಧಶತಕ: ಭಾರತಕ್ಕೆ 202 ರನ್ ಗುರಿ
ನಾಟಿಂಗ್‌ಹ್ಯಾಮ್: ಭರವಸೆಯ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರ ಭರ್ಜರಿ ಅರ್ಧಶತಕದ ಬಲದಿಂದ ಇಂಗ್ಲೆಂಡ್ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಟಿ20 ಪಂದ್ಯ ಗೆಲ್ಲಲು 202 ರನ್‌ಗಳ ಗುರಿಯನ್ನು ಭಾರತಕ್ಕೆ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಜೋಡಿ ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 43 ರನ್ ಸೇರಿಸಿತು. ಈ ಹಂತದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದ ಜೋಸ್ ಬಟ್ಲರ್ 21 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿ ಪ್ರಿನ್ಸ್ ಯಾದವ್ ಅವರು ತೋಡಿದ ಖೆಡ್ಡಾಗೆ ಬಲಿಯಾದರು.

ನಾಯಕ ಹ್ಯಾರಿ ಬ್ರೂಕ್ 1 ಬೌಂಡರಿ ನೆರವಿನಿಂದ 16 ರನ್ ಬಾರಿಸಿದ್ದಾಗ ಯುವ ಬೌಲರ್ ಪ್ರಿನ್ಸ್ ಯಾದವ್ ಅವರ ಚೆಂಡನ್ನು ಅರಿಯುವಲ್ಲಿ ವಿಫಲರಾಗಿ ಔಟ್ ಆದರು. ಕಳೆದ ಪಂದ್ಯದಲ್ಲಿ ರನ್ ಮಹಲ್ ಕಟ್ಟಿದ್ದ ಜಾಕೊಬ್ ಬೆಥೆಲ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದರು. ಇವರು 13 ರನ್ ಬಾರಿಸಿದ್ದಾಗ ಹರ್ಷಿತ್ ರಾಣಾ ಅವರ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಹೋಗಿ ವೈಭವ್ ಸೂರ್ಯವಂಶಿ ಅವರಿಗೆ ಕ್ಯಾಚ್ ನೀಡಿದರು.
ಫಿಲ್ ಸಾಲ್ಟ್ ಅರ್ಧಶತಕ
ಐದನೇ ವಿಕೆಟ್‌ಗೆ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಹಾಗೂ ಸ್ಯಾಮ್ ಕರನ್ ಜೋಡಿ 26 ಎಸೆತಗಳಲ್ಲಿ 47 ರನ್ ಬಾರಿಸಿತು. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿರುವ ಫಿಲ್ ಸಾಲ್ಟ್ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಇವರು 44 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 70 ರನ್ ಸಿಡಿಸಿದರು. ವಿಲ್ ಜಾಕ್ಸ್ 14 ರನ್ ಬಾರಿಸಿ ನಿರ್ಗಮಿಸಿದರು.
ಮಧ್ಯಮ ಕ್ರಮಾಂಕದ ಆಟಗಾರ ಸ್ಯಾಮ್ ಕರನ್ ಜವಾಬ್ದಾರಿಯುತ ಬ್ಯಾಟ್ ಮಾಡಿದರು. ಇವರು ಅಮೋಘ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರು ಟೀಮ್ ಇಂಡಿಯಾ ಬೌಲರ್‌ಗಳನ್ನು ಕಾಡಿದರು. ಸ್ಯಾಮ್ ಅಜೇಯ 41 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 201 ರನ್ ಸೇರಿಸಿತು.
ಟೀಮ್ ಇಂಡಿಯಾದ ಪರ ವೇಗದ ಬೌಲರ್ ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಪಡೆದರು. ಸ್ಪಿನ್ ಬೌಲರ್ ಅಕ್ಷರ್ ಪಟೇಲ್ 1 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications