IND vs ENG Test: ಲಾರ್ಡ್ಸ್‌ನಲ್ಲಿ ಬುಮ್ರಾ ಅಬ್ಬರ: ಇಂಗ್ಲೆಂಡ್ 387 ರನ್‌ಗೆ ಆಲೌಟ್
ಭಾರತದ ಭರವಸೆಯ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ಇಂಗ್ಲೆಂಡ್, ಎರಡನೇ ದಿನದಾಟದಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದೆ. ಶುಕ್ರವಾರ ಬೃಹತ್ ಮೊತ್ತದ ಕನಸು ಕಂಡಿದ್ದ ಇಂಗ್ಲೆಂಡ್‌ಗೆ ಬುಮ್ರಾ ಆರಂಭದಲ್ಲೇ ಶಾಕ್ ನೀಡಿದರು. ಪರಿಣಾಮ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕದಂತೆ ತಡೆದರು. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ
ಶುಕ್ರವಾರ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 251 ರನ್‌ಗಳಿಂದ ಆಟ ಮುಂದುವರಿಸಿತು. ಈ ವೇಳೆ ಜೋ ರೂಟ್ ಹಾಗೂ ನಾಯಕ ಬೆನ್ ಸ್ಟೋಕ್ಸ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಎರಡನೇ ದಿನದಾಟದ ಆರಂಭದಲ್ಲಿ ರೂಟ್ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದ 37ನೇ ಶತಕ ಬಾರಿಸಿ ಮಿಂಚಿದರು. ಈ ಮೂಲಕ ಇವರು ಹಲವು ದಾಖಲೆಗಳನ್ನು ಬರೆದರು. ಐದನೇ ವಿಕೆಟ್‌ಗೆ ಸ್ಟೋಕ್ಸ್ ಹಾಗೂ ರೂಟ್ ಜೊಡಿ 184 ಎಸೆತಗಳಲ್ಲಿ 88 ರನ್ ಸೇರಿಸಿತು. ಭರವಸೆಯ ಆಟಗಾರ ಬೆನ್ ಸ್ಟೋಕ್ಸ್ 4 ಬೌಂಡರಿ ಸಹಾಯದಿಂದ 44 ರನ್ ಸಿಡಿಸಿ, ಜಸ್ಪ್ರಿತ್ ಬುಮ್ರಾ ಎಸೆತದಲ್ಲಿ ಬೋಲ್ಡ್ ಆದರು.

ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಆಧಾರವಾಗಿದ್ದ ಜೋ ರೂಟ್ 10 ಬೌಂಡರಿ ನೆರವಿನಿಂದ 104 ರನ್ ಸಿಡಿಸಿ, ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮೈದಾನಕ್ಕೆ ಬಂದ ಕ್ರಿಸ್ ವೋಕ್ಸ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದರು.
ಕಾರ್ಸೆ ಅರ್ಧಶತಕ
ಎಂಟನೇ ವಿಕೆಟ್‌ಗೆ ಬ್ರೈಡನ್ ಕಾರ್ಸೆ ಹಾಗೂ ವಿಕೆಟ್ ಕೀಪರ್ ಜೇಮಿ ಸ್ಮಿತ್ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ವಿಫಲರಾದರು. ಈ ಜೋಡಿ 114 ಎಸೆತಗಳಲ್ಲಿ 84 ರನ್‌ಗಳ ಜೊತಯಾಟದ ಕಾಣೀಕೆ ನೀಡಿದರು. ಜೇಮಿ ಸ್ಮಿತ್ 6 ಬೌಂಡರಿ ಸಹಾಯದಿಂದ 51 ರನ್ ಸಿಡಿಸಿದರು.

ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ರೈಡನ್ ಕಾರ್ಸೆ ತಂಡಕ್ಕೆ ಆಧಾರವಾದರು. ಇವರು ತಮ್ಮ ಟೆಸ್ಟ್ ವೃತ್ತಿ ಜೀವನದ ಮೊದಲ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಬುಮ್ರಾ ಆರ್ಭಟ
ಟೀಮ್ ಇಂಡಿಯಾ ಪರ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ಒಂದೇ ಸರಣಿಯಲ್ಲಿ ಎರಡನೇ ಬಾರಿ ಐದು ವಿಕೆಟ್ ಪಡೆದ ಹೆಗ್ಗಳಿಕೆಗೆ ಪಾತ್ರರಾದರು. ಉಳಿದಂತೆ ನಿತೀಶ್ ಕುಮಾರ್ ರೆಡ್ಡಿ 2, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications