ಅಜರ್ ದಾಖಲೆ ಮುರಿದು, ಕೊಹ್ಲಿ ಮಾಡಿದ ಸಾಧನೆಗಳೇನು?

ಟ್ರೆಂಟ್ ಬ್ರಿಡ್ಜ್, ಆಗಸ್ಟ್ 20: ನಾಯಕ ವಿರಾಟ್ ಕೊಹ್ಲಿ 2014ರ ಸರಣಿಯ ಕಹಿ ನೆನಪು ಮರೆಯಾಗುವಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ. 2018ರ ಸರಣಿಯಲ್ಲಿ ಮತ್ತೊಮ್ಮೆ ತಮ್ಮ ವಿರಾಟ್ ರೂಪ ತೋರಿಸಿ, ಮೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಈ ಶತಕದ ಮೂಲಕ ಅನೇಕ ದಾಖಲೆಗಳನ್ನು ಮುರಿದಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಬದುಕಿನ 23ನೇ ಶತಕ ದಾಖಲಿಸಿ, ಭಾರತದ ಮಾಜಿ ನಾಯಕ ಅಜರುದ್ದೀನ್ ದಾಖಲೆಯನ್ನು ಕೊಹ್ಲಿ ಮುರಿದರು. ಇಂಗ್ಲೆಂಡ್ ನಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಕೆ ಸಾಧನೆ ಅಜರ್ ಹೆಸರಿನಲ್ಲಿತ್ತು.
ಟೆಸ್ಟ್ ನಲ್ಲಿ ಕೊಹ್ಲಿ: 69ನೇ ಟೆಸ್ಟ್ ಪಂದ್ಯದ 118 ಇನ್ನಿಂಗ್ಸ್ ನಲ್ಲಿ 23ನೇ ಶತಕ ಗಳಿಸಿದರು.
* ಇದು ಇಂಗ್ಲೆಂಡ್ ವಿರುದ್ಧ 5ನೇ ಶತಕ
* ಇಂಗ್ಲೆಂಡ್ ನೆಲದಲ್ಲಿ ಗಳಿಸಿದ 2ನೇ ಶತಕ
* 2018ರಲ್ಲಿ 3ನೇ ಶತಕ, ಈ ಸರಣಿಯ 2ನೇ ಶತಕ
* ವಿದೇಶದಲ್ಲಿ 13ನೇ ಶತಕ, ನಾಯಕನಾಗಿ 16ನೇ ಶತಕ
* ನಾಲ್ಕನೇ ಕ್ರಮಾಂಕದಲ್ಲಿ ಆಡಿ 19ನೇ ಶತಕ
* ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 30ನೇ ಶತಕ
ಇದಲ್ಲದೆ, ವಿದೇಶಿ ನೆಲದಲ್ಲಿ ಭಾರತ ನಾಯಕನೊಬ್ಬ ಗಳಿಸಿದ ಅತಿಹೆಚ್ಚು ರನ್ ದಾಖಲೆ, ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಕೆ, ಅತಿ ಹೆಚ್ಚು ಅರ್ಧಶತಕ ದಾಖಲೆ ಹೀಗೆ ಕೊಹ್ಲಿ ಸಾಧನೆ ಪಟ್ಟಿ ಮುಂದುವರೆಯುತ್ತದೆ. ಇನ್ನಷ್ಟು ದಾಖಲೆಗಳ ವಿವರ ಮುಂದಿದೆ...

ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅತಿ ಹೆಚ್ಚುರನ್
ಇಂಗ್ಲೆಂಡ್ ಪ್ರವಾಸ ಕೈಗೊಂಡ ಭಾರತ ತಂಡದ ಪರ ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಪೇರಿಸಿದ ನಾಯಕ ಎಂಬ ಅಜರುದ್ದೀನ್ ದಾಖಲೆ(426ರನ್). ಮುರಿದ ಕೊಹ್ಲಿ ಈ ಸರಣಿಯಲ್ಲಿ ಮೂರು ಪಂದ್ಯಗಳಿಂದ 440 ರನ್ ಗಳಿಸಿದ್ದಾರೆ.
ಮೊದಲ ಟೆಸ್ಟ್ನ ಎರಡೂ ಇನ್ನಿಂಗ್ಸ್ (149, 51) ಸೇರಿಸಿ 200 ರನ್ ಗಳಿಸಿದ್ದರು. ಎರಡನೇ ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ಗಳಿಂದ (23, 17) 40 ರನ್ ಬಾರಿಸಿದ್ದರು. 3ನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ಗಳಿಂದ ಕೊಹ್ಲಿ (97, 103) 200 ರನ್ ಗಳಿಸಿದ್ದಾರೆ.
ನಾಯಕರಾಗಿ 5ನೇ ಬಾರಿಗೆ 50+ ರನ್ ಗಳಿಕೆ
ನಾಯಕನಾಗಿ ಸರಣಿಯೊಂದರಲ್ಲಿ 5ನೇ ಬಾರಿಗೆ 50+ ರನ್ ಗಳಿಸಿದ ಕೊಹ್ಲಿ ದಾಖಲೆ ಬರೆದಿದ್ದಾರೆ. ಧೋನಿ ನಾಲ್ಕು ಬಾರಿ ಈ ಸಾಧನೆ ಹಾಗೂ ನವಾಬ್ ಪಟೌಡಿ ಅವರು ಮೂರು ಬಾರಿ ಈ ಸಾಧನೆ ಮಾಡಿದ್ದರು.
ಎರಡು ಇನ್ನಿಂಗ್ಸ್ ನಲ್ಲೂ ಹೆಚ್ಚು ಬಾರಿ 50ಪ್ಲಸ್
ವಿರಾಟ್ ಕೊಹ್ಲಿ 9 ಬಾರಿ ಟೆಸ್ಟ್ ಪಂದ್ಯವೊಂದರ ಎರಡು ಇನ್ನಿಂಗ್ಸ್ ಗಳಲ್ಲಿ 50ಪ್ಲಸ್ ರನ್ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ ಮಾತ್ರ 10 ಬಾರಿ ಈ ಸಾಧನೆ ಮಾಡಿ ಮುಂದಿದ್ದಾರೆ. ಮಿಕ್ಕಂತೆ, ಗವಾಸ್ಕರ್, ಲಕ್ಷ್ಮಣ್ ಹಾಗೂ ತೆಂಡೂಲ್ಕರ್ ಕೂಡಾ 9 ಬಾರಿ ಈ ಸಾಧನೆ ಮಾಡಿದ್ದರು.
ಟೆಸ್ಟ್ ಪಂದ್ಯವೊಂದರಲ್ಲಿ 200ಪ್ಲಸ್ ರನ್ ಗಳಿಕೆ
ಟೆಸ್ಟ್ ಪಂದ್ಯವೊಂದರಲ್ಲಿ 200ಪ್ಲಸ್ ರನ್ ಗಳಿಕೆ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಕುಮಾರ ಸಂಗಕ್ಕಾರ ಅಗ್ರಸ್ಥಾನದಲ್ಲಿದ್ದಾರೆ. ಈಗ ಈ ಪಟ್ಟಿಗೆ ಕೊಹ್ಲಿ ಸೇರ್ಪಡೆಯಾಗಿದ್ದಾರೆ.
17 ಬಾರಿ ಸಂಗಕ್ಕಾರ
15 ಬ್ರಿಯಾನ್ ಲಾರಾ
13 ರಿಕಿ ಪಾಂಟಿಂಗ್
12 ವಿರಾಟ್ ಕೊಹ್ಲಿ
ನಾಯಕರಾಗಿ 430ಪ್ಲಸ್ ರನ್ ಗಳಿಸಿದ ಕೊಹ್ಲಿ
ಮೊದಲ ಟೆಸ್ಟ್ನ ಎರಡೂ ಇನ್ನಿಂಗ್ಸ್ (149, 51) ಸೇರಿಸಿ 200 ರನ್ ಗಳಿಸಿದ್ದರು. ಎರಡನೇ ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ಗಳಿಂದ (23, 17) 40 ರನ್ ಬಾರಿಸಿದ್ದರು. 3ನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ಗಳಿಂದ ಕೊಹ್ಲಿ (97, 103) 200 ರನ್ ಗಳಿಸಿದ್ದಾರೆ.
* ಆಸ್ಟೇಲಿಯಾ ವಿರುದ್ಧ (449ರನ್, 2014/15)
* ದಕ್ಷಿಣ ಆಫ್ರಿಕಾ ವಿರುದ್ಧ (286ರನ್, 2018)
* ಇಂಗ್ಲೆಂಡ್ ವಿರುದ್ಧ (440ರನ್, 2018)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications