Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG: ಶ್ರೇಯಸ್ ಅಯ್ಯರ್ ಪಡೆಗೆ ಸರಣಿ ಸೋಲು: ಇಂಗ್ಲೆಂಡ್‌ಗೆ 9 ವಿಕೆಟ್‌ ಜಯ

ಬ್ರಿಸ್ಟಲ್: ಭರವಸೆಯ ಆಟಗಾರ ಫಿಲ್ ಸಾಲ್ಟ್ ಹಾಗೂ ನಾಯಕ ಹ್ಯಾರಿ ಬ್ರೂಕ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್‌ ಐದು ಪಂದ್ಯಗಳ ಟಿ20 ಸರಣಿಯ 4ನೇ ಟಿ20 ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಟೀಮ್ ಇಂಡಿಯಾವನ್ನು ಮಣಿಸಿ, ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್ ಇನ್ನು ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು ತನ್ನ ವಶಕ್ಕೆ ಮಾಡಿಕೊಂಡಿದೆ.

159 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್‌ ತಂಡದ ಆರಂಭ ಕಳಪೆಯಾಗಿತ್ತು. ಸ್ಫೋಟಕ ಆಟಗಾರ ಜೋಸ್ ಬಟ್ಲರ್‌ (8) ಒಂದು ಸಿಕ್ಸರ್‌ ಬಾರಿಸಿ ಔಟ್ ಆದರು. ಇವರ ವಿಕೆಟ್‌ ಪಡೆಯುವಲ್ಲಿ ಅರ್ಷದೀಪ್ ಸಿಂಗ್ ಸಫಲರಾದರು. 2.3 ಓವರ್‌ಗಳಲ್ಲಿ ಇಂಗ್ಲೆಂಡ್ ಮೊದಲ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

IND vs ENG

ಈ ಹಂತದಲ್ಲಿ ತಂಡಕ್ಕೆ ಆಸರೆಯಾದವರು ಆರಂಭಿಕ ಆಟಗಾರ ಫಿಲ್ ಸಾಲ್ಟ್ ಹಾಗೂ ನಾಯಕ ಹ್ಯಾರಿ ಬ್ರೂಕ್‌ ಜೋಡಿ ತಂಡಕ್ಕೆ ಆಧಾರವಾಯಿತು. ವಿಕೆಟ್ ಬೀಳದಂತೆ ನೋಡಿಕೊಂಡ ಜೋಡಿ ಆಡಿದ ಜೋಡಿ ಅಬ್ಬರಿಸಿತು. ಈ ಜೋಡಿ 70 ಎಸೆತಗಳಲ್ಲಿ ಅಜೇಯ 146 ರನ್‌ ಸೇರಿಸಿತು.

ಬ್ರೂಕ್‌, ಸಾಲ್ಟ್‌ ಭರ್ಜರಿ ಜೊತೆಯಾಟ

ಇಂಗ್ಲೆಂಡ್ ಪರ ನಾಯಕ ಫಿಲ್ ಸಾಲ್ಟ್‌ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು 42 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 59 ರನ್‌ ಸಿಡಿಸಿ ಜಯದಲ್ಲಿ ಮಿಂಚಿದರು. ನಾಯಕ ಹ್ಯಾರಿ ಬ್ರೂಕ್ 8 ಬೌಂಡರಿ, 4 ಸಿಕ್ಸರ್‌ ಸಹಿತ ಅಜೇಯ 79 ರನ್‌ ಸಿಡಿಸಿದರು. ಅಂತಿಮವಾಗಿ ಇಂಗ್ಲೆಂಡ್ 13.5 ಓವರ್‌ಗಳಲ್ಲಿ 1 ವಿಕೆಟ್‌ಗೆ 159 ರನ್‌ ಸೇರಿಸಿತು.

ಶ್ರೇಯಸ್ ಅಯ್ಯರ್ ಅರ್ಧಶತಕ

ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ವೈಭವ್ ಸೂರ್ಯವಂಶಿ (15) ಹಾಗೂ ಅಭಿಷೇಕ್ ಶರ್ಮಾ (16) ಜೋಡಿ ಮೊದಲ ವಿಕೆಟ್‌ಗೆ 2.4 ಓವರ್‌ಗಳಲ್ಲಿ 23 ರನ್‌ ಸೇರಿಸಿತು. ಇಶಾನ್‌ ಕಿಶನ್‌ (4) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.

IND vs ENG

ನಾಲ್ಕನೇ ವಿಕೆಟ್‌ಗೆ ಶಿವಂ ದುಬೆ ಹಾಗೂ ಶ್ರೇಯಸ್‌ ಅಯ್ಯರ್ ಜೋಡಿ 43 ಎಸೆತಗಳಲ್ಲಿ 53 ರನ್ ಸೇರಿಸಿತು. ಈ ಹಂತದಲ್ಲಿ ಶಿವಂ ದುಬೆ 22 ರನ್‌ ಬಾರಿಸಿ ಔಟ್ ಆದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ಎಡವಿದರು. ನಾಯಕ ಶ್ರೇಯಸ್ ಅಯ್ಯರ್ 49 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 80 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಸಿದರು. ಅಂತಿಮವಾಗಿ ಭಾರತ, 20 ಓವರ್‌ಗಳಲ್ಲಿ 7 ವಿಕೆಟ್‌ಗೆ 158 ರನ್‌ ಸೇರಿಸಿತು.

Story first published: Friday, July 10, 2026, 3:05 [IST]
Other articles published on Jul 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+