IND vs ENG: ಶ್ರೇಯಸ್ ಅಯ್ಯರ್ ಅರ್ಧಶತಕದ ಸೊಬಗು: ವೈಭವ್ ಸೂರ್ಯವಂಶಿ ಮತ್ತೆ ಫೇಲ್
ಬ್ರಿಸ್ಟಲ್: ನಾಯಕ ಶ್ರೇಯಸ್ ಅಯ್ಯರ್ ಅವರು ಬಾರಿಸಿದ ಭರ್ಜರಿ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ ನಾಲ್ಕನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ಗೆ 159 ರನ್‌ಗಳ ಗುರಿಯನ್ನು ನೀಡಿದೆ. ಈ ಮೂಲಕ ಸರಣಿಯನ್ನು ಜೀವಂತವಾಗಿಟ್ಟುಕೊಳ್ಳಲು ಭಾರತ 158 ರನ್‌ಗಳನ್ನು ಡಿಫೆಂಡ್ ಮಾಡಿಕೊಳ್ಳುವ ಅನಿವಾರ್ಯತೆ ಇದೆ.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಟೀಮ್ ಇಂಡಿಯಾದ ಪರ ಇನಿಂಗ್ಸ್ ಆರಂಭಿಸಿದ 15 ವರ್ಷದ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ತಂಡಕ್ಕೆ ದೊಡ್ಡ ಜೊತೆಯಾಟದ ಕಾಣಿಕೆ ನಿಡುವಲ್ಲಿ ವಿಫಲರಾದರು. ಈ ಜೋಡಿ ಮೊದಲ ವಿಕೆಟ್‌ಗೆ 2.4 ಓವರ್‌ಗಳಲ್ಲಿ 23 ರನ್ ಸೇರಿಸಿ ಔಟ್ ಆಯಿತು.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಇಶಾನ್ ಕಿಶನ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಇವರು ಜೋಶ್ ಟಂಗ್ ಎಸೆತದಲ್ಲಿ, ಸ್ಯಾಮ್ ಕರನ್ ಅವರಿಗೆ ಕ್ಯಾಚ್ ನೀಡಿದರು. ವಿಶ್ವದ ನಂಬರ್ 2 ಬ್ಯಾಟರ್ ಅಭಿಷೇಕ್ ಶರ್ಮಾ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಇವರು 2 ಬೌಂಡರಿ ನೆರವಿನಿಂದ 16 ರನ್ ಬಾರಿಸಿ ಔಟ್ ಆದರು.
ಶ್ರೇಯಸ್ ಅಯ್ಯರ್ ಅರ್ಧಶತಕ
48 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಲ್‌ರೌಂಡರ್ ಶಿವಂ ದುಬೆ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಜೋಡಿ ಆಧಾರವಾಯಿತು. ಈ ಜೋಡಿ ಇಂಗ್ಲೆಂಡ್ ಬೌಲರ್‌ಗಳನ್ನು ಕೊಂಚ ಕಾಡಿ, ಮಧ್ಯದ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡಿತು. ನಾಲ್ಕನೇ ವಿಕೆಟ್‌ಗೆ ಶ್ರೇಯಸ್, ದುಬೆ ಜೊತೆಗೂಡಿ 43 ಎಸೆತಗಳಲ್ಲಿ 53 ರನ್ ಸೇರಿಸಿತು. ಈ ಹಂತದಲ್ಲಿ 22 ರನ್ ಬಾರಿಸಿದ್ದ ದುಬೆ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ (11), ವಾಷಿಂಗ್ಟನ್ ಸುಂದರ್ (5), ಅಕ್ಷರ್ ಪಟೇಲ್ (1) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
ನಾಯಕ ಶ್ರೇಯಸ್ ಅಯ್ಯರ್ ಜವಾಬ್ದಾರಿ ಅರಿತು ಬ್ಯಾಟ್ ಮಾಡಿದರು. ಇವರು 49 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 80 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 158 ರನ್ ಸೇರಿಸಿತು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಹಾಗೂ ಜೋಶ್ ಟಂಗ್ ತಲಾ 2 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications