Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG 5Th T20: ಶ್ರೇಯಸ್‌ ಪಡೆ ಬೆಂಬಿಡದ ಸೋಲು: ಸರಣಿ ಗೆದ್ದ ಇಂಗ್ಲೆಂಡ್‌ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ

ಸೌತಾಂಪ್ಟನ್: ಆರಂಭಿಕ ಆಟಗಾರ ಜೋಸ್ ಬಟ್ಲರ್ ಬಾರಿಸಿದ ಶತಕ ಹಾಗೂ ನಾಯಕ ಹ್ಯಾರಿ ಬ್ರೂಕ್‌ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್‌ ಐದನೇ ಟಿ20 ಪಂದ್ಯದಲ್ಲಿ 56 ರನ್‌ಗಳಿಂದ ಟೀಮ್ ಇಂಡಿಯಾವನ್ನು ಮಣಿಸಿತು. ಈ ಮೂಲಕ ಇಂಗ್ಲೆಂಡ್ ಟಿ20 ಸರಣಿಯ 4-0ಯಿಂದ ಗೆದ್ದು ಸಾಧನೆ ಮಾಡಿದೆ. ಇನ್ನು ಐಸಿಸಿ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೆ ಬಡ್ತಿ ಪಡೆದಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಇಂಗ್ಲೆಂಡ್‌ ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್‌ ಕೇವಲ 6 ರನ್‌ಗಳಿಗೆ ಪ್ರಸಿದ್ಧ್ ಕೃಷ್ಣಗೆ ವಿಕೆಟ್‌ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ಆರಂಭಿಕ ಆಟಗಾರ ಜೋಸ್ ಬಟ್ಲರ್ ಹಾಗೂ ನಾಯಕ ಹ್ಯಾರಿ ಬ್ರೂಕ್ ತಂಡಕ್ಕೆ ಆಧಾರವಾದರು.

IND vs ENG 5Th T20

ಎರಡನೇ ವಿಕೆಟ್‌ಗೆ ಬ್ರೂಕ್ ಹಾಗೂ ಬಟ್ಲರ್‌ ಜೋಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಅಲ್ಲದೆ ಮಧ್ಯದ ಓವರ್‌ಗಳಲ್ಲಿ ಟೀಮ್ ಇಂಡಿಯಾ ಬೌಲರ್‌ಗಳ ವಿರುದ್ಧ ದೊಡ್ಡ ಹೊಡೆತಗಳನ್ನು ಬಾರಿಸಿ ತಂಡ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಶ್ರಮಿಸಿದರು. ಎರಡನೇ ವಿಕೆಟ್‌ಗೆ ಬಟ್ಲರ್ ಹಾಗೂ ಬ್ರೂಕ್ ಜೋಡಿ 103 ಎಸೆತಗಳಲ್ಲಿ 233 ರನ್‌ ಸೇರಿಸಿತು.

ಬಟ್ಲರ್ ಶತಕದ ಅಬ್ಬರ

ಆರಂಭಿಕ ಆಟಗಾರ ಜೋಸ್ ಬಟ್ಲರ್‌ 64 ಎಸೆತಗಳಲ್ಲಿ 12 ಬೌಂಡರಿ, 8 ಸಿಕ್ಸರ್‌ ಸಹಿತ ನೆರವಿನಿಂದ 131 ರನ್ ಸಿಡಿಸಿದರು. ಹ್ಯಾರಿ ಬ್ರೂಕ್‌ 211 ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿದ್ದಾರೆ. ಇವರು 45 ಎಸೆತಗಳಲ್ಲಿ 95 ರನ್‌ ಬಾರಿಸಿದರು. ಅಂತಿಮವಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 257 ರನ್‌ ಸೇರಿಸಿತು.

IND vs ENG 5Th T20

ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್‌ ಅಭಿಷೇಕ್ ಶರ್ಮಾ (3) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. 15 ವರ್ಷದ ವೈಭವ್ ಸೂರ್ಯವಂಶಿ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಸಂಜು ಸ್ಯಾಮ್ಸನ್‌ 14 ಎಸೆತಗಳಲ್ಲಿ 27 ರನ್‌ ಸಿಡಿಸಿ ಸ್ಯಾಮ್‌ ಕರನ್‌ಗೆ ವಿಕೆಟ್‌ ಒಪ್ಪಿಸಿದರು.

ಇಶಾನ್‌, ತಿಲಕ್‌ ಅರ್ಧಶತಕ

ಮೂರನೇ ವಿಕೆಟ್‌ಗೆ ಭರವಸೆಯ ಆಟಗಾರ ಇಶಾನ್‌ ಕಿಶನ್‌ ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ ಜೋಡಿ ತಂಡಕ್ಕೆ ಕೊಂಚ ಆಧಾರವಾಯಿತು. ಈ ಜೋಡಿ 30 ಎಸೆತಗಳಲ್ಲಿ 55 ರನ್‌ಗಳ ಜೊತೆಯಾಟವನ್ನು ನೀಡಿತು. ಶ್ರೇಯಸ್ ಅಯ್ಯರ್ 28 ರನ್ ಬಾರಿಸಿದಾಗ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಇಶಾನ್‌ ಕಿಶನ್‌ 35 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 56 ರನ್‌ ಬಾರಿಸಿದರು.

ಭರವಸೆಯ ಆಟಗಾರ ಹಾಗೂ ಉಪನಾಯಕ ತಿಲಕ್ ವರ್ಮಾ ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಶ್ರಮಿಸಿದರು. ಇವರು 25 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿ ಔಟ್ ಆದರು. ಭಾರತ ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 201 ರನ್ ಸೇರಿಸಿ ಸೋಲು ಕಂಡಿತು.

Story first published: Saturday, July 11, 2026, 23:40 [IST]
Other articles published on Jul 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+