Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG 5Th T20: ಜೋಸ್‌ ಬಟ್ಲರ್‌ ಶತಕ, ಬ್ರೂಕ್‌ ಸ್ಫೋಟಕ ಬ್ಯಾಟಿಂಗ್

ಸೌತಾಂಪ್ಟನ್: ಭರವಸೆಯ ಆಟಗಾರ ಜೋಸ್‌ ಬಟ್ಲರ್‌ ಬಾರಿಸಿದ ಶತಕ ಹಾಗೂ ಹ್ಯಾರಿ ಬ್ರೂಕ್‌ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಇಂಗ್ಲೆಂಡ್‌ ಐದನೇ ಟಿ20 ಪಂದ್ಯದಲ್ಲಿ 258 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ಭಾರತ ತಂಡಕ್ಕೆ ನೀಡಿದೆ.

ಟಾಸ್‌ ಗೆದ್ದ ಭಾರತ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಫಿಲ್ ಸಾಲ್ಟ್‌ 6 ರನ್‌ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಪ್ರಸಿದ್ಧ್ ಕೃಷ್ಣಾ ಅವರಿಗೆ ವಿಕೆಟ್‌ ಒಪ್ಪಿಸಿದರು. ಇಂಗ್ಲೆಂಡ್‌ 8 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು.

IND vs ENG 5Th T20

ಎರಡನೇ ವಿಕೆಟ್‌ಗೆ ಇಂಗ್ಲೆಂಡ್ ತಂಡಕ್ಕೆ ನಾಯಕ ಹ್ಯಾರಿ ಬ್ರೂಕ್‌ ಹಾಗೂ ಭರವಸೆಯ ಆಟಗಾರ ಜೋಸ್ ಬಟ್ಲರ್ ಆಧಾರವಾದರು. ಈ ಜೋಡಿ ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮಣೆ ಹಾಕಿದ ಜೋಡಿ ಆರ್ಭಟಿಸಿತು. ಈ ಜೋಡಿ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸುತ್ತಾ ಸಾಗಿತು. ಈ ಜೋಡಿ ಎರಡನೇ ವಿಕೆಟ್‌ಗೆ ದ್ವಿಶತಕದ ಜೊತೆಯಾಟವನ್ನು ನೀಡಿತು.

ಬ್ರೂಕ್‌ ಹಾಗೂ ಬಟ್ಲರ್ ಜೋಡಿ ಎರಡನೇ ವಿಕೆಟ್‌ಗೆ 103 ಎಸೆತಗಳಲ್ಲಿ 233 ರನ್‌ ಸೇರಿಸಿತು. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ್ದ ಬಟ್ಲರ್‌ ಅವರಿಗೆ ಶಿವಂ ದುಬೆ ಖೆಡ್ಡಾ ತೋಡಿದರು. ಇವರು ಔಟ್ ಆಗುವ ಮುನ್ನ 64 ಎಸೆತಗಳಲ್ಲಿ 12 ಬೌಂಡರಿ, 8 ಸಿಕ್ಸರ್ ಸಹಾಯದಿಂದ 204ರ ಸ್ಟ್ರೈಕ್‌ ರೇಟ್‌ನಲ್ಲಿ 131 ರನ್‌ ಸಿಡಿಸಿ ಔಟ್ ಆದರು. ನಾಯಕ ಹ್ಯಾರಿ ಬ್ರೂಕ್‌ 45 ಎಸೆತಗಳಲ್ಲಿ 4 ಬೌಂಡರಿ, 8 ಸಿಕ್ಸರ್ ಸಹಾಯದಿಂದ ಅಜೇಯ 95 ರನ್ ಬಾರಿಸಿದರು. ಅಂತಿಮವಾಗಿ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 257 ರನ್‌ ಸೇರಿಸಿತು.

ಟೀಮ್ ಇಂಡಿಯಾಕ್ಕೆ ತಟ್ಟಿದ ಟ್ರಾಫಿಕ್ ಬಿಸಿ

ಭಾರತ ಹಾಗೂ ಇಂಗ್ಲೆಂಡ್ ನಡುವಣ ಕೊನೆಯ ಹಾಗೂ ಐದನೇ ಟಿ20 ಪಂದ್ಯ ಸೌತಾಂಪ್ಟನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಟಾಸ್‌ ವಿಳಂಬವಾಗಿದೆ. ಈ ಪಂದ್ಯದ ಟಾಸ್ ಭಾರತೀಯ ಕಾಲಮಾನ ಸಂಜೆ 6.30ಕ್ಕೆ ನಡೆಯಬೇಕಿತ್ತು. ಆದರೆ ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್‌ನಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಟಾಸ್‌ ವಿಳಂಬವಾಯಿತು. ಹೀಗಾಗಿ ಟಾಸ್‌ 7.15ಕ್ಕೆ ನಡೆದು, ಪಂದ್ಯ 7.30ಕ್ಕೆ ಆರಂಭವಾಯಿತು.

Story first published: Saturday, July 11, 2026, 22:00 [IST]
Other articles published on Jul 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+