ಭಾರತ vs ಇಂಗ್ಲೆಂಡ್: 5ನೇ ಟೆಸ್ಟ್ ಪಂದ್ಯ, ಪಿಚ್ ರಿಪೋರ್ಟ್, ಹವಾಮಾನ ವರದಿ, ಅಂಕಿಅಂಶಗಳು

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 5ನೇ ಪಂದ್ಯವನ್ನು ಭಾರತ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಆಡಲು ಸಿದ್ಧತೆ ನಡೆಸುತ್ತಿದ್ದಯ ಜುಲೈ 1ರಂದು ಈ ಪಂದ್ಯ ಆರಂಭವಾಗಲಿದೆ. ಕಳೆದ ವರ್ಷ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇದಾಗಿದ್ದು ಭಾರತದ ಕ್ಯಾಂಪ್‌ನ್ಲಲಿ ಕೋವಿಡ್ 19 ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರಣಿಯನ್ನು ಮುಂದೂಡಲಾಗಿತ್ತು. ಈ ಸರಣಿಯಲ್ಲಿ ಸದ್ಯ ಭಾರತ 2-1 ಅಂತರದಿಂದ ಮುನ್ನಡೆಯಲ್ಲಿದೆ.
ಕಳೆದ ವರ್ಷ ಈ ಪಂದ್ಯವನ್ನು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಆಯೋಜಿಸಲಿ ನಿರ್ಧರಿಸಲಾಗಿತ್ತು. ಆದರೆ ಈ ಬಾರಿ ತಾಣ ಬದಲಾವಣೆ ಮಾಡಲಾಗಿದ್ದು ಎಡ್ಜ್‌ಬಾಸ್ಟನ್‌ನಲ್ಲಿ ಪಂದ್ಯ ನಡೆಯಲಿದೆ. ಕಳೆದ ವರ್ಷ ಭಾರತ ತಂಡದ ನಾಯಕತ್ವವನ್ನು ವಿರಾಜ್ ಕೊಹ್ಲಿ ಹಾಗೂ ಕೋಚ್ ಆಗಿ ರವಿ ಶಾಸ್ತ್ರಿ ಸೇವೆ ಸಲ್ಲಿಸಿ ಈ ಬಾರಿ ರೋಹಿತ್ ಶರ್ಮಾ ನಾಯಕನಾಗಿದ್ದು ರಾಹುಲ್ ದ್ರಾವಿಡ್ ಕೋಚ್ ಆಗಿ ತಂಡಕ್ಕೆ ನೆರವಾಗಲಿದ್ದಾರೆ. ಇನ್ನು ಇಂಗ್ಲೆಂಡ್ ತಂಡದಲ್ಲಿಯೂ ಬದಲಾವಣೆಯಾಗಿದ್ದು ಜೋ ರೂಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ ಹಾಗೂ ಬೆನ್ ಸ್ಟೋಕ್ಸ್ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಬ್ರೆಂಡನ್ ಮೆಕ್ಕಲಮ್ ಕೋಚ್ ಆಗಿ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.

ಎಡ್ಜ್‌ಬಾಸ್ಟನ್ ಕ್ರೀಡಾಂಗಣದ ದಾಖಲೆ
ಇಂಗ್ಲೆಂಡ್ ಈ ಮೈದಾನದಲ್ಲಿ 53 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಈ ಪೈಕಿ 28ರಲ್ಲಿ ಗೆಲುವು ಸಾಧಿಸಿದ್ದರೆ 10ರಲ್ಲಿ ಸೋಲು ಅನುಭವಿಸಿದೆ. ಉಳಿದ 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಮತ್ತೊಂದೆಡೆ ಭಾರತ ಎಡ್ಜ್‌ಬಾಸ್ಟನ್‌ನಲ್ಲಿ 7 ಪಂದ್ಯಗಳನ್ನು ಆಡಿದ್ದು, 6ರಲ್ಲಿ ಸೋತು 1ರಲ್ಲಿ ಡ್ರಾ ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್ ಈ ಮೈದಾನದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ.

ಪಿಚ್ ರಿಪೋರ್ಟ್
ಅಂತಿಮ ಟೆಸ್ಟ್ ಒಂದ್ಯ ನಡೆಯಲಿರುವ ಎಡ್ಜ್‌ಬಾಸ್ಟನ್ ಕ್ರೀಡಾಂಗಣ ಸಾಮಾನ್ಯವಾಗಿ ಬ್ಯಾಟಿಂಗ್ ನೆರವು ನೀಡುವ ಪಿಚ್ ಎನಿಸಿಕೊಂಡಿದೆ. ಆದರೆ ಬೌಲರ್‌ಗಳು ಕೂಡ ಈ ಪಿಚ್‌ನಲ್ಲಿ ಹಿಡಿತವನ್ನು ಹೊಂದುವ ಅವಕಾಶವಿದೆ. ಆದರೆ ಇದು ನಾವು ಸಾಮಾನ್ಯವಾಗಿ ಲಾರ್ಡ್ಸ್ ಅಥವಾ ಓಲ್ಡ್ ಟ್ರಾಫರ್ಡ್‌ನಲ್ಲಿ ಕಾಣಬಹುದಾದ ಹುಲ್ಲಿನಿಂದ ಕೂಡಿದ ಪಿಚ್ ಅಲ್ಲ ಜೊತೆಗೆ ಪಿಚ್ ಸಂಪೂರ್ಣ ಸಮತಟ್ಟಾಗಿಯೂ ಇಲ್ಲ. ಹೀಗಾಗಿ ಬೌನ್ಸ್, ವೇಗದ ಜೊತೆಗೆ ಸ್ವಿಂಗ್ ಮೂಲಕವೂ ಬ್ಯಾಟರ್‌ಗಳಿಗೆ ಬೌಲರ್‌ಗಳು ಕಂಗೆಡಿಸಬಹುದು.

ಹವಾಮಾನ ವರದಿ
ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 1ರಿಂದ 5ನೇ ತಾರೀಕಿನವರೆಗೂ ಮೋಡ ಮುಸುಕಿದ ವಾತಾವರಣ ಇರುವುದು ಸ್ಪಷ್ಟ. ಅಲ್ಲದೆ ಪಂದ್ಯದ ಮಧ್ಯೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. ಪಂದ್ಯದ ಎರಡನೇ ದಿನ ಅಂದರೆ ಜುಲೈ 2ರಂದು 69 ಶೇಕಡಾ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಹೆಚ್ಚಾಗಿ ಮಳೆ ಕಾಟ ನೀಡುವ ಸಾಧ್ಯತೆ ಕಡಿಮೆಯಿದೆ.

ಭಾರತ ಸ್ಕ್ವಾಡ್ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ , ಕೆಎಸ್ ಭರತ್ (ವಿಕೆಟ್ ಕೀಪರ್).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications