92 ವರ್ಷಗಳಲ್ಲಿ ಇದೇ ಮೊದಲು; ತಮ್ಮ 100ನೇ ಟೆಸ್ಟ್‌ನಲ್ಲಿ ಬೃಹತ್ ಮೈಲಿಗಲ್ಲು ನಿರ್ಮಿಸಿದ ಆರ್ ಅಶ್ವಿನ್
ಗುರುವಾರ, ಮಾರ್ಚ್ 7ರಂದು ಭಾರತ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಧರ್ಮಶಾಲಾದಲ್ಲಿ ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವಾಗ ದೊಡ್ಡ ಮೈಲಿಗಲ್ಲು ಸ್ಥಾಪಿಸಿದರು.
ಆರ್ ಅಶ್ವಿನ್ ಇತ್ತೀಚೆಗೆ ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ 500 ವಿಕೆಟ್‌ಗಳನ್ನು ಪಡೆದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡರು. ಇದೀಗ ಅವರು ತಮ್ಮ 100ನೇ ಟೆಸ್ಟ್ ಪಂದ್ಯಕ್ಕಾಗಿ ಮೈದಾನಕ್ಕಿಳಿದಾಗ, ಈ ಮೈಲಿಗಲ್ಲು ಸಾಧಿಸಿದ ಅತ್ಯಂತ ಹಿರಿಯ ಭಾರತೀಯ ಕ್ರಿಕೆಟಿಗ ಎಂಬ ಇತಿಹಾಸ ನಿರ್ಮಿಸಿದರು.

ಒಟ್ಟಾರೆಯಾಗಿ ರವಿಚಂದ್ರನ್ ಅಶ್ವಿನ್ 100 ಟೆಸ್ಟ್ ಪಂದ್ಯಗಳನ್ನು ಆಡಿದ 14ನೇ ಭಾರತದ ಕ್ರಿಕೆಟಿಗರಾದರು. ಇದೇ ವೇಳೆ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಇದನ್ನು ಮಾಡಿದ ಮೊದಲ ಆಟಗಾರನಾಗಿದ್ದಾರೆ.
100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನಾಡಿದ ಇತರರೆಂದರೆ, ಸುನಿಲ್ ಗವಾಸ್ಕರ್ (125), ದಿಲೀಪ್ ವೆಂಗ್‌ಸರ್ಕರ್ (116), ಕಪಿಲ್ ದೇವ್ (131), ಸಚಿನ್ ತೆಂಡೂಲ್ಕರ್ (200), ಅನಿಲ್ ಕುಂಬ್ಳೆ (132), ರಾಹುಲ್ ದ್ರಾವಿಡ್ (164), ಸೌರವ್ ಗಂಗೂಲಿ (113), ವಿವಿಎಸ್ ಲಕ್ಷ್ಮಣ್ (134), ಹರ್ಭಜನ್ ಸಿಂಗ್ (103), ವೀರೇಂದ್ರ ಸೆಹ್ವಾಗ್ (104), ಇಶಾಂತ್ ಶರ್ಮಾ (105), ವಿರಾಟ್ ಕೊಹ್ಲಿ (113) ಮತ್ತು ಚೇತೇಶ್ವರ ಪೂಜಾರ (103).
ಒಟ್ಟಾರೆಯಾಗಿ, ಜೆಫ್ರಿ ಬಾಯ್‌ಕಾಟ್ (40 ವರ್ಷ, 254 ದಿನ), ಕ್ಲೈವ್ ಲಾಯ್ಡ್ (39 ವರ್ಷ, 241 ದಿನ), ಗ್ರಹಾಂ ಗೂಚ್ (39 ವರ್ಷ, 190 ದಿನ), ಗಾರ್ಡನ್ ಗ್ರೀನಿಡ್ಜ್ (38 ವರ್ಷ, 346 ದಿನ) ಮತ್ತು ಯೂನಿಸ್ ಖಾನ್ (37 ವರ್ಷ, 208 ದಿನ) ನಂತರ ರವಿಚಂದ್ರನ್ ಅಶ್ವಿನ್ ತನ್ನ 100ನೇ ಟೆಸ್ಟ್ ಪಂದ್ಯವನ್ನು ಆಡಿದ ಆರನೇ ಹಿರಿಯ ಕ್ರಿಕೆಟಿಗನಾದರು.
ಗುರುವಾರ ನಡೆದ ಐದನೇ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ಭಾರತದ ಬ್ಯಾಟ್ಸ್‌ಮನ್‌ಗಳು ಪ್ರಬಲವಾಗಿ ಪ್ರಾರಂಭಿಸಿದರೆ, ಇದಕ್ಕೂ ಮುನ್ನ ಕುಲದೀಪ್ ಯಾದವ್ ಇಂಗ್ಲೆಂಡ್ ತಂಡವನ್ನು 218 ರನ್‌ಗಳಿಗೆ ಆಲೌಟ್ ಮಾಡಲು ಐದು ವಿಕೆಟ್ ಪಡೆದು ನೆರವಾದರು.
ಕುಲದೀಪ್ ಯಾದವ್ 72 ರನ್ ನೀಡಿ 5 ವಿಕೆಟ್ ಪಡೆದರೆ, ಸಹ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಹೆಗ್ಗುರುತಾಗಿರುವ 100ನೇ ಟೆಸ್ಟ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ಸುಂದರವಾದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಕೇವಲ 57.4 ಓವರ್‌ಗಳಲ್ಲಿ ಪ್ರವಾಸಿ ತಂಡವನ್ನು ಆಲೌಟ್ ಮಾಡಿದರು.
ಇನ್ನು ಭಾರತ ತಂಡವು ಮೊದಲ ದಿನದಾಟದಂತ್ಯಕ್ಕೆ 135 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ ಮತ್ತು ಇನ್ನೂ 83 ರನ್‌ಗಳಿಂದ ಇಂಗ್ಲೆಂಡ್‌ಗಿಂತ ಹಿಂದುಳಿದಿದೆ.
ನಾಯಕ ರೋಹಿತ್ ಶರ್ಮಾ 52 ರನ್ ಮತ್ತು ಶುಭ್ಮನ್ ಗಿಲ್ 26 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರೆ, ಇದಕ್ಕೂ ಮುನ್ನ ಆರಂಭಿಕ ಯಶಸ್ವಿ ಜೈಸ್ವಾಲ್ 57 ರನ್ ಗಳಿಸಿ ಔಟಾದರು.
ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಸ್ಪಿನ್ನರ್ ಶೋಯೆಬ್ ಬಶೀರ್ ಅವರ ಒಂದು ಓವರ್‌ನಲ್ಲಿ ಮೂರು ಸಿಕ್ಸರ್ ಬಾರಿಸಿ 712 ರನ್‌ಗಳೊಂದಿಗೆ ಸರಣಿಯ ಅಗ್ರಸ್ಥಾನದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
22 ವರ್ಷದ ಯಶಸ್ವಿ ಜೈಸ್ವಾಲ್ ಕಳೆದ ವರ್ಷ ಚೊಚ್ಚಲ ಪಂದ್ಯದಿಂದ ಕೇವಲ 16ನೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 1,000 ರನ್‌ಗಳನ್ನು ಗಳಿಸಿದರು. ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (14 ಇನ್ನಿಂಗ್ಸ್) ನಂತರ ಈ ದಾಖಲೆಯನ್ನು ಗಳಿಸಿದ ಎರಡನೇ ವೇಗದ ಭಾರತೀಯನಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications