ನಾನು ಕಂಡ ಅತ್ಯುತ್ತಮ ಜೊತೆಯಾಟವದು: ಭಾರತೀಯ ಜೋಡಿಯ ಬ್ಯಾಟಿಂಗ್‌ಗೆ ತಲೆಬಾಗಿದ ಡಿವಿಲಿಯರ್ಸ್

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆತಿಥೆಯ ಇಂಗ್ಲೆಂಡ್ ವಿರುದ್ಧ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಭಾರತ ತನ್ನದೇ ರೀತಿಯಲ್ಲಿ ಪೆಟ್ಟುಕೊಟ್ಟಿದೆ. ಹೀಗಾಗಿ ಭಾರತ ಈ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ.
ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭದಲ್ಲಿ ಭಾರೀ ಕುಸಿತಕ್ಕೆ ಒಳಗಾಗಿ ಆಘಾತಕ್ಕೆ ಒಳಗಾಗಿತ್ತು. ಆದರೆ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಜೋಡಿ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರೀ ಕುಸಿತದಿಂದ ಪಾರು ಮಾಡಿದ್ದಲ್ಲದೆ ಭಾರತ ತಂಡ ದೊಡ್ಡ ಮೊತ್ತ ಗಳಿಸಲು ಕಾರಣವಾದರು. ನಂತರ ಭಾರತ ತಂಡದ ಬೌಲಿಂಗ್ ವಿಭಾಗ ಕುಡ ಅದ್ಭುತ ಪ್ರದರ್ಶನ ನಿಡುವ ಮೂಲಕ ತನ್ನ ಜವಾಬ್ಧಾರಿಯನ್ನು ಕೂಡ ಅದ್ಭುತವಾಗಿ ನಿರ್ವಹಿಸಿದೆ.
ಇನ್ನು ಈ ಪಂದ್ಯದ ವಿಚಾರವಾಗಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ಒಂದು ಜೋಡಿಯ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಪಂತ್- ಜಡೇಜಾ ಬ್ಯಾಟಿಂಗ್‌ಗೆ ತಲೆದೂಗಿದ ಎಬಿಡಿ
ಮೊದಲ ಇನ್ನಿಂಗ್ಸ್‌ನಲ್ಲಿ ಕುಸಿಯುತ್ತಿದ್ದ ಭಾರತ ತಂಡಕ್ಕೆ ಆಸರೆಯಾಗಿದ್ದು ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಜೋಡಿ. ಈ ಇಬ್ಬರು ಆಟಗಾರರು ಕೂಡ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡವನ್ನು ಕುಸಿತದಿಂದ ಪಾರು ಮಾಡಿದ ಪಂತ್ ಜಡೇಜಾ ಜೋಡಿ 222 ರನ್‌ಗಳ ಜೊತೆಯಾಟವನ್ನು ನೀಡಿದ್ದರು. ಪಂತ್ 146 ರನ್ ಸಿಡಿಸಿ ವಿಕೆಟ್ ಕಳೆದುಕೊಂಡರೆ ನಂತರ ಹೋರಾಟ ಮುಂದುವರಿಸಿದ ಜಡೇಜಾ ಕೂಡ ಶತಕ ಪೂರ್ಣಗೊಳಿಸಿರು.

ಇಂಥಾ ಕೌಂಟರ್ ಅಟ್ಯಾಕ್ ಜೊತೆಯಾಟ ನೋಡಿಲ್ಲ
ಮೊದಲ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಜೋಡಿಯ ಪ್ರದರ್ಶನವನ್ನು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಲಿಯರ್ಸ್ ಮೆಚ್ಚಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಕಂಡ ಅತ್ಯುತ್ತಮ ಜೊತೆಯಾಟವಿದು ಎಂದಿದ್ದಾರೆ ಎಬಿ ಡಿವಿಲಿಯರ್ಸ್. ಈ ಮೂಲಕ ಭಾರತೀಯರ ಆಟಕ್ಕೆ ದಿಗ್ಗಜ ಆಟಗಾರ ಶಬ್ಬಾಶ್‌ಗಿರಿ ನೀಡಿದ್ದಾರೆ.

ಹೈಲೈಟ್ಸ್ ನೋಡಿರುವುದಾಗಿ ಹೇಳಿದ ಎಬಿಡಿ
ಟ್ವಿಟ್ ಮೂಲಕ ಎಬಿ ಡಿವಿಲಿಯರ್ಸ್ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಮನೆಯಲ್ಲಿಲ್ಲದ ಕಾರಣ ಹೆಚ್ಚಿನ ಕ್ರಿಕೆಟ್ ಪಂದ್ಯಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಈಗಷ್ಟೇ ಈ ಪಂದ್ಯದ ಹೈಲೈಟ್ಸ್ ನೋಡಿ ಮುಗಿಸಿದ್ದೇನೆ. ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರಿಂದ ಬಂದಿರುವ ಈ ಅದ್ಭುತವಾದ ಜೊತೆಯಾಟ ನಾನು ಕಂಡಿರುವ ಟೆಸ್ಟ್ ಜೊತೆಯಾಟಗಳ ಪೈಕಿ ಶ್ರೇಷ್ಠವಾಗಿದ್ದು" ಎಂದಿದ್ದಾರೆ ಎಬಿ ಡಿವಿಲಿಯರ್ಸ್.

ಇಂಗ್ಲೆಂಡ್‌ಗೆ ಗೆಲ್ಲಲು 378 ರನ್‌ಗಳ ಗುರಿ ನೀಡಿದ ಭಾರತ
ಇನ್ನು ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸಲು ವಿಫಲವಾಯಿತು. ಚೇತೇಶ್ವರ್ ಪೂಜಾರ ಹಾಗೂ ರಷಬ್ ಪಂತ್ ಮಾತ್ರವೇ ಅರ್ಧ ಶತಕಗಳಿಸಲು ಯಶಸ್ವಿಯಾದರು. ಹೀಗಾಗಿ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 245 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆತಿಥೆಯ ಇಂಗ್ಲೆಂಡ್ ತಂಡಕ್ಕೆ ಭಾರತ 378 ರನ್‌ಗಳನ್ನು ಗಳಿಸುವ ಸವಾಲು ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications