ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ 24ರ ಹರೆಯದ ಆಲ್‌ರೌಂಡರ್ ಅಭಿಷೇಕ್ ಶರ್ಮಾ ಅವರ ಅದ್ಭುತ ಪ್ರದರ್ಶನದಿಂದಾಗಿ ಭಾರತ ತಂಡ ಐದನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 150 ರನ್‌ಗಳಿಂದ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ 135 ರನ್‌ಗಳ ಶತಕ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಮಾಡಿದರು. ಇದೇ ವೇಳೆ ಅವರು ಅನೇಕ ದೊಡ್ಡ ದಾಖಲೆಗಳನ್ನು ಸಹ ಮುರಿದರು.
ಇಂಗ್ಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ದೊಡ್ಡ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಯುವರಾಜ್ ಸಿಂಗ್ ಯಾವಾಗಲೂ ಬಯಸಿದ್ದನ್ನು ಇಂದು ನಾನು ಮಾಡಿದ್ದೇನೆ ಎಂದು ಹೇಳಿದ್ದಾರೆ.

ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಬಿಗ್ ಇನ್ನಿಂಗ್ಸ್ ಆಡಿದ ಅಭಿಷೇಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ವೇಳೆ ಮಾತನಾಡಿದ ಅಭಿಷೇಕ್ ಶರ್ಮಾ, ಇಂದು ನನ್ನ ದಿನ, ಹಾಗಾಗಿ ನಾನು ಮೊದಲ ಎಸೆತದಲ್ಲಿ ಆಕ್ರಮಣ ಮಾಡಲು ಪ್ರಾರಂಭಿಸಿದೆ. ನನ್ನ ಆಟದ ವಿಧಾನವನ್ನು ಬೆಂಬಲಿಸಿದ್ದಕ್ಕಾಗಿ ಕೋಚ್ ಮತ್ತು ನಾಯಕನಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರು ನನ್ನಿಂದಲೂ ಅದೇ ರೀತಿಯ ಆಟವನ್ನು ನಿರೀಕ್ಷಿಸುತ್ತಾರೆ. ಅವರು ಯಾವಾಗಲೂ ನನ್ನನ್ನು ಬೆಂಬಲಿಸಿದ್ದಾರೆ ಎಂದಿದ್ದಾರೆ.
ಆರ್ಚರ್ ವಿರುದ್ಧ ಹೊಡೆದ ಹೊಡೆತಗಳ ಬಗ್ಗೆ ನೀವು ಏನು ಹೇಳಿದ್ದೀರಿ? ಎಂಬ ಪ್ರಶ್ನೆ ಉತ್ತರಿಸಿದ ಅಭಿಷೇಕ್ ಶರ್ಮಾ, 'ಎದುರಾಳಿ ತಂಡದ ಬೌಲರ್‌ಗಳು 140 ಅಥವಾ 150 (ಗಂಟೆಗೆ ಕಿಲೋಮೀಟರ್) ಗಿಂತ ಹೆಚ್ಚು ಬೌಲಿಂಗ್ ಮಾಡುವಾಗ, ನೀವು ಸ್ವಲ್ಪ ಮುಂಚಿತವಾಗಿ ಸಿದ್ಧರಾಗಿರಬೇಕು. ಅಂತಹ ಪರಿಸ್ಥಿತಿಯಲ್ಲಿ, ಚೆಂಡಿಗೆ ಪ್ರತಿಕ್ರಿಯಿಸಿ, ನಿಮ್ಮ ಹೊಡೆತವನ್ನು ಪ್ಲೇ ಮಾಡಿ. ನೀವು ವಿಶ್ವ ದರ್ಜೆಯ ಬೌಲರ್ (ಆರ್ಚರ್) ಅನ್ನು ಕವರ್ ಮೇಲೆ ಹೊಡೆದಾಗ ಸಿಕ್ಸರ್ ಉತ್ತಮವಾಗಿದೆ. ಇದಲ್ಲದೆ, ಆದಿಲ್ ರಶೀದ್ ವಿರುದ್ಧ ಉತ್ತಮವಾಗಿ ಆಡಿದ್ದೇನೆ. ಇದನ್ನು ನಾನು ನಿಜವಾಗಿಯೂ ಇಷ್ಟಪಟ್ಟೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಮೆಂಟರ್, ಟೀಮ್ ಇಂಡಿಯಾ ಮಾಜಿ ಚಾಂಪಿಯನ್ ಯುವರಾಜ್ ಸಿಂಗ್ ಅವರ ಬಗ್ಗೆಯೂ ಮಾತನಾಡಿದ್ದಾರೆ. ನನ್ನ ಇನ್ನಿಂಗ್ಸ್ ನೋಡಿದ ಯುವರಾಜ್ ಸಿಂಗ್ ಅವರಿಗೆ ಬಹುಶಃ ಇಂದು ಸಂತೋಷವಾಗಿರುತ್ತಾರೆ. ಅವರು ಯಾವಾಗಲೂ ನಾನು 15, 20 ನೇ ಓವರ್ ವರೆಗೆ ಬ್ಯಾಟಿಂಗ್ ಮಾಡಬೇಕೆಂದು ಬಯಸಿದ್ದರು. ಇಂದು ಅದನ್ನು ನಾನು ಮಾಡಲು ಪ್ರಯತ್ನಿಸಿದೆ ಎಂದು ಯುವರಾಜ್ ಬಯಸಿದ್ದನ್ನು ಅಭಿಷೇಕ್ ಶರ್ಮಾ ಬಹಿರಂಗಪಡಿಸಿದ್ದಾರೆ.