For Quick Alerts
ALLOW NOTIFICATIONS  
For Daily Alerts
 

IND vs ENG: ದಿನದಾಟದ ಬಳಿಕ ಕಂಡ ದೃಶ್ಯ ಭಾರೀ ಚರ್ಚೆ: ಅಶ್ವಿನ್‌, ಅಂಪೈರ್‌ ನಡುವೆ ಮಾತಿನ ಚಕಮಕಿ

ವಿಶಾಖಪಟ್ಟಣಂ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಸುದ್ದಿಯಲ್ಲಿದ್ದರೆ, ದಿನದ ಕೊನೆಯ ಎಸೆತದ ನಂತರ ರವಿಚಂದ್ರನ್ ಅಶ್ವಿನ್ ಮತ್ತು ಆನ್-ಫೀಲ್ಡ್ ಅಂಪೈರ್ ಮರ್ರೆ ಎರಾಸ್ಮಸ್ ಯಾವುದೋ ವಿಷಯದ ಬಗ್ಗೆ ವಾದ ಮಾಡಿದರು.

ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿದೆ. ಇದರಲ್ಲಿ ಯಶಸ್ವಿ ಜೈಸ್ವಾಲ್ ಅವರ ಅಜೇಯ 179 ರನ್‌ಗಳು ಪ್ರಮುಖ ಪಾತ್ರವಹಿಸಿದೆ. ಮೊದಲ ದಿನದಾಟದಲ್ಲಿ 93 ಓವರ್‌ಗಳ ಆಟ ಮಾತ್ರ ಕಂಡುಬಂತು.

IND vs ENG: Ashwin and umpire Marais Erasmus embroil in animated quarrel on Day 1

ಇಂಗ್ಲೆಂಡ್ ವಿರುದ್ಧದ ಮೊದಲ ದಿನದ ಕೊನೆಯ ಸೆಷನ್‌ನಲ್ಲಿ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್‌ಗೆ ಬಂದಾಗ ಸಾಕಷ್ಟು ಓವರ್‌ಗಳು ಬಾಕಿ ಉಳಿದಿದ್ದವು. ಅಂತಹ ಪರಿಸ್ಥಿತಿಯಲ್ಲಿ, ಅವರು ಬಹಳ ಎಚ್ಚರಿಕೆಯಿಂದ ಆಡುತ್ತಿದ್ದರು. 90 ಓವರ್‌ಗಳ ಆಟ ಪೂರ್ಣಗೊಂಡಾಗ, ಅಂಪೈರ್‌ಗಳು ಸಮಯ ಇರುವವರೆಗೆ ಆಟವನ್ನು ಮುಂದುವರಿಸಲು ನಿರ್ಧರಿಸಿದರು. ಇದಾದ ಬಳಿಕ 93ನೇ ಓವರ್‌ನ ಕೊನೆಯ ಎಸೆತವನ್ನು ಎಸೆದ ರವಿಚಂದ್ರನ್ ಅಶ್ವಿನ್ ಆಡಿದ ತಕ್ಷಣ ಡ್ರೆಸ್ಸಿಂಗ್ ರೂಮ್ ಕಡೆಗೆ ತೆರಳಿದರು.

ಅಶ್ವಿನ್ ಅವರನ್ನು ನೋಡಿದ ಅಂಪೈರ್ ಹಾಗೂ ಮೈದಾನದಲ್ಲಿ ಹಾಜರಿದ್ದ ಇಂಗ್ಲೆಂಡ್ ತಂಡದ ಆಟಗಾರರು ಸಾಕಷ್ಟು ಅಚ್ಚರಿಗೊಂಡರು. ಇದಾದ ನಂತರ ಮೈದಾನದ ಅಂಪೈರ್ ಮರ್ರೆ ಎರಾಸ್ಮಸ್ ಅಶ್ವಿನ್ ಅವರನ್ನು ತಡೆದು ಏನೋ ಹೇಳಿದರು. ಆದರೆ ಇಬ್ಬರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಆದರೆ, ಮೊದಲ ದಿನದಾಟ ಮುಗಿದ ಬಳಿಕ ಪತ್ರಿಕಾಗೋಷ್ಠಿಗೆ ಬಂದಿದ್ದ ರಜತ್ ಪಾಟಿದಾರ್ ಅವರನ್ನು ಈ ಘಟನೆ ಕುರಿತು ಕೇಳಿದಾಗ, ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದರು.

IND vs ENG: Ashwin and umpire Marais Erasmus embroil in animated quarrel on Day 1

ಮೊದಲ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ತಮ್ಮ ಅಜೇಯ ಶತಕದ ಮೂಲಕ ಎಲ್ಲರ ಮನ ಗೆದ್ದರೆ, ಇತರ ಭಾರತೀಯ ಬ್ಯಾಟ್ಸ್‌ಮನ್‌ಗಳು ಖಂಡಿತವಾಗಿಯೂ ನಿರಾಸೆ ಮೂಡಿಸಿದರು. ನಾಯಕ ರೋಹಿತ್ ಶರ್ಮಾ ಕೇವಲ 14 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರೆ, ಶುಭ್ ಮನ್ ಗಿಲ್ ಕೇವಲ 34 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 27 ರನ್ ಗಳಿಸಲಷ್ಟೇ ಶಕ್ತರಾದರು.

ಇದಲ್ಲದೇ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಜತ್ ಪಾಟಿದಾರ್ ಕೂಡ ಕೇವಲ 32 ರನ್ ಗಳ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರು. ಇದೀಗ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ 500ರ ಸಮೀಪಕ್ಕೆ ರನ್ ಗಳನ್ನು ತೆಗೆದುಕೊಂಡು ಹೋಗುವತ್ತ ಚಿತ್ತ ನೆಟ್ಟಿದೆ.

Story first published: Saturday, February 3, 2024, 7:20 [IST]
Other articles published on Feb 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+