For Quick Alerts
ALLOW NOTIFICATIONS  
For Daily Alerts
 

IND vs ENG: ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯಲು ಆಯ್ಕೆದಾರರ ಬಾಗಿಲು ತಟ್ಟುತ್ತಿರುವ ಭುವನೇಶ್ವರ್, ಚೇತೇಶ್ವರ್

ಇದೇ ತಿಂಗಳ ಕೊನೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಟೆಸ್ಟ್‌ ಸರಣಿ ಆರಂಭವಾಗಲಿದೆ. ಈ ಟೆಸ್ಟ್‌ ಸರಣಿಗಾಗಿ ಟೀಮ್ ಇಂಡಿಯಾವನ್ನು ಇನ್ನು ಘೋಷಿಸಿಲ್ಲ. ತಂಡದಲ್ಲಿ ಸ್ಥಾನ ಪಡೆಯಲು ಟೆಸ್ಟ್‌ ಸ್ಪೇಷಲಿಸ್ಟ್‌ ಚೇತೇಶ್ವರ್ ಪೂಜಾರ ಹಾಗೂ ವೇಗಿ ಭುವನೇಶ್ವರ್ ಕುಮಾರ್‌ ರಣಜಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಆಯ್ಕೆದಾರರ ಕದ ತಟ್ಟುತ್ತಿದ್ದಾರೆ.

ರಣಜಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಿರುವ ಚೇತೇಶ್ವರ್ ಪೂಜಾರ್ ಈ ಸಾಲಿನ ಮೊದಲ ರಣಜಿ ಟೂರ್ನಿಯ ಪಂದ್ಯದಲ್ಲೇ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಕ್ಷಮತೆ ಇರುವುದಾಗಿ ಸಾಬೀತು ಮಾಡಿದ್ದರು. ಅಲ್ಲದೆ ಮೊದಲ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿ ಅಬ್ಬರಿಸಿದ್ದರು.

IND vs ENG: Bhubaneswar, Cheteshwar are knocking on the door of selectors to get a place in the Test team

ಹರಿಯಾಣ ವಿರುದ್ಧದ ಎರಡನೇ ಪಂದ್ಯದಲ್ಲೂ ಪೂಜಾರ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಸೌರಾಷ್ಟ್ರ 145 ರನ್‌ಗಳಿಗೆ ಸರ್ವಪತನ ಕಂಡಿದೆ. ತಂಡದ ಪರ ಗರಿಷ್ಠ ರನ್‌ ಕಲೆ ಹಾಕಿದವರ ಲೀಸ್ಟ್‌ನಲ್ಲಿ ಪೂಜಾರ ಅಗ್ರಸ್ಥಾನೀಯವಾಗಿ ನಿಲ್ಲುತ್ತಾರೆ. ಹರಿಯಣ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ 100 ಎಸೆತಗಳನ್ನು ಎದುರಿಸಿ 49 ರನ್ ಬಾರಿಸಿದರು. ಈ ಮೂಲಕ ತಮ್ಮನ್ನು ಕಡೆಗಣಿಸದಂತೆ ಆಯ್ಕೆದಾರರಿಗೆ ಸಂದೇಶ ನೀಡಿದರು.

ಮತ್ತೊಬ್ಬ ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಅವರು 2022 ರಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಆದರೆ ಅಂದಿನಿಂದ ಟೀಂ ಇಂಡಿಯಾಗೆ ಮರಳಲು ಪ್ರಯತ್ನ ನಡೆಸಿದ್ದಾರೆ.

2023-24ರ ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ಪರ ಆಡುತ್ತಿರುವ ಭುವನೇಶ್ವರ್ ಕುಮಾರ್ ಅಬ್ಬರಿಸಿದ್ದಾರೆ. ಬಂಗಾಳದ ವಿರುದ್ಧ ಇನಿಂಗ್ಸ್‌ನ ಆರಂಭದಲ್ಲಿ ಭುವನೇಶ್ವರ್ ಮೂರು ವಿಕೆಟ್ ಪಡೆದರು. ಇದಾದ ಬಳಿಕ ನಾಯಕ ಮನೋಜ್ ತಿವಾರಿ ರೂಪದಲ್ಲಿ ನಾಲ್ಕನೇ ವಿಕೆಟ್ ಪಡೆದರು.

IND vs ENG: Bhubaneswar, Cheteshwar are knocking on the door of selectors to get a place in the Test team

ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 60 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಸೌರವ್ ಪಾಲ್ ಮತ್ತು ಶ್ರೇಯಾಂಶ್ ಘೋಷ್ ಬಂಗಾಳಕ್ಕೆ ಓಪನಿಂಗ್ ಮಾಡಿದರು.

ಮೊದಲ ದಿನ ಭುವಿ ಭರ್ಜರಿಯಾಗಿ ಪ್ರದರ್ಶನ ನೀಡಿದ್ದಾರೆ. ಶುಕ್ರವಾರ ಬಿದ್ದ ಐದೂ ವಿಕೆಟ್‌ಗಳನ್ನು ಭುವಿ ಪಡೆದು ಮಿಂಚಿದ್ದಾರೆ. ಈ ಮೂಲಕ ತಾವು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಿದ್ಧ ಎಂಬುದಾಗಿ ತಿಳಿಸಿದ್ದಾರೆ.

ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ ತಂಡದ ಆಯ್ಕೆಗೆ ಈ ಇಬ್ಬರೂ ಸ್ಟಾರ್ ಆಟಗಾರರು ತಮ್ಮ ಇರುವೆಕೆಯನ್ನು ತೋರಿಸಿದ್ದಾರೆ. ನಿಜಕ್ಕೂ ಈ ವೀಕೆಂಡ್‌ ಯುವ ಆಟಗಾರರ ಪಾಲಿಗಂತೂ ತುಂಬಾನೆ ಮಹತ್ವದಾಗಿದೆ. ದೇಶೀಯ ಟೂರ್ನಿಯಲ್ಲಿ ಮಿಂಚಿ, ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಆಸೆಯನ್ನು ಹೊಂದಿರುವ ಶ್ರೇಯಸ್‌ ಅಯ್ಯರ್, ಇಶಾನ್‌ ಕಿಶನ್‌ ಸಹ ರಣಜಿ ಟೂರ್ನಿಯಲ್ಲಿ ಅಖಾಡ ಪ್ರವೇಶಿಸಿದ್ದಾರೆ.

Story first published: Friday, January 12, 2024, 19:49 [IST]
Other articles published on Jan 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+