For Quick Alerts
ALLOW NOTIFICATIONS  
For Daily Alerts
 

IND vs ENG: ಭಾರತ ವಿರುದ್ಧ 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ಗೆ ಆಘಾತ; ಸ್ಟಾರ್ ಸ್ಪಿನ್ನರ್‌ ಔಟ್!

ಶುಕ್ರವಾರ, ಜನವರಿ 2ರಿಂದ ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಆತಿಥೇಯ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಪ್ರವಾಸಿ ಇಂಗ್ಲೆಂಡ್ ತಂಡದ ಸ್ಟಾರ್ ಸ್ಪಿನ್ನರ್ ಜಾಕ್ ಲೀಚ್ ಹೊರಗುಳಿದಿದ್ದಾರೆ.

ತನ್ನ ಎಡ ಮೊಣಕಾಲಿನ ಗಾಯದಿಂದಾಗಿ ಇಂಗ್ಲೆಂಡ್ ತಂಡದ ಭಾಗವಾಗದ ಜ್ಯಾಕ್ ಲೀಚ್ ಅವರ ಸುತ್ತಲಿನ ಬೆಳವಣಿಗೆಯನ್ನು ತ್ರೀ ಲಯನ್ಸ್ ನಾಯಕ ಬೆನ್ ಸ್ಟೋಕ್ಸ್ ಮುಂದಿಟ್ಟರು.

IND vs ENG: Big Blow for England; Star Spinner Jack Leach Rulled out of 2nd Test vs India

ಸ್ಟಾರ್ ಸ್ಪಿನ್ನರ್ ಜ್ಯಾಕ್ ಲೀಚ್ ಎಡ ಮೊಣಕಾಲಿನ ಗಾಯದಿಂದಾಗಿ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವುದರಿಂದ ಪ್ರವಾಸಿ ಇಂಗ್ಲೆಂಡ್ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ.

"ಜ್ಯಾಕ್ ಲೀಚ್ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದಾರೆ. ದುರದೃಷ್ಟವಶಾತ್, ಅವರು ತೆಗೆದುಕೊಂಡ ನಾಕ್ ಹೆಮಟೋಮಾಕ್ಕೆ ಕಾರಣವಾಯಿತು," ಎಂದು ಸ್ಕೈ ಸ್ಪೋರ್ಟ್ಸ್‌ನಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಜ್ಯಾಕ್ ಲೀಚ್ ಅವರು 36 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವದೊಂದಿಗೆ ಹಾಲಿ ತಂಡದ ಅತ್ಯಂತ ಹಿರಿಯ ಸ್ಪಿನ್ನರ್ ಆಗಿದ್ದರು. ರೆಹಾನ್ ಅಹ್ಮದ್ ತನ್ನ ಹೆಸರಿಗೆ ಎರಡು ಪಂದ್ಯಗಳನ್ನು ಹೊಂದಿದ್ದು, ಟಾಮ್ ಹಾರ್ಟ್ಲಿ ಹೈದರಾಬಾದ್‌ನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.

IND vs ENG: Big Blow for England; Star Spinner Jack Leach Rulled out of 2nd Test vs India

ಇತ್ತೀಚೆಗಷ್ಟೇ ಇಂಗ್ಲೆಂಡ್ ಪಾಳಯ ಸೇರಿಕೊಂಡಿರುವ ಶೋಯೆಬ್ ಬಶೀರ್ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ. ಇಂತಹ ಸನ್ನಿವೇಶದಲ್ಲಿ, ಮಾಜಿ ನಾಯಕ ಜೋ ರೂಟ್ ಪ್ರಮುಖ ಸ್ಪಿನ್ನರ್‌ನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಬಹುದು ಮತ್ತು ಇತರ ಮೂವರು ಸ್ಪಿನ್ನರ್‌ಗಳು ಜೋ ರೂಟ್‌ಗೆ ಸಾಥ್ ನೀಡಲಿದ್ದಾರೆ.

ಮೊದಲ ಟೆಸ್ಟ್‌ ಪಂದ್ಯದ 2ನೇ ದಿನದಂದು ಜ್ಯಾಕ್ ಲೀಚ್ ಗಾಯಗೊಂಡರು ಎಂದು ಹೇಳಲಾಗಿದೆ. 32 ವರ್ಷದ ಜ್ಯಾಕ್ ಲೀಚ್ ಮೊದಲ ಇನಿಂಗ್ಸ್‌ನಲ್ಲಿ 26 ಓವರ್‌ಗಳನ್ನು ಬೌಲ್ ಮಾಡಿದರು ಮತ್ತು ನಂತರದ ಪಂದ್ಯದಲ್ಲಿ ಕೇವಲ ಹತ್ತು ಓವರ್‌ಗಳನ್ನು ಬೌಲ್ ಮಾಡಲು ಸಾಧ್ಯವಾಯಿತು.

ಎರಡನೇ ಪಂದ್ಯದ ಆರಂಭಕ್ಕೂ ಮುನ್ನ ಜ್ಯಾಕ್ ಲೀಚ್ ಬುಧವಾರದ ಅಭ್ಯಾಸ ಅವಧಿಯನ್ನು ತಪ್ಪಿಸಿಕೊಂಡರು ಮತ್ತು ಇದರ ನಂತರ, ಇಂಗ್ಲೆಂಡ್ ನಾಯಕ ಸ್ಪಿನ್ನರ್‌ನ ಗಾಯದ ಬೆಳವಣಿಗೆಯನ್ನು ದೃಢಪಡಿಸಿದರು.

ಜ್ಯಾಕ್ ಲೀಚ್ ಅವರ ಅನುಪಸ್ಥಿತಿಯು ಯುವ ಸ್ಪಿನ್ನರ್ ಶೋಯೆಬ್ ಬಶೀರ್‌ಗೆ ಅವಕಾಶದ ಬಾಗಿಲು ತೆರೆಯುತ್ತದೆ. ಏಕೆಂದರೆ 20 ವರ್ಷದ ಆಟಗಾರನು ಆಡುವ 11ರ ಬಳಗದಲ್ಲಿ ಜ್ಯಾಕ್ ಲೀಚ್ ಬದಲಿಗೆ ನೆಚ್ಚಿನ ಆಟಗಾರನಾಗಿದ್ದಾನೆ.

ಶೋಯೆಬ್ ಬಶೀರ್ ತಮ್ಮ ವೃತ್ತಿಜೀವನದಲ್ಲಿ ಆರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು 67ರ ಸರಾಸರಿಯಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತೊಂದೆಡೆ, ಐದು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡ 2-0 ಅಂತರದಲ್ಲಿ ಮುನ್ನಡೆ ಸಾಧಿಸಲು, ಕಳೆದ ಪಂದ್ಯದ ಫಲಿತಾಂಶ ಪುನರಾವರ್ತಿಸುವ ಗುರಿಯನ್ನು ಹೊಂದಿದೆ. ಟಾಮ್ ಹಾರ್ಟ್ಲಿ ತನ್ನ ಚೊಚ್ಚಲ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳನ್ನು ಬೆರಗುಗೊಳಿಸಿದರು.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 28 ರನ್‌ಗಳಿಂದ ಗೆದ್ದ ನಂತರ, ಇಂಗ್ಲೆಂಡ್ ತನ್ನ ಅಭಿಯಾನವನ್ನು ಭಾರತದ ನೆಲದಲ್ಲಿ ಅದ್ಭುತವಾಗಿ ಪ್ರಾರಂಭಿಸಿತು. ಟಾಮ್ ಹಾರ್ಟ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಸೇರಿದಂತೆ ಒಟ್ಟು 9 ವಿಕೆಟ್ ಪಡೆದರು.

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಪರ 196 ರನ್ ಗಳಿಸಿ ದೊಡ್ಡ ಮೊತ್ತ ಗಳಿಸಲು ಕಾರಣರಾದ ಒಲ್ಲಿ ಪೋಪ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Story first published: Thursday, February 1, 2024, 9:42 [IST]
Other articles published on Feb 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+