ಕೊಹ್ಲಿಯದ್ದು ಹೊಲಸು ಬಾಯಿ ಎಂದ ಇಂಗ್ಲೆಂಡ್ ಕ್ರಿಕೆಟಿಗನಿಗೆ ಸರಿಯಾದ ಪಾಠ ಕಲಿಸಿದ ಪಾಕಿಸ್ತಾನದ ಕನೇರಿಯಾ

ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಗೆಲುವನ್ನು ಸಾಧಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಸಾಧಿಸಿದೆ.
ಲಾರ್ಡ್ಸ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲುವುದು ಖಚಿತ ಎಂದು ಮಾತನಾಡಿಕೊಳ್ಳಲಾಗುತ್ತಿತ್ತು. ಹೌದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟ ಆರಂಭವಾದಾಗಲೂ ಸಹ ಇಂಗ್ಲೆಂಡ್ ತಂಡ ಗೆಲ್ಲಲಿದೆ ಎಂದು ಹೇಳಲಾಗುತ್ತಿತ್ತು ಆದರೆ ತದನಂತರ ಭಾರತ ತಂಡದ ಆಟಗಾರರ ಅತ್ಯುತ್ತಮ ಪ್ರದರ್ಶನದ ಮುಂದೆ ಮಂಕಾದ ಇಂಗ್ಲೆಂಡ್ ಭಾರತಕ್ಕೆ ಶರಣಾಯಿತು. ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ 151 ರನ್‌ಗಳ ಜಯ ಸಾಧಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಲಾರ್ಡ್ಸ್ ಅಂಗಳದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದ ಬೆನ್ನಲ್ಲೇ ಲಾರ್ಡ್ಸ್ ಪಂದ್ಯದ ವೇಳೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಆಟಗಾರರ ನಡುವೆ ನಡೆದ ವಾಕ್ಸಮರದ ಕುರಿತು ಸಾಕಷ್ಟು ಮಾಜಿ ಕ್ರಿಕೆಟಿಗರು ಮಾತನಾಡಿದ್ದಾರೆ. ಅದರಲ್ಲಿಯೂ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಿಕ್ ಕಾಂಪ್ಟನ್ ವಾಕ್ಸಮರದ ಕುರಿತಾಗಿ ವಿರಾಟ್ ಕೊಹ್ಲಿ ವಿರುದ್ಧ ಹರಿಹಾಯ್ದಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ತಂಡದ ಆಟಗಾರರಾದ ಜೇಮ್ಸ್ ಆ್ಯಂಡರ್ಸನ್ ಹಾಗೂ ರಾಬಿನ್ಸನ್ ಜೊತೆ ಮಾತಿನ ಚಕಮಕಿ ನಡೆಸಿದರು. ಈ ವಿಷಯದ ಕುರಿತು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ನಿಕ್ ಕಾಂಪ್ಟನ್ ವಿರಾಟ್ ಕೊಹ್ಲಿ ಓರ್ವ ಹೊಲಸು ಬಾಯಿಯ ಕ್ರಿಕೆಟಿಗ ಎಂದು ಕಿಡಿಕಾರಿದ್ದಾರೆ.
ವಿರಾಟ್ ಕೊಹ್ಲಿ ವಿರುದ್ಧ ಮಾತನಾಡಿದ್ದ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಿಕ್ ಕಾಂಪ್ಟನ್ ಕುರಿತು ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಮಾತನಾಡಿದ್ದು ಆ ಆಂಗ್ಲ ಕ್ರಿಕೆಟಿಗನಿಗೆ ಈ ಕೆಳಕಂಡಂತೆ ಪಾಠ ಹೇಳಿಕೊಟ್ಟಿದ್ದಾರೆ.

ಕೊಹ್ಲಿ ಮಾಡಿದ್ರೆ ತಪ್ಪು, ನೀವು ಮಾಡಿದ್ರೆ ಸರಿನಾ?
ವಿರಾಟ್ ಕೊಹ್ಲಿ ಯಾವಾಗಲೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ವಿರಾಟ್ ಕೊಹ್ಲಿ ಅವರದ್ದು ಹೊಲಸು ಬಾಯಿ ಎಂದ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ನಿಕ್ ಕಾಂಪ್ಟನ್‌ಗೆ ಪ್ರಶ್ನೆ ಹಾಕಿರುವ ದಾನಿಶ್ ಕನೇರಿಯಾ 'ವಿರಾಟ್ ಕೊಹ್ಲಿ ಎದುರಾಳಿಗಳ ಮೇಲೆ ಮೈದಾನದಲ್ಲಿ ಕಿರುಚಾಡಿದರೆ ಅದು ತಪ್ಪು, ಅದೇ ಕೆಲಸವನ್ನು ಇಂಗ್ಲೆಂಡ್ ಆಟಗಾರರು ಮಾಡಿದರೆ ಅದು ನಿಮ್ಮ ಪ್ರಕಾರ ಸರಿ ಅಲ್ಲವೇ? ಯಾವಾಗಲೂ ಕ್ರಿಕೆಟ್‍ನಲ್ಲಿ ನೀವೇ ಅಧಿಕಾರ ಚಲಾಯಿಸಬೇಕಾ? ನಿಮ್ಮನ್ನು ಸದೆಬಡಿಯುವ ದೊಡ್ಡ ತಂಡ ನಿಮ್ಮ ಮೇಲೆ ಅಧಿಕಾರ ಚಲಾಯಿಸಿದಾಗ ಅದನ್ನು ಸ್ವೀಕರಿಸಬೇಕು' ಎಂದು ಸರಿಯಾದ ರೀತಿಯಲ್ಲಿ ಪಾಠ ಕಲಿಸಿದ್ದಾರೆ.

ಕೊಹ್ಲಿ ಯಾವುದೇ ಕೆಟ್ಟ ಪದವನ್ನು ಬಳಸಿಯೇ ಇಲ್ಲ!
ಇನ್ನು ಮೈದಾನದಲ್ಲಿ ವಿರಾಟ್ ಕೊಹ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ್ದರು ಎಂಬ ಆರೋಪವನ್ನು ತಳ್ಳಿಹಾಕಿರುವ ದಾನಿಶ್ ಕನೇರಿಯಾ 'ಇಡೀ ಪಂದ್ಯದಲ್ಲಿ ಎಲ್ಲಿಯೂ ಸಹ ವಿರಾಟ್ ಕೊಹ್ಲಿ ಕೆಟ್ಟ ಪದವನ್ನು ಬಳಸಿಯೇ ಇಲ್ಲ, ವಿರಾಟ್ ಕೊಹ್ಲಿ ಇಷ್ಟು ಪಂದ್ಯಗಳಲ್ಲಿ ಮೈದಾನದಲ್ಲಿ ಯಾವ ರೀತಿ ಕೋಪದಿಂದ ಇರುತ್ತಿದ್ದರೋ ಅದೇ ರೀತಿ ಈ ಪಂದ್ಯದಲ್ಲಿಯೂ ಆಟವನ್ನು ಆಡಿದ್ದಾರೆ ಅಷ್ಟೇ' ಎಂದು ದಾನಿಶ್ ಕನೇರಿಯಾ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.

ಅಷ್ಟಕ್ಕೂ ನಿಕ್ ಕಾಂಪ್ಟನ್ ಕೊಹ್ಲಿ ವಿರುದ್ಧ ಮಾಡಿದ್ದ ಆರೋಪವಾದರೂ ಏನು?
'ವಿರಾಟ್ ಕೊಹ್ಲಿ ಓರ್ವ ಹೊಲಸು ಬಾಯಿಯ ವ್ಯಕ್ತಿಯಲ್ಲವೇ? 2012ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ವಿರಾಟ್ ಕೊಹ್ಲಿ ನನ್ನ ವಿರುದ್ಧ ಬಳಸಿದ ಅವಾಚ್ಯ ಶಬ್ದಗಳನ್ನು ಕೇಳಿ ದಿಗ್ಭ್ರಮೆಗೊಂಡಿದ್ದೆ ಹಾಗೂ ಅದನ್ನು ನನ್ನ ಜೀವನಪೂರ್ತಿ ಮರೆಯುವುದಿಲ್ಲ. ಆದರೆ ಜೋ ರೂಟ್, ಕೇನ್ ವಿಲಿಯಮ್ಸನ್ ಮತ್ತು ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ರೀತಿಯಲ್ಲ ಅವರೆಲ್ಲರೂ ಶಾಂತ ಸ್ವಭಾವದವರು' ಎಂದು ವಿರಾಟ್ ಕೊಹ್ಲಿ ವಿರುದ್ಧ ನಿಕ್ ಕಾಂಪ್ಟನ್ ಕಿಡಿಕಾರಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications