For Quick Alerts
ALLOW NOTIFICATIONS  
For Daily Alerts
 

IND vs ENG: ತವರಿನಲ್ಲಿ ಶತಕ ಸಿಡಿಸಿ ವಿವಾದ ಸೃಷ್ಟಿಸಿದವರ ಬಾಯಿ ಮುಚ್ಚಿಸಿದ ರವೀಂದ್ರ ಜಡೇಜಾ

ಗುರುವಾರ, ಫೆಬ್ರವರಿ 15ರಿಂದ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪ್ರಾರಂಭವಾಗಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಶತಕ ಸಿಡಿಸಿ ಅಬ್ಬರಿಸಿದರು.

ಭಾರತ ತಂಡ 33 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ನಾಯಕ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಜೋಡಿ ನಾಲ್ಕನೇ ವಿಕೆಟ್‌ಗೆ 204 ರನ್‌ಗಳ ಜೊತೆಯಾಟ ನಿರ್ಮಿಸಿ ಭಾರತದ ಹೋರಾಟಕ್ಕೆ ಜೀವ ತುಂಬಿದರು.

IND vs ENG: Despite Controversy Ravindra Jadeja Scores Century in Home Ground Against England


ಮೊದಲು ನಾಯಕ ರೋಹಿತ್ ಶರ್ಮಾ 196 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 131 ರನ್ ಗಳಿಸಿ ಔಟಾದರೆ, ನಂತರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರವೀಂದ್ರ ಜಡೇಜಾ ಕೂಡ ಶತಕ ಬಾರಿಸಿದ ಅಬ್ಬರಿಸಿದರು.

ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ವೈಯಕ್ತಿಕ ಕುಟುಂಬದಲ್ಲಿ ವಿವಾದ ಉಂಟಾಗಿತ್ತು. ರವೀಂದ್ರ ಜಡೇಜಾ ಅವರ ತಂದೆಯೇ ಮಗ ಮತ್ತು ಸೊಸೆ ವಿರುದ್ಧ ಆರೋಪ ಮಾಡಿದ್ದರು. ಆದರೆ, ಈ ವಿವಾದ ರವೀಂದ್ರ ಜಡೇಜಾ ಅವರ ಆಟದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ರೋಹಿತ್ ಶರ್ಮಾ ಜೊತೆ ದ್ವಿಶತಕದ ಜೊತೆಯಾಟವಾಡಿದ ಬಳಿಕ ಸರ್ಫರಾಜ್ ಖಾನ್ ಅವರೊಂದಿಗೆ ಐದನೇ ವಿಕೆಟ್‌ಗೆ 77 ರನ್‌ಗಳ ಪಾಲುದಾರಿಕೆಯಲ್ಲಿ ರವೀಂದ್ರ ಜಡೇಜಾ ಪಾಲ್ಗೊಂಡರು.

ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ಶತಕ ಗಳಿಸಿದ ರವೀಂದ್ರ ಜಡೇಜಾ ತಮ್ಮ ತವರಿನ ರಾಜ್‌ಕೋಟ್ ಮೈದಾನದಲ್ಲಿ ಕತ್ತಿವರಸೆ ಮಾಡಿ ಸಂಭ್ರಮಿಸಿದರು. ರವೀಂದ್ರ ಜಡೇಜಾ 198 ಎಸೆತಗಳಲ್ಲಿ ಮೂರಂಕಿ ಸಂಖ್ಯೆ ತಲುಪಿದರು.

ಇನ್ನು ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನ ಮೊದಲ ದಿನದಂದು 86 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 315 ರನ್ ಕಲೆಹಾಕಿದೆ. ಸರ್ಫರಾಜ್ ಖಾನ್ ರನೌಟ್ ಆಗುವ ಮುನ್ನ 66 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 62 ರನ್ ಬಾರಿಸಿದರು.

ರವೀಂದ್ರ ಜಡೇಜಾ 212 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 110 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನೈಟ್ ವಾಚ್‌ಮನ್ ಆಗಿ ಬಂದಿರುವ ಕುಲದೀಪ್ ಯಾದವ್ 1 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 3,000 ರನ್ ಮತ್ತು 200 ವಿಕೆಟ್‌ಗಳನ್ನು ಹೊಂದಿರುವ ಭಾರತದ ಮೂರು ಆಟಗಾರರಲ್ಲಿ ರವೀಂದ್ರ ಜಡೇಜಾ ಕೂಡ ಒಬ್ಬರಾದರು. ಮಾಜಿ ನಾಯಕ ಕಪಿಲ್ ದೇವ್ 5248 ರನ್ ಮತ್ತು 434 ವಿಕೆಟ್ ಪಡೆದಿದ್ದರೆ, ರವಿಚಂದ್ರನ್ ಅಶ್ವಿನ್ 3271 ರನ್ ಮತ್ತು 499 ವಿಕೆಟ್ ಕಬಳಿಸಿದ್ದಾರೆ. ಇದೀಗ ರವೀಂದ್ರ ಜಡೇಜಾ 3003 ರನ್ ಮತ್ತು 280 ವಿಕೆಟ್ ಪಡೆದಿದ್ದಾರೆ.

ಬೌಲಿಂಗ್‌ನಲ್ಲಿ ಇಂಗ್ಲೆಂಡ್ ತಂಡದ ಪರ ಮಾರ್ಕ್ ವುಡ್ 17 ರನ್ ನೀಡಿ 3 ವಿಕೆಟ್ ಪಡೆದರೆ, ಟಾಮ್ ಹಾರ್ಟ್ಲಿ ಒಂದು ವಿಕೆಟ್ ಕಬಳಿಸಿದರು.

Story first published: Thursday, February 15, 2024, 16:59 [IST]
Other articles published on Feb 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+