For Quick Alerts
ALLOW NOTIFICATIONS  
For Daily Alerts
 

IND vs ENG: ಧ್ರುವ್ ಜುರೇಲ್‌, ಸರ್ಫರಾಜ್‌ ಪದಾರ್ಪಣೆ?: ಸುಳಿವು ನೀಡಿದ ಬಿಸಿಸಿಐ

ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಎಷ್ಟು ಆಟಗಾರರು ಪದಾರ್ಪಣೆ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ನಾಳೆ ಟಾಸ್‌ ವೇಳೆ ಉತ್ತರ ಸಿಗಲಿದೆ. ಈ ಪ್ರಶ್ನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಾಗಿ ಕಾಡುತ್ತಿದೆ. ಇದಕ್ಕೆ ಬಿಸಿಸಿಐ ಪಂದ್ಯ ಆರಂಭಕ್ಕೂ ಒಂದು ದಿನ ಮೊದಲು ತನ್ನದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದೆ. ಬಿಸಿಸಿಐ ಬುಧವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಧ್ರುವ್ ಜುರೆಲ್ ಅವರು ಟೀಂ ಇಂಡಿಯಾ ಸೇರುವ ಕಥೆಯನ್ನು ಹೇಳುತ್ತಿದ್ದಾರೆ.

ಬಿಸಿಸಿಐನ ಈ ವಿಡಿಯೋ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಬಹುದು ಎಂಬುದಕ್ಕೆ ಸೂಚನೆ ನೀಡಿದೆ. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೆಎಸ್ ಭರತ್ ಅವರ ಕಳಪೆ ಫಾರ್ಮ್‌ನಿಂದ ಅವರು ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳಿಂದ ಫಾರ್ಮ್‌ಗಾಗಿ ಪರದಾಡುತ್ತಿರುವ ಕೆ.ಎಸ್.ಭರತ್ ಅವರಿಗೆ ನಿರಂತರ ಅವಕಾಶಗಳನ್ನು ನೀಡುತ್ತಿರುವುದು ಏಕೆ ಎಂಬ ಚರ್ಚೆ ನಡೆಯುತ್ತಿದೆ. ಕೆಎಸ್ ಭರತ್ ಅವರ ಸ್ಥಾನದಲ್ಲಿ ಧ್ರುವ್ ಜುರೆಲ್ ಯಾಕೆ ಅವಕಾಶ ಪಡೆಯಬಾರದು ಎಂದು ಅಭಿಮಾನಿಗಳು ಪ್ರಶ್ನೆ ಎತ್ತಿದ್ದಾರೆ.

IND vs ENG: Dhruv Jurel, Sarfaraz debut?: BCCI hints

ಧ್ರುವ್ ಜುರೇಲ್ ಪದಾರ್ಪಣೆ?

ಸರ್ಫರಾಜ್ ಖಾನ್ ಮತ್ತು ರಜತ್ ಪಾಟಿದಾರ್ ನಡುವೆ ಯಾರು ಮೊದಲು ಪದಾರ್ಪಣೆ ಮಾಡುವ ಅವಕಾಶ ಪಡೆಯುತ್ತಾರೆ ಎಂದು ಎರಡನೇ ಟೆಸ್ಟ್‌ ವೇಳೆ ಚರ್ಚೆ ನಡೆದಿತ್ತು. ಈ ಚರ್ಚೆ ಒಂದು ವಾರ ಮುಂದುವರಿದರೂ ಬಿಸಿಸಿಐನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ನಂತರ ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೆ ಒಂದು ದಿನ ಮೊದಲು ಬಿಸಿಸಿಐ ರಜತ್ ಪಾಟಿದಾರ್ ಅವರ ವಿಡಿಯೋವನ್ನು ಬಿಡುಗಡೆ ಮಾಡಿದೆ. ಮರುದಿನ ಅವರಿಗೆ ಪದಾರ್ಪಣೆ ಮಾಡುವ ಅವಕಾಶವೂ ಸಿಕ್ಕಿತು.

ಫೆಬ್ರವರಿ 14 ರಂದು ಬಿಸಿಸಿಐ ಬಿಡುಗಡೆ ಮಾಡಿದ ವೀಡಿಯೊವನ್ನು ಇದೇ ರೀತಿಯ ಸೂಚನೆಯಾಗಿ ನೋಡಲಾಗುತ್ತಿದೆ. ಈ ವೀಡಿಯೊದ ನಂತರ, ಧ್ರುವ್ ಜುರೆಲ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗ ಟೀಮ್ ಇಂಡಿಯಾ ಪರ ಕಣಕ್ಕೆ ಇಳಿಯುವುದನ್ನು ಕಾಣಬಹುದಾಗಿದೆ. 23 ವರ್ಷದ ಧ್ರುವ್ ಜುರೆಲ್ ಎರಡು ವರ್ಷಗಳ ಹಿಂದೆಯಷ್ಟೇ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಆರಂಭಿಸಿದ್ದರು. ಇದುವರೆಗೆ 15 ಪ್ರಥಮ ದರ್ಜೆ ಪಂದ್ಯಗಳಲ್ಲಿ 46.47ರ ಸರಾಸರಿಯಲ್ಲಿ 790 ರನ್ ಗಳಿಸಿದ್ದಾರೆ.

ಸರ್ಫರಾಜ್‌ಗೆ ಅವಕಾಶ

ಆತಿಥೇಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಬಹಳ ಮಹತ್ವದ್ದಾಗಿದೆ. ಎರಡೂ ತಂಡಗಳು ಸರಣಿಯಲ್ಲಿ ತಲಾ ಒಂದೊಂದು ಪಂದ್ಯ ಗೆದ್ದಿವೆ. ಈ ಪರಿಸ್ಥಿತಿಯಲ್ಲಿ ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಸರ್ಫರಾಜ್ ಖಾನ್ ಕೂಡ ಮೂರನೇ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡುವುದು ಖಚಿತವಾಗಿದೆ. ಧ್ರುವ್ ಜುರೆಲ್ ಅವರ ಚೊಚ್ಚಲ ಪಂದ್ಯದ ಬಗ್ಗೆ ಸುಳಿವು ನೀಡುವ ಮೂಲಕ ಬಿಸಿಸಿಐ ಈ ಪಂದ್ಯದಲ್ಲಿ ಇಬ್ಬರು ಭಾರತೀಯ ಆಟಗಾರರು ತಮ್ಮ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸುವ ಸಾಧ್ಯತೆಯನ್ನು ತಿಳಿಸಿದೆ.

IND vs ENG: Dhruv Jurel, Sarfaraz debut?: BCCI hints

ಮತ್ತೊಬ್ಬ ಆಟಗಾರನಿಗೆ ಸ್ಥಾನ ನೀಡಿದರೂ ಅಚ್ಚರಿ ಪಡುವ ಅವಶ್ಯಕತೆ ಇಲ್ಲ. ಏಕೆಂದರೆ ದೇವದತ್ ಇರುವ ಫಾರ್ಮ್‌ ನೋಡಿದರೆ, ಅವರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ಆದ್ಯತೆಯನ್ನು ನೋಡಿದಾಗ ಈ ಪಟ್ಟಿಯಲ್ಲಿ ಅವರ ತುಂಬ ಹಿಂದೆ ನಿಂತಿದ್ದಾರೆ. ಪರಿಸ್ಥಿತಿ ಯಾರ ಪರ ವಾಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Story first published: Wednesday, February 14, 2024, 15:10 [IST]
Other articles published on Feb 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+