IND vs ENG: ಟೀಮ್ ಇಂಡಿಯಾ ಸ್ಪಿನರ್ಸ್ ವಿರುದ್ಧ ಮಕಾಡೆ ಮಲಗುತ್ತದೆ ಬೇಸ್‌ಬೌಲ್ ತಂತ್ರ
ವಿದೇಶಿ ತಂಡಗಳು ಭಾರತದಲ್ಲಿ ಟೆಸ್ಟ್ ಸರಣಿಯನ್ನು ಆಡಲು ಬರುತ್ತಿದ್ದಂತೆ ಒಂದು ಚಿಂತೆ ನಿಜಕ್ಕೂ ಬಹುವಾಗಿ ಕಾಡುತ್ತದೆ. ಈ ಚಿಂತೆ ಬರೀ ಆಟಗಾರರಿಗೆ ಅಷ್ಟೇ ಅಲ್ಲ, ಕೋಚ್ ಸಹಾಯಕ ಸಿಬ್ಬಂದಿಗೂ ಕಾಡುತ್ತದೆ. ಈಗ ಈ ಚಿಂತೆಯ ಭೂತ ಇಂಗ್ಲೆಂಡ್ ತಂಡಕ್ಕೆ ಹೊಕ್ಕಂತೆ ಕಾಣುತ್ತಿದೆ.
ಭಾರತ ಪ್ರವಾಸದಲ್ಲಿ ತಮ್ಮ ತಂಡಕ್ಕೆ ಎದುರಾಗವ ಸವಾಲುಗಳ ಬಗ್ಗೆ ಇಂಗ್ಲೆಂಡ್ ಟೆಸ್ಟ್ ಕೋಚ್ ಬ್ರೆಂಡನ್ ಮೆಕಲಮ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಪ್ಲ್ಯಾನ್ ರೂಪಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ಮಾಜಿ ನಾಯಕ ಮೈಕಲ್ ವಾನ್ ತಂಡಕ್ಕೆ ಉಪಯುಕ್ತ ಸಲಹೆ ನೀಡಿದ್ದಾರೆ. ಇಂಗ್ಲೆಂಡ್‌ನ ಬೇಸ್‌ಬಾಲ್ ಮಾದರಿಯ ಟೆಸ್ಟ್ ಕ್ರಿಕೆಟ್ ಭಾರತದಲ್ಲಿ ಅಷ್ಟೇನೂ ಯಶಸ್ವಿಯಾಗುವುದಿಲ್ಲ. ಭಾರತೀಯ ಪಿಚ್‌ಗಳು ಮತ್ತು ಟೀಮ್ ಇಂಡಿಯಾದ ಅನೇಕ ಶ್ರೇಷ್ಠ ಸ್ಪಿನ್ನರ್‌ಗಳು ಇದರ ಹಿಂದಿನ ದೊಡ್ಡ ಕಾರಣವೆಂದು ಅವರು ಮೈಕಲ್ ಪರಿಗಣಿಸಿದ್ದಾರೆ.

ಇಂಗ್ಲೆಂಡ್‌ನಂತಹ ಪರಿಸ್ಥಿತಿಗಳಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿದ್ದರು. ಭಾರತದ ಪರಿಸ್ಥಿತಿಯಲ್ಲಿ ಭಾರತದ ಅಶ್ವಿನ್ ಮತ್ತು ಜಡೇಜಾ ಇಂಗ್ಲೆಂಡ್ ತಂಡಕ್ಕೆ ಕಾಟ ನೀಡ ಬಲ್ಲರು. ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್ ಮಾಡುವುದು ಈ ಇಬ್ಬರು ಬೌಲರ್‌ಗಳಿಗೆ ನೀರು ಕುಡಿದಷ್ಟೇ ಸಲೀಸು ಎಂದು ಮೈಕೆಲ್ ವಾನ್ ಹೇಳಿದ್ದಾರೆ.
'ಭಾರತದಲ್ಲಿ ಕ್ರಿಕೆಟ್ ಆಡುವುದು ಎಂದರೆ ವಿಶ್ವದ ಅತ್ಯಂತ ಕಠಿಣ ಸ್ಥಳದಲ್ಲಿ ಆಡುವುದು ಎಂದು ಮೈಕೆಲ್ ವಾನ್ ತಿಳಿಸಿದ್ದಾರೆ. ನೀವು ಸ್ವಲ್ಪ ಹಿಂದೆ ಹೋಗಿ ಆಶಸ್ ಸರಣಿಯನ್ನು ನೋಡಿದರೆ, ನಾಥನ್ ಲಿಯಾನ್ ಫಿಟ್ ಆಗಿ ಮತ್ತು ಬೌಲಿಂಗ್ ಮಾಡುವವರೆಗೆ, ಆಸ್ಟ್ರೇಲಿಯಾ 2-0 ಮುಂದಿತ್ತು. ಇದು ಕೇವಲ ಸ್ಪಿನ್ನರ್ ವಿಷಯವಾಗಿತ್ತು. ಎಡ್ಜ್‌ಬಾಸ್ಟನ್‌ನಲ್ಲಿ ಆಂಗ್ಲ ಆಟಗಾರರು ತಮ್ಮ ವಿರುದ್ಧ ತಪ್ಪು ಹೊಡೆತಗಳನ್ನು ಆಡುವ ಮೂಲಕ ಹೇಗೆ ವಿಕೆಟ್‌ಗಳನ್ನು ನೀಡಿದ್ದಾರೆ ಎಂಬುದನ್ನು ನೋಡಿದ್ದೇವೆ. ಹೀಗಿರುವಾಗ ಭಾರತದ ಟರ್ನಿಂಗ್ ಪಿಚ್ ಗಳಲ್ಲಿ ಅಶ್ವಿನ್, ಜಡೇಜಾ, ಅಕ್ಸರ್ ರನ್ನು ಎದುರಿಸುವುದು ನಮ್ಮ ತಂಡದ ಬ್ಯಾಟರ್‌ಗಳಿಗೆ ಸವಾಲಾಗಲಿದೆ.

ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ತುಂಬಾ ಕಷ್ಟ
ಟೀಮ್ ಇಂಡಿಯಾದಲ್ಲಿ ವಿಶ್ವ ದರ್ಜೆಯ ಸ್ಪಿನ್ ಬೌಲರ್‌ಗಳು ಇದ್ದಾರೆ. ಇಂಗ್ಲೆಂಡ್ ನಲ್ಲಿ ಬೇಸ್ ಬೌಲ್ ತಂತ್ರವನ್ನು ಮೈಗೂಡಿಸಿಕೊಂಡ ಬ್ಯಾಟರ್‌ಗಳಿದ್ದಾರೆ. ಸ್ಪಿನ್ ಬೌಲರ್‌ಗಳ ವಿರುದ್ಧ ಈ ತಂತ್ರ ಪರಿಣಾಮ ಕಾರಿ ಅಲ್ಲ. ಹೀಗಾಗಿ ಇಂಗ್ಲೆಂಡ್, ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಕಷ್ಟ ಎಂದು ಮೈಕೆಲ್ ವಾನ್ ತಿಳಿಸಿದ್ದಾರೆ.
ಏನಿದು ಬೇಸ್ ಬೌಲ್ ತಂತ್ರ?
ಬ್ರೆಂಡನ್ ಮೆಕಲಮ್ ಕೋಚ್ ಆಗಿ ಮತ್ತು ಬೆನ್ ಸ್ಟೋಕ್ಸ್ ನಾಯಕರಾಗಿ ಅಧಿಕಾರ ವಹಿಸಿಕೊಂಡ ನಂತರ, ಇಂಗ್ಲೆಂಡ್ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ಎದುರಾಳಿ ತಂಡಗಳ ಉತ್ಸಾಹವನ್ನು ಮುರಿಯುವ ಹೊಸ ಆಟವನ್ನು ಕಂಡುಹಿಡಿದಿದೆ. ಇದನ್ನೇ ಬೇಸ್‌ಬಾಲ್ ಎಂದು ಕರೆಯಲಾಗುತ್ತದೆ. ಈ ಶೈಲಿಯಲ್ಲಿ ಆಡುತ್ತಿರುವ ಇಂಗ್ಲೆಂಡ್ ಕಳೆದ ಎರಡೂವರೆ ವರ್ಷಗಳಲ್ಲಿ ಹಲವು ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.
ಇಂಗ್ಲೆಂಡ್ ತಂಡ ಬೇಸ್ ಬಾಲ್ ಶೈಲಿಯಲ್ಲಿ ಭಾರತವನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 2021ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತ್ತು. ಈ ಬಾರಿಯ ಮೈದಾನ ಭಾರತದದ್ದಾಗಿದ್ದು ಇಂಗ್ಲೆಂಡ್‌ನ ಬೇಸ್‌ಬಾಲ್ ತಂತ್ರ ಅಲ್ಲಿ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications