Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG: ಸ್ಪಿನ್ನರ್‌ಗಳ ಆರ್ಭಟಕ್ಕೆ ಇಂಗ್ಲೆಂಡ್ ತತ್ತರ; ಮೊದಲ ದಿನ ಮೇಲುಗೈ ಸಾಧಿಸಿದ ಭಾರತ

ಗುರುವಾರ, ಜನವರಿ 25ರಂದು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಆತಿಥೇಯ ಭಾರತ ತಂಡ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ನಿರ್ಧಾರವನ್ನು ಭಾರತೀಯ ಬೌಲರ್‌ಗಳು ತಲೆಕೆಳಗಾಗುವಂತೆ ಮಾಡಿದರು. 64.3 ಓವರ್‌ಗಳಲ್ಲಿ 246 ರನ್‌ಗಳಿಗೆ ಪ್ರವಾಸಿ ತಂಡ ಸರ್ವಪತನ ಕಂಡಿತು.

IND vs ENG: England Bowled Out for 246 Against India in First Innings

ಇನ್ನು ಪ್ರತ್ಯುತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 23 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119 ರನ್ ಕಲೆಹಾಕಿದ್ದು, ಮುನ್ನಡೆ ಸಾಧಿಸಲು ಇನ್ನು 127 ರನ್ ಗಳಿಸಬೇಕಿದೆ.

ಇಂಗ್ಲೆಂಡ್‌ನ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಬೆನ್ ಡಕೆಟ್ (35) ಮತ್ತು ಜಾಕ್ ಕ್ರಾಲಿ (20) ಉತ್ತಮ ಆರಂಭ ನೀಡಿದರು. ಜಾಕ್ ಕ್ರಾಲಿ ಔಟಾದ ನಂತರ ಬಂದ ಒಲ್ಲಿ ಪೋಪ್ ಕೇವಲ ಒಂದು ರನ್ ಗಳಿಸಿದರು. ನಂತರ ಬೆನ್ ಡಕೆಟ್ ಕೂಡ ವಿಕೆಟ್ ಒಪ್ಪಿಸಿದರು.

ಈ ವೇಳೆ ಕ್ರೀಸ್‌ಗೆ ಬಂದ ಜೋ ರೂಟ್ 60 ಎಸೆತಗಳಲ್ಲಿ ತಾಳ್ಮೆಯ 29 ರನ್ ಗಳಿಸಿದರು. ಇವರಿಗೆ ಸಾಥ್ ನೀಡಿದ ಜಾನಿ ಬೈರ್‌ಸ್ಟೋವ್ 58 ಎಸೆತಗಳಲ್ಲಿ 37 ರನ್ ಕಲೆಹಾಕಿದರು. ನಾಯಕ ಬೆನ್ ಸ್ಟೋಕ್ಸ್ 88 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 70 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿದರು.

ಉಳಿದಂತೆ ಬೆನ್ ಫೋಕ್ಸ್ 4 ರನ್, ರೆಹಾನ್ ಅಹ್ಮದ್ 13 ರನ್, ಟಾಮ್ ಹಾರ್ಟ್ಲಿ 23 ರನ್ ಮತ್ತು ಮಾರ್ಕ್ ವುಡ್ 11 ರನ್ ಗಳಿಸಿದರು.

ಇನ್ನು ಭಾರತ ತಂಡದ ಮೊದಲ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 80 ರನ್‌ಗಳ ಜೊತೆಯಾಟ ನೀಡಿತು.

ರೋಹಿತ್ ಶರ್ಮಾ 27 ಎಸೆತಗಳಲ್ಲಿ 3 ಬೌಂಡರಿ ಸಮೇತ 24 ರನ್ ಗಳಿಸಿ ಔಟಾದರೆ, ಯಶಸ್ವಿ ಜೈಸ್ವಾಲ್ 70 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶುಭ್ಮನ್ ಗಿಲ್ 14 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Story first published: Thursday, January 25, 2024, 15:34 [IST]
Other articles published on Jan 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+