IND vs ENG: ಸ್ಪರ್ಧಾತ್ಮಕ ಪಿಚ್‌ನಲ್ಲಿ ಇಂಗ್ಲೆಂಡ್ ಗೆಲ್ಲುವಲ್ಲಿ ವಿಫಲ: ಪಂದ್ಯ ಗೆದ್ದ ಭಾರತ, ಸರಣಿ ಸಮಬಲ
ಇಂಗ್ಲೆಂಡ್ ತಂಡ ಯಾವುದೇ ಸರಣಿ ಆರಂಭವಾದರೂ ತನ್ನ ರಣತಂತ್ರದಿಂದಲೇ ಭಾರೀ ಚರ್ಚೆಯಲ್ಲಿರುತ್ತದೆ. ಈ ಬಾರಿಯೂ ಭಾರತದ ಪ್ರವಾಸ ಬೆಳೆಸಿದ್ದ ಇಂಗ್ಲೆಂಡ್ ತಮ್ಮ ಸಂಪ್ರದಾಯಿಕ ಶೈಲಿಯ ತಂತ್ರವನ್ನು ಮೈಗೂಡಿಸಿಕೊಂಡು, ಭಾರತದಲ್ಲಿ ಟೆಸ್ಟ್ ಸರಣಿ ಗೆಲುವಿನ ಆಸೆಯನ್ನು ಈಡೇರಿಸುವುದಾಗಿ ಕನಸು ಕಂಡಿತ್ತು. ಅದಕ್ಕೆ ಪೂರಕವಾಗಿ ಹೈದರಾಬಾದ್ ಟೆಸ್ಟ್‌ನಲ್ಲಿ ಪ್ರವಾಸಿ ತಂಡ ಜಯಿಸಿ, ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು.
ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತನ್ನ ಹಳೇಯ ತಂತ್ರದೊಂದಿಗೆ ಕಣಕ್ಕೆ ಇಳಿಯಿತು. ಆದರೆ, ಕಳೆದ ಬಾರಿ ಹಿಡಿದ ಅದೃಷ್ಟ ಕೈ ಹಿಡಿಯಲಿಲ್ಲ. ಸ್ಪೋಟಿವ್ ಪಿಚ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವಲ್ಲಿ ಎಡವಿದ ಆಂಗ್ಲ ಪಡೆ, ಸೋಲಿಗೆ ಶರಣಾಗಿದೆ. ಸಂಘಟಿತ ಆಟದ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಿದೆ.

ಎರಡನೇ ಟೆಸ್ಟ್‌ನಲ್ಲಿ ಕೈ ಹಿಡಿಯದ ತಂತ್ರ
ಇಂಗ್ಲೆಂಡ್ ತಂಡ ಟೆಸ್ಟ್ ಸರಣಿಯಲ್ಲೂ ಟಿ20 ಶೈಲಿಯ ಬ್ಯಾಟಿಂಗ್ ಮಾಡಿ ಫಲ ಕಂಡಿದೆ. ಇದನ್ನೇ ಭಾರತದಲ್ಲೂ ಆಡಲು ಮುಂದಾಯಿತು. ಪರಿಣಾಮ ಇಂಗ್ಲೆಂಡ್ ಮಕಾಡೆ ಮಲಗಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 335 ಎಸೆತಗಳನ್ನು ಎದುರಿಸಿ 4.53ರ ಸರಾಸರಿಯಲ್ಲಿ 253 ರನ್ ಸಿಡಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲೂ ಇಂಗ್ಲೆಂಡ್ ತಂಡ ಇದೇ ಆಕ್ರಮಣಾಕಾರಿ ಆಟಕ್ಕೆ ಮಣೆ ಹಾಕಿತು. ಪರಿಣಾಮ 414 ಎಸೆತಗಳಲ್ಲಿ 4.21ರ ಸರಾಸರಿಯಲ್ಲಿ 292 ರನ್ ಸೇರಿಸಿತು.
ಈ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಆಧಾರವಾಗಿದ್ದು ಆರಂಭಿಕ ಜಾಕ್ ಕ್ರಾಲಿ.. ಇವರು ಚುಟುಕು ಮಾದರಿಯಲ್ಲಿ ಬ್ಯಾಟ್ ಮಾಡಿದರು. ಇವರು ಎದುರಿಸಿದ 78 ಎಸೆತಗಳಲ್ಲಿ 76 ರನ್ ಸಿಡಿಸಿ ತಂಡಕ್ಕೆ ನೆರವಾದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 11 ಬೌಂಡರಿ, 2 ಸಿಕ್ಸರ್ ಸೇರಿವೆ. ಇನ್ನು ನಾಯಕ ಬೆನ್ ಸ್ಟೋಕ್ಸ್ ಸಹ ಇದೇ ಧಾಟಿಯಲ್ಲಿ ಬ್ಯಾಟಿಂಗ್ ಮಾಡಿದರು. ಇವರು 54 ಎಸೆತಗಳಲ್ಲಿ 47 ರನ್ ಸಿಡಿಸಿದರು.

ಎರಡನೇ ಇನಿಂಗ್ಸ್‌ನಲ್ಲಿ ಜಾಕ್ ಕ್ರಾಲಿ ವಿಭಿನ್ನ ಶೈಲಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಪಕ್ಕಾ ಟೆಸ್ಟ್ ಆಡುವ ರೀತಿ ಬ್ಯಾಟ್ ಮಾಡಿದ ಕ್ರಾಲಿ 55.30 ಸರಾಸರಿಯಲ್ಲಿ 73 ರನ್ ಸಿಡಿಸಿದರು. ಇವರನ್ನು ಇಂಗ್ಲೆಂಡ್ ತಂಡದ ಬೇರೊಬ್ಬ ಬ್ಯಾಟರ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಇಂಗ್ಲೆಂಡ್ ಎರಡನೇ ಟೆಸ್ಟ್‌ನಲ್ಲಿ ಸೋಲು ಕಂಡಿತು.
ಬಾಜ್‌ಬಾಲ್ ಎಂದರನೇ?
ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗುವ ಮೊದಲು ಬ್ರೆಂಡನ್ ಮೆಕಲಮ್ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕರೂ ಆಗಿದ್ದರು. ಅವರ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡ 2015 ರ ODI ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿತು. ಮೆಕಲಮ್ ಯಾವಾಗಲೂ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಮೈದಾನಕ್ಕೆ ಬಂದ ತಕ್ಷಣ ರನ್ ಗಳಿಸಲು ಹೆಸರುವಾಸಿ. ಅವರ ಬಿರುಸಿನ ಆಟದ ಶೈಲಿಯಿಂದಾಗಿ, ಅಭಿಮಾನಿಗಳು ಅವರನ್ನು ಬಾಜ್‌ಬಾಲ್ ಎಂದೂ ಕರೆಯುತ್ತಾರೆ.
ಬ್ರೆಂಡನ್ ಮೆಕಲಮ್ ಕ್ರಿಕೆಟ್ ಮೈದಾನದಲ್ಲಿ ಆಡಿದ ರೀತಿಯನ್ನೇ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೂ ಅದೇ ತಂತ್ರಗಳನ್ನು ಹೇಳಿಕೊಟ್ಟರು. ಬೌಲಿಂಗ್ ಇರಲಿ, ಬ್ಯಾಟಿಂಗ್ ಇರಲಿ, ಇಂಗ್ಲೆಂಡ್ ಕ್ರಿಕೆಟ್ ತಂಡ ಎಲ್ಲದರಲ್ಲೂ ಆಕ್ರಮಣಶೀಲತೆಯನ್ನು ಪ್ರದರ್ಶಿಸಿತು ಮತ್ತು ಟೆಸ್ಟ್ ಕ್ರಿಕೆಟ್‌ನ ವ್ಯಾಖ್ಯಾನವನ್ನು ಬದಲಾಯಿಸಿತು. ಬಾಜ್‌ಬಾಲ್ ಎಂಬ ಪದವು ಆಕ್ರಮಣಶೀಲತೆ ಮತ್ತು ನಿರ್ಭಯತೆಯ ಸಂಕೇತ.

ಕ್ರಿಕೆಟ್ ಮೈದಾನದಲ್ಲಿ ವೇಗದ ಸ್ಕೋರ್
ಬಾಜ್‌ಬಾಲ್‌ನ ಪ್ರಮುಖ ಅಂಶವೆಂದರೆ ವೇಗವಾಗಿ ಸ್ಕೋರ್ ಮಾಡುವುದು. ಅದು ಯಾವ ರೀತಿಯ ಪಿಚ್ ಆಗಿರಲಿ. ಯಾವಾಗಲೂ ವೇಗವಾಗಿ ರನ್ ಗಳಿಸಿ, ಎದುರಾಳಿ ಮೇಲೆ ಒತ್ತಡವನ್ನು ಹೇರುವುದಾಗಿದೆ. ಪಾಕಿಸ್ತಾನದ ನೆಲದಲ್ಲಿ ರಾವಲ್ಪಿಂಡಿ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ಅದ್ಭುತ ಪ್ರದರ್ಶನ ನೀಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications