ರಿಷಭ್ ಪಂತ್‌ಗೆ ಮುಖ್ಯವಾದ ಸಲಹೆ ನೀಡಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್

ಭಾರತ ತಂಡದ ಯುವ ಆಟಗಾರ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಮಿಂಚಿತ್ತಿದ್ದರೂ ವೈಟ್‌ವಾಲ್ ಮಾದರಿಯಲ್ಲಿ ವಿಫಲವಾಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿಯೂ ರಿಷಭ್ ಪಂತ್ ಬ್ಯಾಟ್‌ನಿಂದ ರನ್ ಹರಿದುಬರುತ್ತಿಲ್ಲ. ಹೀಗಾಗಿ ಪಂತ್ ವೈಟ್‌ಬಾಲ್ ಭವಿಷ್ಯದ ಬಗ್ಗೆಯೂ ಪ್ರಶ್ನೆಗಳು ಎದ್ದಿದೆ.
ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ರಿಷಭ್ ಪಂತ್‌ಗೆ ಪ್ರಮುಖವಾದ ಸಲಹೆಯನ್ನು ನೀಡಿದ್ದಾರೆ. ಅತಿಯಾದ ಆಕ್ರಮಣಕಾರಿ ಮನೋಭಾವ ಬೇಡ ಎಂದಿರುವ ಮೈಕಲ್ ವಾನ್ ಟೆಸ್ಟ್ ಮಾದರಿಯಲ್ಲಿ ಪಂತ್ ಮತ್ತಷ್ಟು ಯಶಸ್ಸಿಗೆ ಸಲಹೆ ನೀಡಿದ್ದಾರೆ. "ರಿಷಭ್ ಪಂತ್‌ಗೆ ನಾನು ಒಂದು ಮಾತು ಹೇಳುತ್ತಿದ್ದೇನೆ. ಅತಿಯಾದ ಆಕ್ರಮಣಕಾರಿ ಮನೋಭಾವ ಬೇಡ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿಯಾಗಿ ಆಡಲು ಅನುಮತಿ ದೊರೆತಿದೆ ಅವರಿಗೆ. ಆದರೆ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅವರ ಆಟ ಅಸಡ್ಡೆಯಾಗಿ ಆಡಿದಂತೆ ಭಾಸವಾಗುತ್ತದೆ ಎಂದಿದ್ದಾರೆ.

ವೈಟ್‌ಬಾಲ್‌ನಲ್ಲಿ ಪಂತ್ ಹಿನ್ನಡೆಗೆ ಕಾರಣ ಹೇಳಿದ ವಾನ್
ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸುತ್ತಿದ್ದರೂ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಪಂತಗ್ ಯಶಸ್ಸು ಸಾಧಿಸದಿರಲು ಕಾರಣವನ್ನು ಹೇಳಿದ್ದಾರೆ ಮೈಕಲ್ ವಾನ್. ರಿಷಭ್ ಪಂತ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತಿಯಾದ ಯೋಚನೆ ಮಾಡುತ್ತಾರೆ. 15 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿ ಭಾರತವನ್ನು ಗೆಲ್ಲಿಸಿಕೊಡಬಲ್ಲಂತಾ ಅತ್ಯುತ್ತಮ ಆಟಗಾರ ಆತ. ನಿಜಕ್ಕೂ ಆತ ಅದ್ಭುತವಾದ ಆಟಗಾರ. ಆತನಿಗೆ ಸೂಕ್ತವಾದ ಸ್ವಾತಂತ್ರ್ಯವನ್ನು ನೀಡಬೇಕು. ಆತ ವಿಕೆಟ್ ಕಳೆದುಕೊಳ್ಳುವ ಎಸೆತಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ" ಎಂದಿದ್ದಾರೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್.
"ಆತನ ಕೈಗೆ ಬ್ಯಾಟ್ ದೊರೆತಿದೆ. ಅಂಗಳಕ್ಕಿಳಿದು ಎದುರಾಳಿಗಳನ್ನು ಆತ ಆತಂಕಗೊಳಿಸಬೇಕಿದೆ. ಆತನ ಕೈಗೆ ಬ್ಯಾಟ್ ನೀಡಿ ಬೇಕಾದ ಸ್ವಾತಂತ್ರ್ಯವನ್ನು ನೀಡಿದರೆ ಆತ ನಂತರ ಯಶಸ್ವಿಯಾಗುತ್ತಾರೆ. ಸಿಕ್ಕ ಅವಕಾಶದಲ್ಲಿ ಕೆಲವನ್ನಾದರೂ ಉತ್ತಮವಾಗಿ ಬಳಸಿಕೊಳ್ಳಬಹುದು. ಆತ ಕೆಲವೇ ಕ್ಷಣಗಳಲ್ಲಿ ಪಂದ್ಯವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಮೈಕಲ್ ವಾನ್ ಹೇಳಿಕೆ ನೀಡಿದ್ದಾರೆ.

ಟೆಸ್ಟ್ ಸರಣಿಯಲ್ಲಿ ಮಿಂಚಿದ ಪಂತ್
ರಿಷಭ್ ಪಂತ್ ಭಾರತದ ಟೆಸ್ಟ್ ತಂಡದಲ್ಲಿ ಪ್ರಮುಖ ಭಾಗವಾಗಿ ಗುರುತಿಸಿಕೊಂಡಿದ್ದಾರೆ. ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿಯೂ ಪಂತ್ ಭಾರತದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಶತಕವನ್ನು ಸಿಡಿಸಿ ಮಿಂಚಿದ್ದರು. ಪಂತ್ ಶತಕದ ನೆರವಿನಿಂಧಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಸುಸ್ಥಿತಿಯಲ್ಲಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ತಂಡ ವೈಫಲ್ಯ ಅನುಭವಿಸಿದ ಕಾರಣದಿಂದಾಗೊ ಸೋಲು ಕಾಣಬೇಕಾಯಿತು.

ಸೀಮಿತ ಓವರ್‌ಗಳ ಸರಣಿಯಲ್ಲಿ ವೈಫಲ್ಯ
ಟೆಸ್ಟ್ ಸರಣಿಯಲ್ಲಿ ತೋರಿಸಿದ ಅದ್ಭುತ ಫಾರ್ಮ್‌ಅನ್ನು ವೈಟ್‌ಬಾಲ್ ಸರಣಿಯಲ್ಲಿ ತೋರ್ಪಡಿಸಲು ರಿಷಭ್ ಪಂತ್ ಮತ್ತೆ ವಿಫಲವಾಗಿದ್ದಾರೆ. ಇತ್ತೀಚೆಗೆ ಅಂತ್ಯವಾದ ಟಿ20 ಸರಣಿಯ ಮೂರು ಪಂದ್ಯಗಳಲ್ಲಿ ಪಂತ್ ಗಳಿಸಿದ್ದು ಕೇವಲ 26, 1 ಹಾಗೂ 0 ರನ್ ಮಾತ್ರ. ಇನ್ನು ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸುವ ಅವಕಾಶ ದೊರೆತರೂ ಪಂತ್ ಮತ್ತೆ ಶೂನ್ಯ ಸುತ್ತಿ ಫೆವಿಲಿಯನ್ ಸೇರಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications