IND vs ENG: ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ತಂಡಕ್ಕೆ ಪೆಟ್ಟು: ಯುವ ಸ್ಪಿನ್ ಬೌಲರ್‌ಗೆ ಅವಕಾಶ ಸಾಧ್ಯತೆ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಟೆಸ್ಟ್ ಪಂದ್ಯಗಳ ಎರಡನೇ ಟೆಸ್ಟ್ ಪಂದ್ಯ ವಿಶಾಖಾಪಟ್ಟಣಂದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸುವ ಇಂಗ್ಲೆಂಡ್ ಆಸೆಗೆ ಪೆಟ್ಟು ಬಿದ್ದಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಸ್ಪಿನ್ ಬೌಲರ್ ಗಾಯಕ್ಕೆ ತುತ್ತಾಗಿದ್ದು ಎರಡನೇ ಟೆಸ್ಟ್‌ನಲ್ಲಿ ಅಂಗಳಕ್ಕೆ ಇಳಿಯುತ್ತಿಲ್ಲ.
ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ತಂಡದ ಸ್ಟಾರ್ ಸ್ಪಿನ್ನರ್ ಜಾಕ್ ಲೀಚ್ ಗಾಯಗೊಂಡಿದ್ದಾರೆ. ಫೆಬ್ರವರಿ 2ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಅವರು ಆಡುವುದಿಲ್ಲ. ದಿ ಟೈಮ್ಸ್.ಯುಕೆ ವರದಿಯ ಪ್ರಕಾರ, ಜ್ಯಾಕ್ ಲೀಚ್ ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಎರಡನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ.

ಇದಕ್ಕೂ ಮುನ್ನ ವಿಶಾಖಪಟ್ಟಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಆಡಿಸುವ ಕುರಿತು ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಮಾತನಾಡಿದ್ದರು. ಆದಾಗ್ಯೂ, ಈಗ ಅವರ ಯೋಜನೆ ವಿಫಲವಾಗುತ್ತಿರುವಂತೆ ಕಾಣುತ್ತಿದೆ. ಏಕೆಂದರೆ ತಂಡದಲ್ಲಿರುವ ಹಿರಿಯ ಸ್ಪಿನ್ನರ್ ಜಾಕ್ ಲೀಚ್ ಗಾಯದ ಕಾರಣ ಎರಡನೇ ಟೆಸ್ಟ್ ಆಡಲು ಸಾಧ್ಯವಾಗುವುದಿಲ್ಲ.
ಪ್ರಸ್ತುತ ತಂಡದಲ್ಲಿರುವ ಇಂಗ್ಲೆಂಡ್‌ನ ಅತ್ಯಂತ ಅನುಭವಿ ಸ್ಪಿನ್ನರ್ ಜಾಕ್ ಲೀಚ್ ವಿಶಾಖಪಟ್ಟಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದ ಭಾಗವಾಗುವುದಿಲ್ಲ.
ವರದಿಯ ಪ್ರಕಾರ, ಈ ಎಡಗೈ ಸ್ಪಿನ್ನರ್ ಹೈದರಾಬಾದ್ ಟೆಸ್ಟ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರು. ಅವರ ಮೊಣಕಾಲಿಗೆ ಎರಡು ಬಾರಿ ಗಾಯವಾಗಿದೆ. ಇದರ ನಂತರ, ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ವೇಳೆ ಜಾಕ್ ಲೀಚ್ ಅವರ ಗಾಯವು ಉಲ್ಬಣಗೊಂಡಿತು. ಇಂತಹ ಪರಿಸ್ಥಿತಿಯಲ್ಲಿ ಅವರು ವಿಶಾಖಪಟ್ಟಣಂ ಟೆಸ್ಟ್‌ಗೆ ಮುನ್ನ ಅಭ್ಯಾಸದ ಅವಧಿಯಲ್ಲಿ ಬೌಲಿಂಗ್ ಮಾಡಲಿಲ್ಲ. ಇಂಗ್ಲೆಂಡ್ ತಂಡದ ಅಭ್ಯಾಸದ ವೇಳೆ ಅವರು ಕುಂಟುತ್ತಾ ಚಿಕಿತ್ಸೆ ಪಡೆಯುತ್ತಿದ್ದರು.

ಜಾಕ್ ಲೀಚ್ ಬದಲಿಗೆ ಯಾರು?
ಇಂಗ್ಲೆಂಡ್ ತಂಡದಲ್ಲಿ ಜಾಕ್ ಲೀಚ್ ಅವರ ಸ್ಥಾನವನ್ನು ಬದಲಾಯಿಸುವ ಕುರಿತು ಮಾತುಗಳು ಕೇಳಿ ಬರುತ್ತಿವೆ. ಶೋಯೆಬ್ ಬಶೀರ್ ಮತ್ತು ಝೈನ್ ಲಾರೆನ್ಸ್ ರೂಪದಲ್ಲಿ ಎರಡು ಆಯ್ಕೆಗಳು ಇಂಗ್ಲೆಂಡ್ ತಂಡಕ್ಕಿವೆ. ಶೋಯೆಬ್ ಬಶೀರ್ ಮುಖ್ಯವಾಗಿ ಸ್ಪಿನ್ ಬೌಲರ್. ಲಾರೆನ್ಸ್ ಆಫ್ ಸ್ಪಿನ್ ಮಾಡುತ್ತಾರೆ. ಆದರೆ ಅವರು ಮುಖ್ಯವಾಗಿ ಬ್ಯಾಟ್ಸ್‌ಮನ್. ಇಂತಹ ಪರಿಸ್ಥಿತಿಯಲ್ಲಿ ಜಾಕ್ ಲೀಚ್ ಬದಲಿಗೆ ಶೋಯೆಬ್ ಬಶೀರ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳಬಹುದು.
ಜಾಕ್ ಲೀಚ್ ಪ್ರದರ್ಶನ
ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜಾಕ್ ಲೀಚ್ 26 ಓವರ್‌ಗಳಲ್ಲಿ 63 ರನ್‌ಗಳನ್ನು ಕಲೆ ಹಾಕಿದ್ದು ಒಂದು ವಿಕೆಟ್ ಕಬಳಿಸಿದ್ದಾರೆ. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಜಾಕ್ ಲೀಚ್ ಸ್ಥಿರ ಬೌಲಿಂಗ್ ದಾಳಿ ನಡೆಸಿದರು. ಜಾಕ್ ಎರಡನೇ ಇನ್ನಿಂಗ್ಸ್‌ನಲ್ಲಿ 10 ಓವರ್ ಬೌಲಿಂಗ್ ನಡೆಸಿ 33 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications