IND vs ENG: ಬರೀ ಬ್ಯಾಟಿಂಗ್‌ನಲ್ಲಿ ಅಷ್ಟೇ ಅಲ್ಲಾ ಬೌಲಿಂಗ್‌ನಲ್ಲೂ ಎದುರಾಳಿಗಳ 'ರೂಟ್' ತಪ್ಪಿಸಬಲ್ಲ ಇಂಗ್ಲೆಂಡ್ ಪ್ಲೇಯರ್
ಭರ್ಜರಿ ಬೌಲಿಂಗ್ ಪ್ರದರ್ಶನವನ್ನು ನೀಡಿದ ರೂಟ್ ಟೀಮ್ ಇಂಡಿಯಾದ ಬ್ಯಾಟರ್‌ಗಳನ್ನು ಕಾಡಿದರು. ಭಾರತದ ಬ್ಯಾಟರ್‌ಗಳನ್ನು ಕಾಡಿದರು. ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳ ಯೋಜನೆಯನ್ನು ಅರಿತು ಬೌಲಿಂಗ್ ಮಾಡಿದ ರೂಟ್ ಅಬ್ಬರಿಸಿದರು.
ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳಿಗೆ ರೂಟ್ ಯಾವಾಗಲೂ ಕಂಟಕ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಇದಕ್ಕೂ ಮೊದಲು ಅವರು 2021ರಲ್ಲಿ ಅಹಮದಾಬಾದ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆ ಪಂದ್ಯದಲ್ಲಿ ರೂಟ್ 6.2 ಓವರ್ ಬೌಲಿಂಗ್ ನಡೆಸಿ 8 ರನ್ ನೀಡಿ ಐದು ವಿಕೆಟ್ ಪಡೆದು ಸಾಧನೆ ಮಾಡಿದರು.

ಭಾರತದ ಪರ ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 87 ರನ್, ಕೆಎಲ್ ರಾಹುಲ್ 86 ರನ್ ಮತ್ತು ಯಶಸ್ವಿ ಜೈಸ್ವಾಲ್ 80 ರನ್ ಗಳಿಸಿದರು. ಇಂಗ್ಲೆಂಡ್ ಪರ ಜೋ ರೂಟ್ 4 ವಿಕೆಟ್ ಪಡೆದರು. ಈ ಮೂಲಕ ಜೋ ರೂಟ್ ತಮ್ಮನ್ನು ಬೌಲಿಂಗ್‌ನಲ್ಲಿ ಹಗುರವಾಗಿ ಪರಿಗಣಿಸಬೇಡಿ ಎಂಬ ಸಂದೇಶವನ್ನು ರವಾನಿಸಿದರು. ಈ ಮೂಲಕ ಮೂರನೇ ವಿಕೆಟ್ ಪಡೆದರು. ಈ ವಿಕೆಟ್ ಬಿದ್ದ ನಂತರದ ಎಸೆತದಲ್ಲೇ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ ರೂಟ್, ಹ್ಯಾಟ್ರಿಕ್ ಮಿಸ್ ಮಾಡಿಕೊಂಡರು.
ಹೈದರಾಬಾದ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳನ್ನು ಕಾಡಿದರು. ತಮ್ಮ ಆಫ್ ಸ್ಪಿನ್ ಬೌಲಿಂಗ್‌ನಿಂದ ತಮ್ಮ ತಂಡಕ್ಕೆ ಆಸರೆಯಾದರು. ಮೊದಲು ಸೆಟ್ ಆಗಿ ಕ್ರೀಸ್‌ನಲ್ಲಿ ತಳವೂರಿ ನಿಂತಿದ್ದ ಯಶಸ್ವಿ ಜೈಸ್ವಾಲ್ ಅವರಿಗೆ ಖೆಡ್ಡಾ ತೋಡಿದ್ದ ರೂಟ್ ತಮ್ಮ ವಿಕೆಟ್ ಬೇಟೆಯನ್ನು ಆರಂಭಿಸಿದರು. ಇಲ್ಲಿಂದ ರೂಟ್ ನಿಯಮಿತವಾಗಿ ವಿಕೆಟ್ ಪಡೆಯುತ್ತಲೇ ಸಾಗಿದರು.

ಬಳಿಕ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಕೆಎಸ್ ಭರತ್ ಅವರಿಗೆ ಖೆಡ್ಡಾ ತೋಡಿದ ರೂಟ್ ಎರಡನೇ ವಿಕೆಟ್ ಪಡೆದು ಬೀಗಿದರು. ಇನ್ನು ಶತಕದತ್ತ ಸಾಗಿದ್ದ ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು.
ಹೈದರಾಬಾದ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ 436 ರನ್ ಗಳಿಸಿ ಆಲೌಟ್ ಆಗಿದೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 246 ರನ್ ಗಳಿಸಿತ್ತು. ಈ ಮೂಲಕ ಭಾರತ 190 ರನ್‌ಗಳ ಮುನ್ನಡೆ ಸಾಧಿಸಿದೆ.
ಸದ್ಯ ಮೂರನೇ ದಿನದ ಆಟ ನಡೆಯುತ್ತಿದೆ. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ. ಬೆನ್ ಡಕೆಟ್ ಮತ್ತು ಆಲಿ ಪೋಪ್ ಕ್ರೀಸ್‌ನಲ್ಲಿದ್ದಾರೆ. 31 ರನ್ ಗಳಿಸಿದ್ದಾಗ ಜಾಕ್ ಕ್ರಾಲಿ ಔಟಾದರು, ಅವರು ರವಿಚಂದ್ರನ್ ಅಶ್ವಿನ್ ಅವರ ಸ್ಲಿಪ್‌ನಲ್ಲಿ ಕ್ಯಾಚ್ ಪಡೆದರು.
ಮೂರನೇ ದಿನ ಭಾರತ ತಂಡ ಕೇವಲ 15 ರನ್ ಗಳಿಸಲಷ್ಟೇ ಶಕ್ತವಾಗಿದ್ದು, ಈ ನಡುವೆ ಮೂರು ವಿಕೆಟ್ ಕಳೆದುಕೊಂಡಿತ್ತು. ಆಂಗ್ಲ ಸ್ಪಿನ್ನರ್‌ಗಳು ಭಾರತಕ್ಕೆ ಎಲ್ಲಾ ಮೂರು ಹೊಡೆತಗಳನ್ನು ನೀಡಿದರು. ಇಂಗ್ಲೆಂಡ್ ಪರ ಜೋ ರೂಟ್ ಗರಿಷ್ಠ 4 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications