ಹರಾರೆ ಅಂಗಳದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಇಂಗ್ಲೆಂಡ್ ತಂಡವನ್ನು 100 ರನ್‌ಗಳಿಂದ ಮಣಿಸಿದ ಭಾರತ ಅಬ್ಬರಿಸಿದೆ. ಇಂಗ್ಲೆಂಡ್ ತಂಡ, ಭಾರತ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿದ್ದು, ನಿರಾಸೆ ಅನುಭವಿಸಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ 311 ರನ್ ಕಲೆ ಹಾಕಿ ನಿರಾಸೆ ಕಂಡಿತು.
ಭಾರತದ ಪರ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಆರ್ಭಟಿಸಿದರು. ಇನ್ನು ಇಂಗ್ಲೆಂಡ್ ತಂಡ ಕ್ಯಾಲೆಬ್ ಫಾಕ್ನರ್ ಸಹ ಶತಕ ಬಾರಿಸಿ ಮಿಂಚಿದರು. ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಈ ಪಂದ್ಯದಲ್ಲಿ ದಾಖಲಾದ 5 ದೊಡ್ಡ ದಾಖಲೆಗಳ ಬಗ್ಗೆ ವರದಿ ಇಲ್ಲಿದೆ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಒಟ್ಟು 722 ರನ್ ದಾಖಲಾದವು. ಈ ಮೂಲಕ ಅಂಡರ್-19 ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಇಷ್ಟು ರನ್ ದಾಖಲಾಗಿರಲಿಲ್ಲ. ಇನ್ನು ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ 2014 ರಲ್ಲಿ ನಡೆದಲ್ಲಿ ನಡೆದ ಪಂದ್ಯದಲ್ಲಿ 634 ರನ್, 2004ರಲ್ಲಿ ಆಸ್ಟ್ರೇಲಿಯಾ ಮತ್ತು ಐರ್ಲೆಂಡ್ ತಂಡಗಳ ನಡುವಿನ ಪಂದ್ಯದಲ್ಲಿ 631 ರನ್ ದಾಖಲಾಗಿದ್ದವು.
ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಆರನೇ ಬಾರಿಗೆ ಟ್ರೋಫಿಯನ್ನು ಎತ್ತಿ ಸಂಭ್ರಮಿಸಿದೆ. ಈ ಮೂಲಕ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡ ಎಂಬ ಹೆಗ್ಗಳಿಕೆ ಹೊಂದಿದೆ. ಆಸ್ಟ್ರೇಲಿಯಾ 4 ಬಾರಿ ಈ ಸಾಧನೆ ಮಾಡಿದೆ.
ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ವೈಭವ್ ಸೂರ್ಯವಂಶಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಈ ಮೂಲಕ ಪುರಷ ಹಾಗೂ ಮಹಿಳಾ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರ ಈ ಸಾಧನೆ ಮಾಡಿರಲಿಲ್ಲ. ಇದಕ್ಕೂ ಮೊದಲು 2022ರಲ್ಲಿ ಆಸೀಸ್ ತಂಡದ ಅಲಿಸಾ ಹೀಲಿ 170 ರನ್ ಬಾರಿಸಿದ್ದು ಗರಿಷ್ಠ ಮೊತ್ತವಾಗಿತ್ತು.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ದಾಖಲೆ ಪುಟ ಸೇರಿದೆ. ಈ ಪಂದ್ಯದಲ್ಲಿ ಭಾರತ 19, ಇಂಗ್ಲೆಂಡ್ 12 ಸಿಕ್ಸರ್ ಬಾರಿಸಿತು. ಅಂಡರ್ 19 ವಿಶ್ವಕಪ್‌ನ ಒಂದೇ ಪಂದ್ಯದಲ್ಲಿ ದಾಖಲಾದ ಗರಿಷ್ಠ ಸಿಕ್ಸರ್‌ಗಳಾಗಿವೆ. ಈ ಪಂದ್ಯದಲ್ಲಿ ಒಟ್ಟು 31 ಸಿಕ್ಸರ್ ದಾಖಲಾಗಿವೆ.
ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ 411 ರನ್ ಸೇರಿಸಿತು. ಈ ಮೂಲಕ ಈ ಟೂರ್ನಿಯ ಫೈನಲ್‌ನಲ್ಲಿ ಈ ಹಿಂದೆ ಯಾವೊಂದ ತಂಡವೂ ಮಾಡದ ದಾಖಲೆಯನ್ನು ಮಾಡಿ ಬೀಗಿತು. ಅಲ್ಲದೆ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ 400 ರನ್‌ಗಳ ಗಡಿಯನ್ನು ತಲುಪಿದ ಮೊದಲ ತಂಡ ಎಂಬ ಹಿರಿಮೆ ಸಹ ಭಾರತದ್ದಾಗಿದೆ.