Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG: ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ

ನಾಯಕ ಶುಭಮನ್‌ ಗಿಲ್ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಲ್‌ರೌಂಡರ್ ಆಟದ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾ ಮೂರನೇ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಮೂಲಕ ಭಾರತ, ಪ್ರಸಕ್ತ ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.

ಮೊದಲ ಪಂದ್ಯ ಮಹತ್ವದ ಟಾಸ್‌ ಇಂಗ್ಲೆಂಡ್ ಪಾಲಾಯಿತು. ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಮಾಡಲು ಮುಂದಾದರು. ಆರಂಭಿಕರಾದ ಬೆನ್ ಡಕೆಟ್‌ (43) ಹಾಗೂ ಜಾಕೊಬ್ ಬೆಥೆಲ್‌ (14) ಜೋಡಿ ಮೊದಲ ವಿಕೆಟ್‌ಗೆ 12.2 ಓವರ್‌ಗಳಲ್ಲಿ 61 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಆದರೆ ಈ ಇಬ್ಬರೂ ಆಟಗಾರರು ಬಿಗ್ ಇನಿಂಗ್ಸ್ ಕಟ್ಟಲಿಲ್ಲ.

IND vs ENG

ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್‌ (1), ಜೋಸ್ ಬಟ್ಲರ್ (5), ಸ್ಯಾಮ್ ಕರನ್‌ (0), ವಿಲ್‌ ಜಾಕ್ಸ್‌ (20) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಒಂದು ಹಂತದಲ್ಲಿ ಇಂಗ್ಲೆಂಡ್‌ 107 ರನ್‌ಗಳಿಗೆ ಆರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ರೂಟ್‌, ಡಾಸನ್‌ ಶತಕದ ಜೊತೆಯಾಟ

ಈ ಹಂತದಲ್ಲಿ ತಂಡಕ್ಕೆ ಭರವಸೆಯ ಆಟಗಾರ ಜೋ ರೂಟ್‌ ಹಾಗೂ ಲಿಯಾಮ್ ಡಾಸನ್ ಜೋಡಿ ಆಧಾರವಾಯಿತು. ಈ ಜೋಡಿ ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾಯಿತು. ಈ ಜೋಡಿ 134 ಎಸೆತಗಳಲ್ಲಿ 121 ರನ್‌ ಸೇರಿಸಿತು. ಈ ವೇಳೆ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 68 ರನ್ ಬಾರಿಸಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಸ್ಟಾರ್ ಆಟಗಾರ ಜೋ ರೂಟ್‌ 76 ಎಸೆತಗಳಲ್ಲಿ ಅಜೇಯ 76 ರನ್‌ ಸೇರಿಸಿತು. ಅಂತಿಮವಾಗಿ ಇಂಗ್ಲೆಂಡ್‌ 47.5 ಓವರ್‌ಗಳಲ್ಲಿ 258 ರನ್‌ ಸೇರಿಸಿ ಆಲೌಟ್ ಆಯಿತು. ಭಾರತದ ಪರ ಅಕ್ಷರ್ ಪಟೇಲ್‌ 4, ಪ್ರಸಿದ್ಧ್ ಕೃಷ್ಣ ಹಾಗೂ ಗುರ್ನೂರ್‌ ಬ್ರಾರ್ ತಲಾ ಎರಡು ವಿಕೆಟ್ ಪಡೆದರು.

ಒಂದೇ ಕೈನಲ್ಲಿ ಸೂಪರ್ ಮ್ಯಾನ್‌ ರೀತಿ ಕ್ಯಾಚ್‌ ಹಿಡಿದ ಕನ್ನಡಿಗ ಕೆಎಲ್ ರಾಹುಲ್

ಒಂದೇ ಕೈನಲ್ಲಿ ಸೂಪರ್ ಮ್ಯಾನ್‌ ರೀತಿ ಕ್ಯಾಚ್‌ ಹಿಡಿದ ಕನ್ನಡಿಗ ಕೆಎಲ್ ರಾಹುಲ್

ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭ ಸಾಧಾರಣವಾಗಿತ್ತು. ರೋಹಿತ್ ಶರ್ಮಾ ಹಾಗೂ ಶುಭಮನ್‌ ಗಿಲ್ ಮೊದಲ ವಿಕೆಟ್‌ಗೆ 43 ರನ್ ಸೇರಿಸಿದರು. ಸ್ಟಾರ್ ಆಟಗಾರ ರೋಹಿತ್ ಶರ್ಮಾ 11 ರನ್ ಬಾರಿಸಿ ಔಟ್ ಆದರು. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ 5 ರನ್‌ ಬಾರಿಸಿ ಜೋಫ್ರಾ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು. 48 ರನ್‌ಗಳಿಗೆ ಟೀಮ್ ಇಂಡಿಯಾ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

IND vs ENG ODI: ವಿರಾಟ್‌, ರೋಹಿತ್‌ ರನ್‌ ಕಲೆ ಹಾಕುವಲ್ಲಿ ಫೇಲ್‌

IND vs ENG ODI: ವಿರಾಟ್‌, ರೋಹಿತ್‌ ರನ್‌ ಕಲೆ ಹಾಕುವಲ್ಲಿ ಫೇಲ್‌

ಶುಭಮನ್ ಗಿಲ್ ಕಮಾಲ್

ಮೂರನೇ ವಿಕೆಟ್‌ಗೆ ನಾಯಕ ಶುಭಮನ್‌ ಗಿಲ್ ಹಾಗೂ ಉಪನಾಯಕ ಶ್ರೇಯಸ್ ಅಯ್ಯರ್ ಜೋಡಿ ಕಮಾಲ್‌ ಜೊತೆಯಾಟವನ್ನು ನೀಡಿತು. ಈ ಜೋಡಿ 103 ಎಸೆತಗಳಲ್ಲಿ ಅಜೇಯ 101 ರನ್‌ ಸೇರಿಸಿತು. ಈ ಹಂತದಲ್ಲಿ ಶುಭಮನ್‌ ಗಿಲ್‌ ಸ್ನಾಯು ಸೆಳೆತಕ್ಕೆ ಒಳಗಾಗಿ ಮೈದಾನದಿಂದ ಹೊರ ನಡೆದರು. ಈ ವೇಳೆಗೆ ಶುಭಮನ್‌ ಗಿಲ್ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 80 ರನ್‌ ಸಿಡಿಸಿದರು.

IND vs ENG

ಶ್ರೇಯಸ್ ಅಯ್ಯರ್ ಇಲ್ಲದ ರನ್ ಕದಿಯಲು ಹೋಗಿ 35 ರನ್‌ ಆಗಿದ್ದಾಗ ಔಟ್ ಆದರು. ಕೆಎಲ್ ರಾಹುಲ್‌ 1 ರನ್ ಬಾರಿಸಿ ಔಟ್ ಆದರು.

ಐದನೇ ವಿಕೆಟ್‌ಗೆ ಸ್ಟಾರ್ ಆಲ್‌ರೌಂಡರ್ ವಾಷಿಂಗ್ಟನ್‌ ಸುಂದರ್ ಹಾಗೂ ಅಕ್ಷರ್ ಪಟೇಲ್ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 105 ಎಸೆತಗಳಲ್ಲಿ ಅಜೇಯ 102 ರನ್‌ ಸೇರಿಸಿತು. ವಾಷಿಂಗ್ಟನ್‌ ಸುಂದರ್ ಅಜೇಯ 52, ಅಕ್ಷರ್ ಪಟೇಲ್ ಅಜೇಯ 57 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಭಾರತ 45.2 ಓವರ್‌ಗಳಲ್ಲಿ 4 ವಿಕೆಟ್‌ಗೆ 262 ರನ್‌ ಸೇರಿಸಿ ಜಯ ಸಾಧಿಸಿತು.

Story first published: Tuesday, July 14, 2026, 23:58 [IST]
Other articles published on Jul 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+