For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಮೊದಲ ದಿನವೇ ಪಂದ್ಯವನ್ನು ಸಂಪೂರ್ಣ ಹಿಡಿತಕ್ಕೆ ಪಡೆದ ಇಂಗ್ಲೆಂಡ್

Ind vs Eng: Headingley test, England strong hold after 1st day match
ಕಡಿಮೆ ಮೊತ್ತಕ್ಕೆ ಆಲ್ ಔಟ್ ಆಗಿ ಇಂಗ್ಲೆಂಡ್ ವೇಗಿಗಳಿಗೆ ತಲೆಬಾಗಿದ ಭಾರತ | Oneindia Kannada

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ದಿನ ಭಾರೀ ಹಿನ್ನೆಡೆ ಅನುಭವಿಸಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಡಿಂಗ್ಲೆ ಮೈದಾನದಲ್ಲಿ ಟಾಸ್ ಗೆದ್ದಿರುವುದು ಮಾತ್ರ ಭಾರತ ಸಾಧಿಸಿದ ಯಶಸ್ಸು. ಅದನ್ನು ಬಿಟ್ಟು ಮತ್ತೆಲ್ಲವೂ ಭಾರತದ ಪಾಲಿಗೆ ಕಹಿಯಾಗಿಯೇ ಉಳಿದಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿ 78 ರನ್‌ಗಳ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆದ ಭಾರತ ತಂಡ ಬಳಿಕ ಬೌಲಿಂಗ್‌ನಲ್ಲಿಯೂ ಸಂಪೂರ್ಣ ಹಿನ್ನೆಡೆ ಕಂಡಿದೆ. ಈ ಮೂಲಕ ಇಂಗ್ಲೆಂಡ್ ತಂಡ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೆಂಡ್ ಬೌಲರ್‌ಗಳ ಅಬ್ಬರ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬೌಲರ್‌ಗಳು ಭಾರತೀಯ ದಾಂಡಿಗರ ಮೇಲೆ ಸವಾರಿ ಮಾಡಿದರು. ಅದರಲ್ಲೂ ಅನುಭವಿ ಜೇಮ್ಸ್ ಆಂಡರ್ಸನ್ ಟೀಮ್ ಇಂಡಿಯಾದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಿಗೆ ಫೆವಿಲಿಯನ್ ದಾರಿ ತೋರಿಸಿದರು. ಇದರಲ್ಲಿ ನಾಯಕ ವಿರಾಟ್ ಕೊಹ್ಲಿಯ ವಿಕೆಟ್ ಕೂಡ ಸೇರಿದೆ. ಈ ಮೂಲಕ ಸ್ವತಃ ಆಂಡರ್ಸನ್ ಟೀಮ್ ಇಂಡಿಯಾದ ಕುಸಿತಕ್ಕೆ ನಾಂದಿ ಹಾಡಿದರು.

ಹೆಡಿಂಗ್ಲೆ ಅಂಗಳದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಬೌಲರ್‌ಗಳು ಸಾಂಘಿಕ ಪ್ರದರ್ಶನ ನೀಡುವ ಮೂಲಕ ಗಮನಸೆಳೆದಿದ್ದಾರೆ. ಆಂಡರ್ಸನ್ ಟೀಮ್ ಇಂಡಿಯಾದ ಮೂವರು ದಾಂಡಿಗರ ವಿಕೆಟ್ ಪಡೆದರೆ. ಇನ್ನು ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಕ್ರೇಗ್ ಒವರ್ಟನ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಂಡರ್ಸನ್ ಹಾಗೂ ಒವರ್ಟನ್ ತಲಾ ಮೂರು ವಿಕೆಟ್ ಪಡೆದುಕೊಂಡರು. ರಾಬಿನ್ಸನ್ ಹಾಗೂ ಸ್ಯಾಮ್ ಕರನ್ ತಲಾ ಎರಡು ವಿಕೆಟ್ ಉರುಳಿಸಿದರು.

ಟೀಮ್ ಇಂಡಿಯಾದ ಬ್ಯಾಟಿಂಗ್ ಪಡೆ ಹೆಡಿಂಗ್ಲೆ ಅಂಗಳದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ತಂಡದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ 20 ರನ್‌ ದಾಟದಿರುವುದು ತಂಡದ ಹೀನಾಯ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ಮಾತ್ರವೇ ಎರಡಂಕಿ ರನ್‌ಗಳಿಸಿದ ಆಟಗಾರರು. ಉಳಿದ ಯಾವ ಆಟಗಾರ ಕೂಡ ಡಬಲ್ ಡಿಜಿಟ್ ಸಾಧನೆ ಮಾಡಲು ವಿಫಲವಾಗಿದ್ದಾರೆ.

ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಪ್ರಾರಂಭದಿಂದಲೇ ಆಘಾತಕ್ಕೆ ಒಳಗಾಯಿತು. ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಮಿಂಚಿದ್ದ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಒಂದು ರನ್ ಆಗುವಷ್ಟರಲ್ಲಿ ಔಟ್ ಆಗಿ ಫೆವಿಲಿಯನ್ ಸೇರಿದರು. ಅನುಭವಿ ಜೇಮ್ಸ್ ಆಂಡರ್ಸನ್ ರಾಹುಲ್ ವಿಕೆಟ್ ಪಡೆದರು. ಬಳಿಕ ಬಂದ ಚೇತೇಶ್ವರ್ ಪೂಜಾರ ಕೂಡ ತಮ್ಮ ಕೆಟ್ಟ ಪ್ರದರ್ಶನ ಮುಂದುವರಿಸಿದ್ದಾರೆ. 9 ಎಸೆತಗಳನ್ನು ಎದುರಿಸಿದ ಪೂಜಾರ 1 ರನ್‌ಗಳಿಸಿ ಫೆವಿಲಿಯನ್ ಹಾದಿ ಹಿಡಿದಿದ್ದಾರೆ.

ಇನ್ನು ಪೂಜಾರ ಔಟ್ ಆದ ನಂತರ ನಾಯಕ ವಿರಾಟ್ ಕೊಹ್ಲಿ ರೋಹಿತ್ ಶರ್ಮಾಗೆ ಜೊತೆಯಾದರು. ಟೀಮ್ ಇಂಡಿಯಾ ಅಭಿಮಾನಿಗಳು ಈ ಜೋಡಿಯಿಂದ ಉತ್ತಮ ಜೊತೆಯಾಟವನ್ನು ನಿರೀಕ್ಷಿಸಿದ್ದರು. ಆದರೆ ಈ ಅನುಭವಿ ಜೋಡಿ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದರು. ನಾಯಕ ವಿರಾಟ್ ಕೊಹ್ಲಿ ಕೇವಲ 7 ರನ್‌ಗಳನ್ನು ಗಳಿಸಿ ಔಟ್ ಆದರು. ಈ ಮೂಲಕ ಇಂಗ್ಲೆಂಡ್ ಸರಣಿಯಲ್ಲಿ ತಮ್ಮ ರನ್ ಬರವನ್ನು ಮುಂದುವರಿಸಿದ್ದಾರೆ. ಈ ಪಂದ್ಯದಲ್ಲಿಯೂ ಜೇಮ್ಸ್ ಆಂಡರ್ಸನ್ ವಿರಾಟ್ ವಿಕೆಟ್ ಪಡೆದು ಸಂಭ್ರಮಿಸಿದರು

ಇನ್ನು ಈ ಹಂತದಲ್ಲಿ ರೋಹಿತ್ ಶರ್ಮಾಗೆ ಉಪನಾಯಕ ಅಜಿಂಕ್ಯಾ ರಹಾನೆ ಜೊತೆಯಾದರು. ಈ ಜೋಡಿ ತಂಡಕ್ಕೆ ಚೇತರಿಕೆಯನ್ನು ನೀಡುವ ನಿರೀಕ್ಷೆ ಹುಟ್ಟಿಸಿತ್ತು. ಆದರೆ ದೊಡ್ಡ ಜೊತೆಯಾಟವನ್ನು ನೀಡುವಲ್ಲಿ ಈ ಅನುಭವಿ ಆಟಗಾರರು ಕೂಡ ವಿಫಲವಾದರು. 18 ನ್‌ಗಳಿಸಿದ್ದ ರಹಾನೆ ರಾಬಿನ್ಸನ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ನಂತರ ಬಂದ ಪಂತ್ ಕೂಡ ಎರಡು ರನ್‌ಗಳಿಗೆ ಆಟ ಮುಗಿಸಿದರು. ರವೀಂದ್ರ ಜಡೇಜಾ 4 ರನ್‌ಗಳ ಕೊಡುಗೆ ಸಲ್ಲಿಸಿದರು. ಲಾರ್ಡ್ಸ್ ಅಂಗಳದಲ್ಲಿ ಮಿಂಚಿದ್ದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಇಬ್ಬರೂ ಶೂನ್ಯ ಸುತ್ತಿದರೆ ಇಶಾಂತ್ ಶರ್ಮಾ ಅಜೇಯ ಎಂಟು ರನ್‌ ಬಾರಿಸಿ ಕ್ರೀಸ್‌ನಲ್ಲಿ ಉಳಿದರು. ಈ ಮೂಲಕ ಭಾರತ ಈ ಪಂದ್ಯದಲ್ಲಿ 78 ರನ್‌ಗಳಿಗೆ ಆಲೌಟ್ ಆಯಿತು

ಬ್ಯಾಟಿಂಗ್‌ನಲ್ಲಿಯೂ ಇಂಗ್ಲೀಷರ ಮೇಲುಗೈ: ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಅಗ್ಗಕ್ಕೆ ಕಟ್ಟಿ ಹಾಕಲು ಯಶಸ್ವಿಯಾದ ಇಂಗ್ಲೆಂಡ್ ಆಟಗಾರರು ಬಳಿಕ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದಾರೆ. ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿಯೂ ವಿಫಲವಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಇಂಗ್ಲೆಂಡ್ ತಂಡ ಇಂದಿನ ಪಂದ್ಯದಲ್ಲಿ ಹೊಸ ಜೋಡಿಯನ್ನು ಕಣಕ್ಕಿಳಿಸಿತ್ತು. ರೋರಿ ಬರ್ನ್ಸ್ ಹಾಗೂ ಹಸೀಬ್ ಹಮೀದ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಜೋಡಿ ಟೀಮ್ ಇಂಡಿಯಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದೆ. ಮೊದಲ ದಿನದಾಟದಲ್ಲಿ 42 ಓವರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ವಿಕೆಟ್ ಕಳೆದುಕೊಳ್ಳದೆ ದಿನದಾಟ ಮುಗಿಸಿದೆ. 52 ರನ್‌ಗಳಿಸಿರುವ ರೋರಿ ಬರ್ನ್ಸ್ ಹಾಗೂ 60 ರನ್‌ಗಳಿಸಿರುವ ಹಸೀಬ್ ಹಮೀದ್ ಎರಡನೇ ದಿನಕ್ಕೆ ಕ್ರೀಸ್ ಕಾಯ್ದಿರಿಸಿದ್ದಾರೆ. ಇಂಗ್ಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 120 ರನ್‌ಗಳನ್ನು ಗಳಿಸಿದೆ. ಈ ಮೂಲಕ 42 ರನ್‌ಗಳ ಮುನ್ನಡೆ ಸಾಧಿಸಿದ್ದು ಬೃಹತ್ ಮೊತ್ತದ ಮುನ್ನಡೆ ಪಡೆಯುವ ಲಕ್ಷಣ ಕಾಣಿಸುತ್ತಿದೆ. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯುವನ್ನು ರಕ್ಷಿಸಿಕೊಳ್ಳುವುದು ಬಹಳ ಕಠಿಣವಾಗಿರಲಿದೆ.

ಟೀಮ್ ಇಂಡಿಯಾ ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್

ಇಂಗ್ಲೆಂಡ್ ಆಡುವ ಬಳಗ: ಜೋ ರೂಟ್ (ನಾಯಕ), ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜಾನಿ ಬೈರ್‌ಸ್ಟೊವ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಕ್ರೇಗ್ ಓವರ್‌ಟನ್, ಜೇಮ್ಸ್ ಆಂಡರ್ಸನ್

Story first published: Thursday, August 26, 2021, 9:50 [IST]
Other articles published on Aug 26, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+