Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG: ರಾಜ್‌ಕೋಟ್‌ನಲ್ಲಿ ಹೇಗಿದೆ ಟೀಮ್ ಇಂಡಿಯಾದ ಅಂಕಿಅಂಶ?

ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್‌ ಸರಣಿ ನಡೆಯುತ್ತಿದೆ. ಈಗಾಗಲೇ ಎರಡು ಟೆಸ್ಟ್‌ ಪಂದ್ಯಗಳು ಮುಗಿದಿದ್ದು, ಟೆಸ್ಟ್ ಸರಣಿಯ ಮೂರನೇ ಪಂದ್ಯ ಫೆಬ್ರವರಿ 15 ರಿಂದ ನಡೆಯಲಿದೆ. ಈ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ. ರಾಜ್‌ಕೋಟ್‌ನಲ್ಲಿ ಟೀಂ ಇಂಡಿಯಾದ ಟೆಸ್ಟ್‌ ದಾಖಲೆ ಉತ್ತಮವಾಗಿದೆ. ಆದರೆ, ಭಾರತ ಇಲ್ಲಿಯವರೆಗೆ ಈ ಅಂಗಳದಲ್ಲಿ ಕೇವಲ 2 ಟೆಸ್ಟ್ ಪಂದ್ಯಗಳನ್ನು ಆಡಿದೆ. ಟೀಂ ಇಂಡಿಯಾ 2016ರಲ್ಲಿ ಮೊದಲ ಟೆಸ್ಟ್ ಹಾಗೂ 2018ರಲ್ಲಿ ಕೊನೆಯ ಟೆಸ್ಟ್ ಆಡಿತ್ತು. ಈಗ ಮೂರನೇ ಟೆಸ್ಟ್‌ ಪಂದ್ಯನವನ್ನು ಆಡಲು ತಯಾರಿ ನಡೆಸಿದೆ.

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಇದುವರೆಗೆ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ ಅವರು ಒಂದು ಪಂದ್ಯವನ್ನು ಗೆದ್ದಿದೆ. ಆದರೆ ಒಂದು ಪಂದ್ಯ ಡ್ರಾ ಆಗಿದೆ. 2016ರಲ್ಲಿ ಇಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯ ನಡೆದಿತ್ತು. ಈ ಪಂದ್ಯ ಡ್ರಾ ಆಗಿತ್ತು. ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 537 ರನ್ ಗಳಿಸಿತ್ತು. 260 ರನ್ ಗಳಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 488 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ 172 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆದರೂ ಈ ಪಂದ್ಯ ಡ್ರಾ ಆಗಿತ್ತು.

Ind vs Eng: How Are Team India’s Stats in Rajkot? India-England 3 Test From February 15

ಟೀಂ ಇಂಡಿಯಾ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ರಾಜ್‌ಕೋಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2018 ರಲ್ಲಿ ಆಡಿತ್ತು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 272 ರನ್‌ಗಳಿಂದ ಗೆದ್ದುಕೊಂಡಿತು. ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 649 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಪೃಥ್ವಿ ಶಾ ಶತಕ ಸಿಡಿಸಿದ್ದರು. ಪೃಥ್ವಿ 134 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 139 ರನ್ ಗಳಿಸಿದ್ದರು. ರವೀಂದ್ರ ಜಡೇಜಾ ಅಜೇಯ 100 ರನ್ ಗಳಿಸಿದ್ದರು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 181 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 196 ರನ್ ಗಳಿಸಿ ಆಲೌಟ್ ಆಯಿತು.

Ind vs Eng: How Are Team India’s Stats in Rajkot? India-England 3 Test From February 15

ಭಾರತ ಮತ್ತೊಮ್ಮೆ ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಹಲವು ಬದಲಾವಣೆಗಳೊಂದಿಗೆ ಮೈದಾನಕ್ಕಿಳಿಯಲಿದೆ. ಇನ್ನು ಸ್ಟಾರ್ ಆಟಗಾರರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ. ವೆಸ್ಟ್‌ ಇಂಡೀಸ್‌ ವಿರುದ್ಧ ಈ ಅಂಗಳದಲ್ಲಿ ಶತಕ ಬಾರಿಸಿದ ಯಾವೊಬ್ಬ ಆಟಗಾರ ಈಗ ತಂಡದಲ್ಲಿ ಇಲ್ಲ. ಯುವ ಪಡೆ, ಇಂಗ್ಲೆಂಡ್ ವಿರುದ್ಧ ಹೇಗೆ ಪಂದ್ಯವನ್ನು ಆಡಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Friday, February 9, 2024, 8:52 [IST]
Other articles published on Feb 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+