For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿ ಅಬ್ಬರಿಸಿದ ರಜತ್ ಪಾಟಿದಾರ್; ಆರ್‌ಸಿಬಿ ಫುಲ್ ಖುಷ್!

ಶನಿವಾರ, ಜನವರಿ 13ರಂದು ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಲಯನ್ಸ್​ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದ ಬ್ಯಾಟರ್ ರಜತ್ ಪಾಟಿದಾರ್ ಭರ್ಜರಿ ಶತಕ ಬಾರಿಸಿ ಅಬ್ಬರಿಸಿದ್ದಾರೆ.

ಶುಕ್ರವಾರದಂದು ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಲಯನ್ಸ್ ತಂಡ ತನ್ನ ಮೊದಲ ಇನಿಂಗ್ಸ್​ನಲ್ಲಿ 233 ರನ್​ ಕಲೆಹಾಕಿ ಆಲೌಟ್ ಆಯಿತು.

IND vs ENG: India A Batter Rajat Patidar Hits Century Against England Lions

ಇಂಗ್ಲೆಂಡ್ ಲಯನ್ಸ್ ತಂಡದ ಪರ ಡಾನ್ ಮೌಸ್ಲಿ 60 ರನ್‌ಗಳ ಅರ್ಧಶತಕ ಬಾರಿಸಿ ಮಿಂಚಿದರೆ, ಒಲ್ಲೀ ರಾಬಿನ್ಸನ್ 45 ರನ್ ಗಳಿಸಿದರು. ಆರಂಭಿಕರಾದ ಕೀಟನ್ ಜೆನ್ನಿಂಗ್ಸ್ 25 ರನ್ ಮತ್ತು ಅಲೆಕ್ಸ್ ಲೀಸ್ 35 ರನ್ ಬಾರಿಸಿ ಉತ್ತಮ ಆರಂಭ ನೀಡಿದ್ದರು.

ಆದರೆ, ಭಾರತ ಎ ತಂಡದ ಪರ ಮಾನವ್ ಸುತಾರ್ 3 ವಿಕೆಟ್ ಕಬಳಿಸಿದರೆ, ಆಕಾಶ್ ದೀಪ್ 2 ವಿಕೆಟ್ ಪಡೆದರು. ಇನ್ನು ವಿಧ್ವತ್ ಕಾವೇರಪ್ಪ, ತುಷಾರ್ ದೇಶಪಾಂಡೆ, ಪುಲ್ಕಿತ್ ನಾರಂಗ್ ತಲಾ ಒಂದೊಂದು ವಿಕೆಟ್ ಕಬಳಿಸಿ ಇಂಗ್ಲೆಂಡ್ ಲಯನ್ಸ್ ತಂಡವನ್ನು ಅಲೌಟ್ ಮಾಡಲು ನೆರವಾದರು.

ಆನಂತರ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡಕ್ಕೆ ನಾಯಕ ಅಭಿಮನ್ಯು ಈಶ್ವರನ್ ಹಾಗೂ ರಜತ್ ಪಾಟಿದಾರ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್​ಗೆ 73 ರನ್ ರನ್‌ಗಳ ಜೊತೆಯಾಟ ನೀಡಿದ್ದಾಗ, ಅಭಿಮನ್ಯು ಈಶ್ವರನ್ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

IND vs ENG: India A Batter Rajat Patidar Hits Century Against England Lions

ನಂತರ ಬಂದ ಪ್ರದೋಶ್ ಪೌಲ್ 21 ರನ್ ಗಳಿಸಿ ನಿರ್ಗಮಿಸಿದರು. ಮತ್ತೊಂದೆಡೆ ಅದ್ಭುತ ಇನಿಂಗ್ಸ್ ಆಡಿದ ಆರ್‌ಸಿಬಿ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಇಂಗ್ಲೆಂಡ್ ಲಯನ್ಸ್ ತಂಡದ ಬೌಲರ್‌ಗಳ ಬೆವರಿಳಿಸಿದರು.

131 ಎಸೆತಗಳಲ್ಲಿ ಮೂರಂಕಿ ಮೊತ್ತ ಪೂರೈಸಿದರು. ಶತಕದ ಬಳಿಕ ಬಿರುಸಿನ ಬ್ಯಾಟಿಂಗ್​ಗಿಳಿದ ರಜತ್ ಪಾಟಿದಾರ್ 141 ಎಸೆತಗಳಲ್ಲಿ 18 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 111 ರನ್ ಬಾರಿಸಿ ಔಟಾದರು.

2024ರ ಐಪಿಎಲ್ ಪಂದ್ಯಾವಳಿಗೆ ಮುನ್ನ ರಜತ್ ಪಾಟಿದಾರ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಮತ್ತು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಏಕೆಂದರೆ, ರಜತ್ ಪಾಟಿದಾರ್ ಅವರು ಮುಂಬರುವ ಆವೃತ್ತಿಯಲ್ಲಿ ಆರ್‌ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

ರಜತ್ ಪಾಟಿದಾರ್ ಭರ್ಜರಿ ಶತಕದ ನೆರವಿನಿಂದ ಭಾರತ ಎ ತಂಡವು 54 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಿದ್ದು, 24 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ. ಸದ್ಯ ಕ್ರೀಸ್​ನಲ್ಲಿ ಸರ್ಫರಾಜ್ ಖಾನ್ (71 ರನ್) ಹಾಗೂ ಕೆಎಸ್ ಭರತ್ (14 ರನ್) ಬ್ಯಾಟಿಂಗ್ ಮಾಡುತ್ತಿದ್ದಾರೆ.

Story first published: Saturday, January 13, 2024, 13:30 [IST]
Other articles published on Jan 13, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+