For Quick Alerts
ALLOW NOTIFICATIONS  
For Daily Alerts
 

IND vs ENG: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯಕ್ಕೆ ಭಾರತ ಎ ತಂಡ ಪ್ರಕಟ; ವಿಧ್ವತ್ ಕಾವೇರಪ್ಪ ಆಯ್ಕೆ

ಮುಂಬರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯಗಳು ಮತ್ತು ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡ ಸೆಣಸಾಡಲಿದೆ.

ಇದೀಗ ಇಂಗ್ಲೆಂಡ್ ಲಯನ್ಸ್ ವಿರುದ್ಧದ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯಕ್ಕಾಗಿ 13 ಸದಸ್ಯರ ಭಾರತ ಎ ತಂಡವನ್ನು ಬಿಸಿಸಿಐ ಶನಿವರ, ಜನವರಿ 6ರಂದು ಪ್ರಕಟಿಸಿದ್ದು, ಬಂಗಾಳದ ಅನುಭವಿ ಆಟಗಾರ ಅಭಿಮನ್ಯು ಈಶ್ವರನ್ ಮುನ್ನಡೆಸಲಿದ್ದಾರೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್‌ ಪಂದ್ಯಕ್ಕೂ ಮುನ್ನ ಅಭ್ಯಾಸ ಪಂದ್ಯ ನಡೆಯಲಿದ್ದು, ಇದು ಜನವರಿ 12ರಂದು ಆರಂಭವಾಗಲಿದೆ.

IND vs ENG: India A Squad Announced for Warm-up And Unofficial Test match against England Lions

ಗಮನಾರ್ಹವೆಂದರೆ, ಜನವರಿ 11ರಂದು ಪ್ರಾರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ಭಾರತ ತಂಡದ ಟಿ20 ಸರಣಿಯಲ್ಲಿ ಭಾಗವಹಿಸುವ ಸಾಧ್ಯತೆಯಿರುವ ಕಾರಣ, ಯುವ ಆಟಗಾರರಾದ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ತಿಲಕ್ ವರ್ಮಾ, ಅವೇಶ್ ಖಾನ್ ಮತ್ತು ರಿಂಕು ಸಿಂಗ್ ಅವರು ಭಾರತ ಎ ತಂಡದಲ್ಲಿ ಹೆಸರಿಸಲ್ಪಟ್ಟಿಲ್ಲ.

ಭವಿಷ್ಯದಲ್ಲಿ ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿರುವ ಬಿ ಸಾಯಿ ಸುದರ್ಶನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್ ಮತ್ತು ಪ್ರದೋಶ್ ರಂಜನ್ ಪಾಲ್ ಅವರಂತಹ ಭರವಸೆಯ ಪ್ರತಿಭೆಗಳನ್ನು ಭಾರತ ಎ ತಂಡ ಒಳಗೊಂಡಿದೆ.

ಇನ್ನು ಭಾರತ ಎ ತಂಡದಲ್ಲಿ ಕರ್ನಾಟಕದ ಏಕೈಕ ಆಟಗಾರ ವಿಧ್ವತ್ ಕಾವೇರಪ್ಪ ಆಯ್ಕೆಯಾಗಿದ್ದಾರೆ. ವೇಗದ ಬೌಲರ್ ಆಗಿರುವ ಅವರು ಭವಿಷ್ಯದ ಭಾರತ ತಂಡದಲ್ಲಿ ಕಾಣಿಸಲಿರುವ ಮತ್ತೊಂದ ಪ್ರತಿಭೆ. ಸದ್ಯ 2024ರ ರಣಜಿ ಟ್ರೋಫಿ ಅವೃತ್ತಿಯಲ್ಲಿ ಕರ್ನಾಟಕ ಪರ ಆಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಯಲ್ಲಿ ಮೀಸಲು ವಿಕೆಟ್‌ಕೀಪರ್ ಆಗಿದ್ದ ಕೆಎಸ್ ಭರತ್ ಅವರು ಇತರ ಗಮನಾರ್ಹ ಆಟಗಾರರೊಂದಿಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಭಾರತ ಎ ತಂಡದ ಭಾಗವಾಗಿದ್ದಾರೆ.

ಅಭ್ಯಾಸ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ "ಬಿ' ಮೈದಾನದಲ್ಲಿ ನಡೆಯಲಿದ್ದು, ಮೂರು ಅನಧಿಕೃತ ಟೆಸ್ಟ್‌ ಪಂದ್ಯಗಳು ಮುಖ್ಯ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೊದಲ ಅನಧಿಕೃತ ಟೆಸ್ಟ್ ಪಂದ್ಯ ಜನವರಿ 17ರಂದು ಪ್ರಾರಂಭವಾಗುತ್ತದೆ.

ಈ ಸರಣಿಯು ಅಭಿಮನ್ಯು ಈಶ್ವರನ್ ಅವರಿಗೆ ಭಾರತೀಯ ಟೆಸ್ಟ್ ತಂಡದಲ್ಲಿ ಸೇರ್ಪಡೆಗಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶ ಒದಗಿಸುತ್ತದೆ. ಗಮನಾರ್ಹವಾಗಿ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯು ಜನವರಿ 25ರಂದು ಆರಂಭವಾಗಲಿದೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಭಾರತ ಎ ತಂಡ

ಅಭಿಮನ್ಯು ಈಶ್ವರನ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಪ್ರದೋಶ್ ರಂಜನ್ ಪಾಲ್, ಕೆಎಸ್ ಭರತ್ (ವಿಕೆಟ್ ಕೀಪರ್), ಮಾನವ್ ಸುತಾರ್, ಪುಲ್ಕಿತ್ ನಾರಂಗ್, ನವದೀಪ್ ಸೈನಿ, ತುಷಾರ್ ದೇಶಪಾಂಡೆ, ವಿದ್ವತ್ ಕಾವೇರಪ್ಪ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆಕಾಶ್ ದೀಪ್.

Story first published: Sunday, January 7, 2024, 10:24 [IST]
Other articles published on Jan 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+