Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG: ರಾಜಕೋಟ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಸ್ಪಿನ್ನರ್ಸ್; ಇಂಗ್ಲೆಂಡ್ ವಿರುದ್ಧ ಗೆದ್ದು ದಾಖಲೆ ಬರೆದ ಭಾರತ!

ಭಾನುವಾರ, ಫೆಬ್ರವರಿ 18ರಂದು ರಾಜ್‌ಕೋಟ್‌ನಲ್ಲಿ ನಾಲ್ಕನೇ ದಿನಕ್ಕೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ದಾಖಲೆಯ 434 ರನ್‌ಗಳ ಅಂತರದ ಗೆಲುವು ಸಾಧಿಸಿದೆ.

ಈ ಮೂಲಕ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಭಾರತ ತಂಡ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

IND vs ENG: India Beat England By 434 Runs in 3rd Test Match In Rajkot

ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ದ್ವಿಶತಕ, ರವೀಂದ್ರ ಜಡೇಜಾ ಅವರ 5 ವಿಕೆಟ್‌ಗಳ ನೆರವಿನಿಂದ ಭಾರತ ತಂಡವು ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ದಾಖಲೆಯ 434 ರನ್‌ಗಳಿಂದ ಸೋಲಿಸಲು ನೆರವಾಯಿತು.

ಭಾನುವಾರದಂದು ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ 557 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡು 39.4 ಓವರ್‌ಗಳಲ್ಲಿ 122 ರನ್‌ಗಳಿಗೆ ಆಲೌಟ್ ಆಯಿತು.

ಬೃಹತ್ ಗುರಿ ಬೆನ್ನಟ್ಟುವಿಕೆಯಲ್ಲಿ ಬಜ್‌ಬಾಲ್ ಶೈಲಿಯ ಆಟವಾಡಲು ಯತ್ನಿಸಿದ ಇಂಗ್ಲೆಂಡ್‌ ಬ್ಯಾಟರ್‌ಗಳಿಗೆ ಭಾರತೀಯ ಸ್ಪಿನ್ನರ್‌ಗಳು ಪೆವಿಲಿಯನ್ ದಾರಿ ತೋರಿಸಿದರು. ಇದರ ಪರಿಣಾಮವಾಗಿ ಯಾವೊಬ್ಬ ಆಂಗ್ಲ ಬ್ಯಾಟರ್ ಅರ್ಧಶತಕದ ಗಡಿ ದಾಟಲು ಸಾಧ್ಯವಾಗಲಿಲ್ಲ. ಮಾರ್ಕ್ ವುಡ್ 33 ರನ್‌ಗಳ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು.

ಈ ಮೂಲಕ ತಮ್ಮ 577 ಟೆಸ್ಟ್ ಪಂದ್ಯಗಳ ಇತಿಹಾಸದಲ್ಲಿಯೇ ರನ್‌ಗಳ ವಿಷಯದಲ್ಲಿ ಭಾರತ ತಂಡದ ಅತಿದೊಡ್ಡ ಗೆಲುವು ಇದಾಗಿದೆ. ಈ ಮೊದಲು 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ 372 ರನ್‌ಗಳ ಅಂತರದಲ್ಲಿ ಗೆದ್ದಿದ್ದು ಈವರೆಗಿನ ದಾಖಲೆಯಾಗಿತ್ತು.

ಮತ್ತೊಂದೆಡೆ, ರನ್‌ಗಳ ಅಂತರದಲ್ಲಿ ಇಂಗ್ಲೆಂಡ್‌ ತಂಡಕ್ಕೆ ಎರಡನೇ ಅತಿದೊಡ್ಡ ಟೆಸ್ಟ್ ಸೋಲು ಇದಾಗಿದೆ. ಇದಕ್ಕೂ ಮುನ್ನ 1934ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದಿ ಓವಲ್‌ನಲ್ಲಿ 562 ರನ್‌ಗಳಿಂದ ಸೋಲು ಕಂಡಿತ್ತು. ಇದೀಗ ಭಾರತ ವಿರುದ್ಧ ರಾಜ್‌ಕೋಟ್‌ನಲ್ಲಿ 434 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ.

ಇನ್ನು ಬೌಲಿಂಗ್‌ನಲ್ಲಿ ಭಾರತ ತಂಡದ ಪರ ರವೀಂದ್ರ ಜಡೇಜಾ ಅವರ 5 ವಿಕೆಟ್ ಗೊಂಚಲು ಹೊರತುಪಡಿಸಿ, ಕುಲದೀಪ್ ಯಾದವ್ 2 ವಿಕೆಟ್, ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ದ್ವಿಶತಕ ಬಾರಿಸಿದರು. ಶುಭ್ಮನ್ ಗಿಲ್ 91 ರನ್ ಗಳಿಸಿದರೆ, ಕೊನೆಯಲ್ಲಿ ಸರ್ಫರಾಜ್ ಖಾನ್ ಅಜೇಯ 68 ರನ್ ಬಾರಿಸಿದರು.

ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ 236 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 12 ಸಿಕ್ಸರ್‌ಗಳ ಸಮೇತ ಅಜೇಯ 214 ರನ್ ಬಾರಿಸಿದರು. ಇದೇ ವೇಳೆ ಸರ್ಫರಾಜ್ ಖಾನ್ 72 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ ಅಜೇಯ 68 ರನ್ ಗಳಿಸಿದರು.

Story first published: Sunday, February 18, 2024, 17:15 [IST]
Other articles published on Feb 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+