IND vs ENG ಪ್ರಥಮ ಏಕದಿನ ಪಂದ್ಯ: ಓವಲ್ ಪಿಚ್ ವರದಿ, ಹವಾಮಾನ ವರದಿ ಮತ್ತು ಬೌಂಡರಿ ಲೆಂತ್ ಮಾಹಿತಿ

ಸದ್ಯ ಇಂಗ್ಲೆಂಡ್ ನೆಲದಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ ಐದನೇ ಟೆಸ್ಟ್ ಪಂದ್ಯದಲ್ಲಿ ಸೆಣಸಾಟ ನಡೆಸಿ ಸೋತು ನಂತರ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಗೆದ್ದು ಟೆಸ್ಟ್ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಈ ಮೂಲಕ ರೋಹಿತ್ ನಾಯಕತ್ವದ ಟೀಮ್ ಇಂಡಿಯಾ ಸತತ ಆರನೇ ಸರಣಿಯನ್ನು ಗೆದ್ದು ಬೀಗಿದ್ದು ಇದೀಗ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ವಶಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಈ ಏಕದಿನ ಸರಣಿಯ ಪ್ರಥಮ ಪಂದ್ಯ ಜುಲೈ 12ರ ಮಂಗಳವಾರದಂದು ಆರಂಭವಾಗಲಿದ್ದು, ಈ ಪಂದ್ಯ ಲಂಡನ್‌ನ ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಲಿದೆ.
ಈ ಕ್ರೀಡಾಂಗಣದ ಮಾಹಿತಿ, ಪಿಚ್ ವರದಿ, ಲಂಡನ್ ನಗರದ ಹವಾಮಾನ ವರದಿ, ಕ್ರೀಡಾಂಗಣದ ಬೌಂಡರಿ ಲೆಂತ್ ಮತ್ತು ಈ ಕ್ರೀಡಾಂಗಣದಲ್ಲಿ ಇತ್ತಂಡಗಳು ಆಡಿರುವ ಪಂದ್ಯಗಳಲ್ಲಿ ಎಷ್ಟು ಪಂದ್ಯಗಳಲ್ಲಿ ಗೆದ್ದಿದೆ ಎಂಬುದರ ಕುರಿತಾದ ವಿವರ ಮುಂದೆ ಇದೆ ಓದಿ.

ಕ್ರೀಡಾಂಗಣದಲ್ಲಿ ಆಡಿರುವ ಪಂದ್ಯಗಳು ಮತ್ತು ಫಲಿತಾಂಶದ ವಿವರ
ಲಂಡನ್‌ನ ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಇಂಗ್ಲೆಂಡ್‌ನ ಅತಿ ಹಳೆಯ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾಗಿದ್ದು, ಆತಿಥೇಯ ಇಂಗ್ಲೆಂಡ್ ಈ ಕ್ರೀಡಾಂಗಣದ ಅಂಗಳದಲ್ಲಿ ಒಟ್ಟು 49 ಪಂದ್ಯಗಳನ್ನಾಡಿದ್ದು, 30 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದೆ, 17 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ ಮತ್ತು ಉಳಿದೆರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿವೆ. ಇನ್ನು ಪ್ರವಾಸಿ ಭಾರತ ಈ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 16 ಏಕದಿನ ಪಂದ್ಯಗಳನ್ನಾಡಿದ್ದು, 6 ಪಂದ್ಯಗಳಲ್ಲಿ ಜಯ ಸಾಧಿಸಿ 9 ಪಂದ್ಯಗಳಲ್ಲಿ ಸೋತಿದೆ ಮತ್ತು ಉಳಿದೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.

ಬೌಂಡರಿ ಲೆಂತ್, ಪಿಚ್ ವರದಿ ಮತ್ತು ಹವಾಮಾನ ವರದಿ
ಬೌಂಡರಿ ಲೆಂತ್: ಆನ್ ಸೈಡ್: 67 ಮೀಟರ್, ಆಫ್ ಸೈಡ್: 70 ಮೀಟರ್, ವಾಕ್ಸ್ ಹಾಲ್ ಎಂಡ್ 68 ಮೀಟರ್ ಮತ್ತು ಪೆವಿಲಿಯನ್ ಎಂಡ್ 66 ಮೀಟರ್
ಪಿಚ್ ವರದಿ: ಕೆನ್ನಿಂಗ್ಟನ್ ಓವಲ್ ಪಿಚ್ ಫ್ಲ್ಯಾಟ್ ಪಿಚ್ ಆಗಿದ್ದು, ಇಲ್ಲಿ ಹಲವು ಅಧಿಕ ರನ್ ಗಳಿಕೆಯ ಪಂದ್ಯಗಳು ಜರುಗಿವೆ. ಈ ಪಿಚ್‌ನಲ್ಲಿ ಸ್ಪಿನ್ ಬೌಲರ್‌ಗಳು ದೊಡ್ಡ ಪಾತ್ರವನ್ನು ನಿರ್ವಹಿಸಲಿದ್ದು, ವೇಗಿಗಳು ಕೊಂಚ ದುಬಾರಿಯಾಗಲಿದ್ದಾರೆ. ಇನ್ನು ಬ್ಯಾಟ್ಸ್‌ಮನ್‌ಗಳು ಈ ಪಿಚ್‌ನ ಬೌನ್ಸರ್ ಎಸೆತಗಳಿಗೆ ಉತ್ತಮ ಹೊಡೆತಗಳನ್ನು ಬಾರಿಸಬಹುದಾಗಿದ್ದು, ಉತ್ತಮ ರನ್ ಹೊಳೆ ಹರಿಯಲಿದೆ ಎನ್ನಬಹುದು.
ಹವಾಮಾನ ವರದಿ: ಜುಲೈ 12ರ ಮಂಗಳವಾರದಂದು ಲಂಡನ್ ನಗರದಲ್ಲಿ 31° ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಇನ್ನು ಆ ದಿನ ಹೆಚ್ಚು ಮೋಡ ಕವಿದ ವಾತಾವರಣವಿರಲಿದೆ, ಆದರೆ ಮಳೆಯಾಗುವ ಯಾವುದೇ ಸಂಭವವಿಲ್ಲ ಎಂದು ಹವಾಮಾನ ವರದಿ ಹೇಳುತ್ತಿದೆ. ಆದ್ದರಿಂದ ಸಂಪೂರ್ಣ 50 ಓವರ್‌ಗಳ ಪಂದ್ಯವನ್ನು ನಾವಿಲ್ಲಿ ನಿರೀಕ್ಷಿಸಬಹುದಾಗಿದೆ.

ತಂಡಗಳು
ಏಕದಿನ ಸರಣಿಗೆ ಪ್ರಕಟಗೊಂಡಿರುವ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜೆ ಬುಮ್ರಾ, ಪ್ರಸಿದ್ಧ್ ಶಮಿ ಕೃಷ್ಣ, ಮೊಹ್ , ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
ಇಂಗ್ಲೆಂಡ್: ಜೋಸ್ ಬಟ್ಲರ್, ಮೊಯಿನ್ ಅಲಿ, ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರೇಗ್ ಓವರ್‌ಟನ್, ಮ್ಯಾಥ್ಯೂ ಪಾರ್ಕಿನ್ಸನ್, ಜೋ ರೂಟ್, ಜೇಸನ್ ರಾಯ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications