IND vs ENG 3rd ODI: ನಿರ್ಣಾಯಕ ಪಂದ್ಯದ ಡ್ರೀಮ್ ಟೀಮ್ ಪ್ರೆಡಿಕ್ಷನ್, ಸಂಭಾವ್ಯ ತಂಡಗಳ ಮಾಹಿತಿ

ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು ಮೊದಲಿಗೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು 2-1 ಅಂತರದಿಂದ ಗೆದ್ದ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳಬೇಕೆಂದರೆ ನಾಳೆ ( ಜುಲೈ 17 ) ನಡೆಯಲಿರುವ ತೃತೀಯ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರಥಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ್ದ ಟೀಂ ಇಂಡಿಯಾ ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 100 ರನ್‌ಗಳ ಹೀನಾಯ ಸೋಲನ್ನು ಅನುಭವಿಸುವುದರ ಮೂಲಕ ಇದೀಗ ಸರಣಿಯಲ್ಲಿ ಇತ್ತಂಡಗಳು ಕೂಡ 1-1 ಅಂತರದ ಸಮಬಲ ಸಾಧಿಸಿವೆ.
ಹೀಗಾಗಿ ಜುಲೈ 17ರ ಭಾನುವಾರದಂದು ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ತೃತೀಯ ಏಕದಿನ ಪಂದ್ಯದ ಮೇಲೆ ಎರಡೂ ತಂಡಗಳು ಕಣ್ಣಿಟ್ಟಿವೆ. ಹೀಗೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿರುವ ಈ ತೃತೀಯ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಸಂಭಾವ್ಯ ಆಡುವ ಬಳಗ ಹೇಗಿರಲಿದೆ ಹಾಗೂ ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು ಯಾವ ರೀತಿಯ ತಂಡಗಳನ್ನು ರಚಿಸಬೇಕು ಎಂಬುದರ ಕುರಿತಾದ ಮಾಹಿತಿ ಮುಂದೆ ಇದೆ ಓದಿ.

ಸಂಭಾವ್ಯ ಆಡುವ ಬಳಗಗಳು
ಭಾರತ ಸಂಭಾವ್ಯ ಆಡುವ ಬಳಗ: 1 ರೋಹಿತ್ ಶರ್ಮಾ (ನಾಯಕ), 2 ಶಿಖರ್ ಧವನ್, 3 ವಿರಾಟ್ ಕೊಹ್ಲಿ, 4 ಸೂರ್ಯಕುಮಾರ್ ಯಾದವ್, 5 ಹಾರ್ದಿಕ್ ಪಾಂಡ್ಯ, 6 ರಿಷಭ್ ಪಂತ್ (ವಿಕೆಟ್ ಕೀಪರ್), 7 ರವೀಂದ್ರ ಜಡೇಜಾ, 8 ಶಾರ್ದೂಲ್ ಠಾಕೂರ್, 9 ಮೊಹಮ್ಮದ್ ಶಮಿ, 10 ಜಸ್ಪ್ರೀತ್ ಬುಮ್ರಾ, 11. ಯುಜುವೇಂದ್ರ ಚಾಹಲ್
ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ: 1 ಜೇಸನ್ ರಾಯ್, 2 ಜಾನಿ ಬೈರ್‌ಸ್ಟೋ, 3 ಜೋ ರೂಟ್, 4 ಬೆನ್ ಸ್ಟೋಕ್ಸ್, 5 ಜೋಸ್ ಬಟ್ಲರ್ (ನಾಯಕ / ವಿಕೆಟ್ ಕೀಪರ್), 6. ಲಿಯಾಮ್ ಲಿವಿಂಗ್‌ಸ್ಟೋನ್ 7 ಮೊಯಿನ್ ಅಲಿ, 8 ಡೇವಿಡ್ ವಿಲ್ಲಿ, 9 ಕ್ರೇಗ್ ಓವರ್‌ಟನ್, 10 ಬ್ರೈಡನ್ ಕಾರ್ಸೆ, 11. ರೀಸ್ ಟೋಪ್ಲೆ.

ಡ್ರೀಮ್ ತಂಡ 1
ಕೀಪರ್ - ಜೋಸ್ ಬಟ್ಲರ್ ( ಉಪ ನಾಯಕ )
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ಶಿಖರ್ ಧವನ್, ಸೂರ್ಯಕುಮಾರ್ ಯಾದವ್, ಲಿಯಾಮ್ ಲಿವಿಂಗ್‌ಸ್ಟೋನ್
ಆಲ್ ರೌಂಡರ್‌ಗಳು - ಮೊಯಿನ್ ಅಲಿ, ಹಾರ್ದಿಕ್ ಪಾಂಡ್ಯ
ಬೌಲರ್‌ಗಳು - ಮೊಹಮ್ಮದ್ ಶಮಿ (ನಾಯಕ), ಜಸ್ಪ್ರೀತ್ ಬುಮ್ರಾ, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ

ಡ್ರೀಮ್ ತಂಡ 2
ಕೀಪರ್ - ಜೋಸ್ ಬಟ್ಲರ್, ರಿಷಬ್ ಪಂತ್
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ಜೋ ರೂಟ್ (ಉಪ ನಾಯಕ)
ಆಲ್ ರೌಂಡರ್‌ಗಳು - ಮೊಯಿನ್ ಅಲಿ, ಹಾರ್ದಿಕ್ ಪಾಂಡ್ಯ
ಬೌಲರ್‌ಗಳು - ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಡೇವಿಡ್ ವಿಲ್ಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications