IND vs ENG: ಪ್ರಥಮ ಏಕದಿನ ಪಂದ್ಯದ ಸಂಭಾವ್ಯ ಆಡುವ ಬಳಗ, ಡ್ರೀಮ್ ಟೀಮ್ ಪ್ರೆಡಿಕ್ಷನ್

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಮುಕ್ತಾಯಗೊಂಡಿದ್ದು, 2-1 ಅಂತರದಲ್ಲಿ ಸರಣಿಯನ್ನು ಕೈವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಇದೀಗ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ.
ಜುಲೈ 12ರ ಮಂಗಳವಾರದಂದು ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಏಕದಿನ ಸರಣಿಯ ಪ್ರಥಮ ಪಂದ್ಯ ನಡೆಯಲಿದ್ದು, ಟಿ ಟ್ವೆಂಟಿ ಸರಣಿಯನ್ನು ವಶಪಡಿಸಿಕೊಂಡಿರುವ ರೋಹಿತ್ ಶರ್ಮಾ ಬಳಗ ಏಕದಿನ ಸರಣಿಯಲ್ಲಿಯೂ ಗೆದ್ದು ತವರಿಗೆ ಹಿಂದಿರುಗುವ ಯೋಜನೆಯಲ್ಲಿದ್ದರೆ, ಟಿ ಟ್ವೆಂಟಿ ಸರಣಿಯನ್ನು ತವರಿನಲ್ಲಿಯೇ ಸೋತು ಮುಖಭಂಗಕ್ಕೊಳಗಾಗಿರುವ ಇಂಗ್ಲೆಂಡ್ ಈ ಏಕದಿನ ಸರಣಿಯನ್ನು ಗೆದ್ದು ಸೇಡು ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಇತ್ತಂಡಗಳ ನಡುವೆ ನಡೆಯಲಿರುವ ಪ್ರಥಮ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಎರಡೂ ತಂಡಗಳ ಆಡುವ ಬಳಗದ ಮಾಹಿತಿ ಮತ್ತು ಈ ತಂಡಕ್ಕಾಗಿ ಡ್ರೀಮ್ ಟೀಮ್‌ಗಳನ್ನು ಯಾವ ರೀತಿ ರಚಿಸಬೇಕು ಎಂಬುದರ ಕುರಿತಾದ ಸಲಹೆ ಈ ಕೆಳಕಂಡಂತಿದೆ.

ಭಾರತ ಸಂಭಾವ್ಯ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್

ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ
ಜೋಸ್ ಬಟ್ಲರ್ (ನಾಯಕ & ), ಜಾನಿ ಬೈರ್‌ಸ್ಟೋವ್, ಜೋ ರೂಟ್, ಲಿಯಾಮ್ ಲಿವಿಂಗ್‌ಸ್ಟೋನ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರೇಗ್ ಓವರ್‌ಟನ್, ಡೇವಿಡ್ ವಿಲ್ಲಿ, ಮ್ಯಾಟ್ ಪಾರ್ಕಿನ್ಸನ್, ರೀಸ್ ಟೋಪ್ಲಿ

ಡ್ರೀಮ್ ಟೀಮ್‌ಗಳು
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲನೇ ಏಕದಿನ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುವವರು ಈ ಕೆಳಕಂಡಂತೆ ಆಟಗಾರರನ್ನು ಆರಿಸುವುದು ಉತ್ತಮ.
ಡ್ರೀಮ್ ಟೀಮ್ 1: ಜೋಸ್ ಬಟ್ಲರ್, ರಿಷಬ್ ಪಂತ್, ರೋಹಿತ್ ಶರ್ಮಾ, ಶಿಖರ್ ಧವನ್, ಸೂರ್ಯಕುಮಾರ್ ಯಾದವ್, ಜೋ ರೂಟ್ (ಉಪನಾಯಕ), ಬೆನ್ ಸ್ಟೋಕ್ಸ್, ಹಾರ್ದಿಕ್ ಪಾಂಡ್ಯ (ನಾಯಕ), ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ರೀಸ್ ಟೋಪ್ಲಿ
ಡ್ರೀಮ್ ಟೀಮ್ 2: ಜಾನಿ ಬೈರ್‌ಸ್ಟೋವ್, ವಿರಾಟ್ ಕೊಹ್ಲಿ (ಉಪನಾಯಕ), ಶಿಖರ್ ಧವನ್ (ನಾಯಕ), ಸೂರ್ಯಕುಮಾರ್ ಯಾದವ್, ಜೋ ರೂಟ್, ಲಿಯಾಮ್ ಲಿವಿಂಗ್‌ಸ್ಟೋನ್, ರವೀಂದ್ರ ಜಡೇಜಾ, ಬೆನ್ ಸ್ಟೋಕ್ಸ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಡೇವಿಡ್ ವಿಲ್ಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications