IND vs ENG: ವಿಶಾಖಪಟ್ಟಣದ ಟರ್ನಿಂಗ್ ಪಿಚ್‌ನಲ್ಲಿ ಉಭಯ ತಂಡಗಳ ಆಡುವ 11ರ ಬಳಗ ಹೇಗಿರಲಿದೆ?
ಶುಕ್ರವಾರ, ಫೆಬ್ರವರಿ 2ರಂದು ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಮುನ್ನ ನಿರ್ಧಾರ ತೆಗೆದುಕೊಳ್ಳಲು ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ದೊಡ್ಡ ಆಯ್ಕೆಗಳಿವೆ.
ವಿರಾಟ್ ಕೊಹ್ಲಿ ಅನುಪಸ್ಥಿತಿ, ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಗಾಯಗೊಂಡಿದ್ದು, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ಫಾರ್ಮ್‌ನಿಂದ ಹೊರಗುಳಿದಿರುವುದು ಭಾರತದ ಬ್ಯಾಟಿಂಗ್ ಕ್ರಮಾಂಕವು ತುಂಬಾ ಕಳಪೆಯಾಗಿ ಕಾಣುತ್ತದೆ.

ದೇಶೀಯ ಕ್ರಿಕೆಟ್‌ನಲ್ಲಿ ರನ್‌ಗಳ ಶಿಖರ ನಿರ್ಮಿಸಿರುವ ಇಬ್ಬರು ಆಟಗಾರರಾದ ಸರ್ಫರಾಜ್ ಖಾನ್ ಮತ್ತು ರಜತ್ ಪಾಟಿದಾರ್ ತಂಡದಲ್ಲಿದ್ದಾರೆ. ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಲ್ಲಿ ಒಬ್ಬರನ್ನು ಅಥವಾ ಇಬ್ಬರನ್ನೂ ಆಡಿಸುವ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇದು ಯಾವುದೇ ಸಿಹಿ ತಲೆನೋವಲ್ಲ ಮತ್ತು ರೋಹಿತ್ ಶರ್ಮಾ ಅವರು ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ, ಒಂದು ದಿನದ ಮೊದಲು ಸಂಭಾವ್ಯ ಆಡುವ 11ರ ಬಳಗದ ಬಗ್ಗೆ ಏನು ಹೇಳುತ್ತಾರೆಂದು ನೋಡಲು ಕುತೂಹಲವಾಗಿರುತ್ತದೆ.

ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್‌ನಲ್ಲಿ ದೀರ್ಘಕಾಲ ರನ್ ಮಾಡಿಲ್ಲ. ಇದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಅವರಿಗೆ ತಲೆನೋವು ತರಿಸಿದೆ.
ಇನ್ನು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮಾತನಾಡಿ, ಅವರಲ್ಲಿ ಯಾರನ್ನಾದರೂ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಬಹುದು ಎಂದು ಹೇಳಿದರು. ಅವರಲ್ಲಿ ಒಬ್ಬರು ಮಾತ್ರ ಆಡಬೇಕಾದರೆ ಸರ್ಫರಾಜ್ ಮತ್ತು ಪಾಟಿದಾರ್ ನಡುವೆ ಯಾರನ್ನು ಆಯ್ಕೆ ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ. ಆದರೆ ಅಂತಿಮ ಕರೆ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರ ಮೇಲಿದೆ ಎಂದು ಹೇಳಿದರು.
ಸದ್ಯ ತನ್ನ ಬ್ಯಾಟಿಂಗ್‌ನಲ್ಲಿ ಹೋರಾಟ ನಡೆಸುತ್ತಿರುವ ಬ್ಯಾಟರ್‌ಗಳು ಕಳಪೆ ಫಾರ್ಮ್‌ನಿಂದ ಹೊರಬರಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ತನಗೆ ಖಚಿತವಾಗಿದೆ ಎಂದು ವಿಕ್ರಮ್ ರಾಥೋರ್ ತಿಳಿಸಿದರು.
ಎಲ್ಲಾ ಸಾಧ್ಯತೆಗಳಲ್ಲಿ ಸರ್ಫರಾಜ್ ಖಾನ್ ಅಥವಾ ರಜತ್ ಪಾಟಿದಾರ್ ಇಬ್ಬರೂ ಆಡಬೇಕಾದರೆ, ಶುಭ್ಮನ್ ಗಿಲ್ ಅವರ ಜಾಗದಲ್ಲಿ ಬರುತ್ತಾರೆ. ಏಕೆಂದರೆ, ಗಿಲ್ ಅವರು ಸ್ಪಿನ್ ಬೌಲಿಂಗ್ ಅನ್ನು ಎದುರಿಸಲು ಕಷ್ಟಪಡುತ್ತಿದ್ದಾರೆ.
ವಿಶಾಖಪಟ್ಟಣ ಪಿಚ್ ತಿರುವು ಕಾಣುವ ನಿರೀಕ್ಷೆಯಿದೆ ಮತ್ತು ಶ್ರೇಯಸ್ ಅಯ್ಯರ್ ಸ್ಪಿನ್ ಬೌಲಿಂಗ್ ವಿರುದ್ಧ ಗುಣಮಟ್ಟದ ಆಟಗಾರ. ಅಯ್ಯರ್ 3ನೇ ಕ್ರಮಾಂಕದಲ್ಲಿ ಸ್ವಲ್ಪಮಟ್ಟಿಗೆ ಬ್ಯಾಟಿಂಗ್ ಮಾಡಿ ಸರ್ಫರಾಜ್ ಖಾನ್ ಅಥವಾ ರಜತ್ ಪಾಟಿದಾರ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ತಂಡದ ಮ್ಯಾನೇಜ್‌ಮೆಂಟ್ ಬಯಸಬಹುದು.
ರವೀಂದ್ರ ಜಡೇಜಾ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಕಣಕ್ಕಿಳಿಸಬಹುದು ಮತ್ತು ಕೆಎಸ್ ಭರತ್ ಅವರ ಸ್ಥಾನವನ್ನು ಉಳಿಸಿಕೊಳ್ಳಬಹುದು. ಏಕೆಂದರೆ ಧ್ರುವ್ ಜುರೆಲ್ ಆಡುವುದು ತುಂಬಾ ಅಪಾಯ ಎನ್ನಬಹುದು.
ಇಂಗ್ಲೆಂಡ್‌ನ ಮಟ್ಟಿಗೆ, ವೈಜಾಗ್‌ನಲ್ಲಿನ ಪಿಚ್ ಟರ್ನರ್ ಆಗಿ ಹೊರಹೊಮ್ಮಿದರೆ ನಾವು ಆಲ್ ಸ್ಪಿನ್ ಬೌಲಿಂಗ್ ದಾಳಿಯನ್ನು ಆಡಲು ಸಿದ್ಧ ಎಂದು ಅವರ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಹೇಳಿದ್ದಾರೆ.
2ನೇ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಬಹುದಾದ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್‌ಗೆ ದಾರಿ ಮಾಡಿಕೊಡಲು ಮೊದಲ ಟೆಸ್ಟ್‌ನಲ್ಲಿ ತಮ್ಮ ಏಕೈಕ ವೇಗಿ ಮಾರ್ಕ್ ವುಡ್‌ನನ್ನು ಕೈಬಿಡಲು ಅವರು ಹಿಂಜರಿಯುವುದಿಲ್ಲ.
ಇಂಗ್ಲೆಂಡ್ ವಿರುದ್ಧ ಭಾರತದ ಸಂಭಾವ್ಯ 11ರ ಬಳಗ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್/ರಜತ್ ಪಾಟಿದಾರ್, ವಾಷಿಂಗ್ಟನ್ ಸುಂದರ್, ಕೆಎಸ್ ಭರತ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.
ಭಾರತ ವಿರುದ್ಧ ಇಂಗ್ಲೆಂಡ್ ಸಂಭಾವ್ಯ 11ರ ಬಳಗ
ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಶೋಯೆಬ್ ಬಶೀರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications