For Quick Alerts
ALLOW NOTIFICATIONS  
For Daily Alerts
 

IND vs ENG: ಭಾರತದ ಬಿಗಿ ಹಿಡಿತದಲ್ಲಿ ಪಂದ್ಯ: 4ನೇ ದಿನ ವಿಲನ್ ಆಗಲಿದ್ದಾನಾ ಮಳೆರಾಯ?

IND vs ENG: July 4 Weather update of Birmingham of 5th test against England

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಸಾಕ್ಷುಟ ಕುತೂಹಲ ಕೆರಳಿಸಿದ್ದು ಭಾರತ ಈ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಬೈರ್‌ಸ್ಟೋವ್ ಸಿಡಿಸಿದ ಶತಕ ಹೊರತುಪಡಿಸಿದರೆ ಇಂಗ್ಲೆಂಡ್ ತಂಡದ ಪರವಾಗಿ ಯಾವುದೂ ನಡೆದಿಲ್ಲ. ಹೀಗಾಗಿ ಅಂತಿಮ ಎರಡು ದಿನಗಳಲ್ಲಿ ಯಾವ ರೀತಿಯಾದ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಆದರೆ ಈ ಪಂದ್ಯಕ್ಕೆ ಪದೇ ಪದೇ ಅಡ್ಡಿಯಾಗುತ್ತಿರೋದು ಮಳೆ. ಮೂರನೇ ದಿನವೂ ಮಳೆ ಕೆಲ ಕಾಲ ಅಡ್ಡಿ ಪಡಿಸಿತ್ತು. ಈ ಪಂದ್ಯದಲ್ಲಿ ಭಾರತ ತನ್ನ ಬಿಗಿ ಹಿಡಿತ ಸಾಧಿಸಿರುವ ಈ ಸಂದರ್ಭದಲ್ಲಿ ಅಂತಿಮ ಎರಡು ದಿನಗಳಲ್ಲಿಯೂ ಮಳೆ ಅಡ್ಡಿಯಾಗಲಿದೆಯಾ ಎಂಬ ಆತಂಕ ಅಭಿಮಾನಿಗಳಲ್ಲಿದೆ.

ಹಾಗಾದರೆ ಪಂದ್ಯದ ನಾಲ್ಕನೇ ದಿನವಾದ ಸೋಮವಾರದಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಹವಾಮಾನ ವರದಿ ಹೇಗಿದೆ? ಮಳೆಯ ಆತಂಕವಿದೆಯಾ? ಇಲ್ಲಿದೆ ಆ ಕುರಿತಾದ ಮಾಹಿತಿ..

ಆಟಕ್ಕೆ ಪೂರಕವಾಗಿದೆ ಹವಾಮಾನ ವರದಿ

ಆಟಕ್ಕೆ ಪೂರಕವಾಗಿದೆ ಹವಾಮಾನ ವರದಿ

'ಅಕ್ಯು ವೆದರ್' ಹವಾಮಾನ ವರದಿ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಿದೆ. ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಆಟಕ್ಕೆ ಪೂರಕವಾದ ವಾತಾವರಣವಿದೆ ಎನ್ನುತ್ತಿದೆ ಈ ವರದಿ. ಬಹುತೇಕ ಮೋಡಕವಿದ ವಾತಾವರಣ ಇರಲಿದ್ದು ಮಳೆಯಾಗುವ ಸಾಧ್ಯತೆ ಬಹುತೇಕ ಕಡಿಮೆಯಿದೆ. ದಿನದಂತ್ಯದಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಂಭವವಿದೆ ಎನ್ನಲಾಗಿದೆ. ಅಂತಿಮ ಸೆಶನ್‌ನಲ್ಲಿ ಸ್ವಲ್ಪ ಅಡಚಣೆಯಾಗುವ ಸಂಭವವಿದೆ. ಹೀಗಾಗಿ ಇಂದು ಕ್ರಿಕೆಟ್‌ಗೆ ಪೂರಕ ವಾತಾವರಣ ಎಡ್ಜ್‌ಬಾಸ್ಟನ್‌ನಲ್ಲಿ ಇರಲಿದೆ.

ಭಾರತದ ಹಿಡಿತದಲ್ಲಿ ಪಂದ್ಯ

ಭಾರತದ ಹಿಡಿತದಲ್ಲಿ ಪಂದ್ಯ

ಇನ್ನು ಅಂತಿಮ ಟೆಸ್ಟ್‌ ಪಂದ್ಯಕ್ಕೆ ಸಾಕಷ್ಟು ಆತ್ಮವಿಶ್ವಾಸದಿಂದ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡ ತವರಿನಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಆರಂಭಿಕ ಯಶಸ್ಸಿನ ಹೊರತಾಗಿಯೂ ಹಿನ್ನಡೆ ಅನುಭವಿಸಿದ ಸ್ಟೋಕ್ಸ್ ಪಡೆ ಬಳಿಕ ಬ್ಯಾಟಿಂಗ್‌ನಲ್ಲಿಯೂ ನಿರಾಸೆ ಅನುಭವಿಸಿದೆ. ಜಾನಿ ಬೈರ್‌ಸ್ಟೋವ್ ಮಾತ್ರ ಭರ್ಜರಿ ಪ್ರದರ್ಶನ ನೀಡಿದ್ದು ಶತಕ ಸಿಡಿಸಿದ್ದಾರೆ. ಆದರೂ ಇಂಗ್ಲೆಂಡ್ ತಂಡವನ್ನು 284 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 132 ರನ್‌ಗಳ ಉತ್ತಮ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಕೊಹ್ಲಿ ಮತ್ತೆ ವೈಫಲ್ಯ; ಪೂಜಾರ, ಪಂತ್ ಬಲ

ಕೊಹ್ಲಿ ಮತ್ತೆ ವೈಫಲ್ಯ; ಪೂಜಾರ, ಪಂತ್ ಬಲ

ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡದ ಪರವಾಗಿ ಆರಂಭಿಕನಾಗಿ ಕಣಕ್ಕಿಳಿದ ಶುಬ್ಮನ್ ಗಿಲ್ ಮತ್ತೊಮ್ಮೆ ನಿರಾಸೆ ಅನುಭವಿಸಿದ್ದಾರೆ. ಇನ್ನು ನಂತರ ಕಣಕ್ಕಿಳಿದ ವಿರಾಟ್ ಕೊಹ್ಲಿ ಆರಂಭದಲಲ್ಇ ಉತ್ತಮ ಬ್ಯಾಟಿಂಗ್ ಪ್ರದರ್ಶನ ನಿಡುವ ಮುನ್ಸೂಚನೆ ನಿಡಿದರೂ 20 ರನ್‌ಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಮತ್ತೆ ವೈಫಲ್ಯವನ್ನು ಮುಂದುವರಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹನುಮ ವಿಹಾರಿ ಕುಡ 11 ರನ್‌ಗಳಿಗೆ ವಿಕೆಟ್ ಕಳೆದುಕೊಂಡಿದ್ದಾರೆ. ಆದರೆ ಭಾರತದ ಪರವಾಗಿ ಚೇತೇಶ್ವರ್ ಪೂಜಾರ ಹಾಗೂ ರಿಷಬ್ ಪಂತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಚೇತೇಶ್ವರ್ ಪೂಜಾರ ಅರ್ಧ ಶತಕ ಗಳಿಸಿದ್ದರೆ ರಿಷಭ್ ಪಂತ್ 30 ರನ್‌ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ 125 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿರುವ ಭಾರತ 257 ರನ್‌ಗಳ ಮುನ್ನಡೆ ಸಾಧಿಸಿದೆ.

Kohli ಹಾಗು Bairstow ನಡುವೆ ಏನಿದು ಗಲಾಟೆ | *Cricket | OneIndia Kannada
ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಬೆನ್ ಫೋಕ್ಸ್, ಕ್ರೇಗ್ ಓವರ್ಟನ್, ಜೇಮೀ ಓವರ್ಟನ್, ಹ್ಯಾರಿ ಬ್ರೂಕ್
ಭಾರತ: ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ನಾಯಕ)
ಬೆಂಚ್: ಉಮೇಶ್ ಯಾದವ್, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್

Story first published: Monday, July 4, 2022, 13:20 [IST]
Other articles published on Jul 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+