ಜನವರಿ 25ರಿಂದ ಹೈದರಾಬಾದ್‌ನಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡದ ವಿರುದ್ಧ ಪ್ರವಾಸಿ ಇಂಗ್ಲೆಂಡ್ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 246 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು.
ಪ್ರತ್ಯುತ್ತರವಾಗಿ, ಮೊದಲ ಇನ್ನಿಂಗ್ಸ್ ಆಡುತ್ತಿರುವ ಭಾರತ ತಂಡ ಉತ್ತಮ ಮೊತ್ತ ಕಲೆಹಾಕುತ್ತಿದ್ದು, ಭಾರತೀಯ ಬ್ಯಾಟರ್‌ಗಳ ವಿಕೆಟ್ ಪಡೆಯಲು ಇಂಗ್ಲೆಂಡ್ ಬೌಲರ್‌ಗಳು ಪ್ರಯಾಸ ಪಡುತ್ತಿದ್ದಾರೆ.

ಇದೇ ವೇಳೆ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಹೈದರಾಬಾದ್‌ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿಲ್ಲದಿರುವುದಕ್ಕೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ವ್ಯಂಗ್ಯವಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ 2ನೇ ದಿನವಾದ ಶುಕ್ರವಾರ ಕಾಮೆಂಟರಿ ಮಾಡುವಾಗ ಕೆವಿನ್ ಪೀಟರ್ಸನ್ ಅವರು ಇಂಗ್ಲೆಂಡ್ ತಂಡವು ರನ್‌ಗಳನ್ನು ಬಿಟ್ಟುಕೊಡುತ್ತಿರುವ ರನ್-ರೇಟ್‌ನಿಂದ ಚಿಂತಿತರಾದರು..

ಭಾರತ ತಂಡ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಜೋಡಿಯು ಇಂಗ್ಲೆಂಡ್ ವಿರುದ್ಧ ಪ್ರತಿ ದಾಳಿ ನಡೆಸಿ ಜೊತೆಯಾಟ ನಿರ್ಮಿಸುತ್ತಿರುವಾಗ ಕೆವಿನ್ ಪೀಟರ್ಸನ್ ಅವರಿಂದ ಹೇಳಿಕೆ ಬಂದವು.
ಜನವರಿ 26ರ ಶುಕ್ರವಾರದಂದು ಕೆಎಲ್ ರಾಹುಲ್ ಮತ್ತು ಜಡೇಜಾ ಕೇವಲ 74 ಎಸೆತಗಳಲ್ಲಿ 65 ರನ್ ಒಟ್ಟುಗೂಡಿಸಿದರು. ಈ ಜೊತೆಯಾಟದಲ್ಲಿ ಇಂಗ್ಲೆಂಡ್ ಸ್ಪಿನ್ನರ್‌ಗಳ ವಿರುದ್ಧ ಹೆಚ್ಚಿನ ರನ್ ತೆಗೆದುಕೊಂಡರು. ಇದು ಇಂಗ್ಲೆಂಡ್ ತಂಡವು ಈ ಪಂದ್ಯವನ್ನು ಹಿಡಿತದಲ್ಲಿಟ್ಟುಕೊಳ್ಳಲು ವಿಫಲವಾಗಲು ಕಾರಣವಾಯಿತು.
ಅಧಿಕೃತ ಬ್ರಾಡ್‌ಕಾಸ್ಟರ್ ಜಿಯೋಸಿನಿಮಾ ಮೂಲಕ ಮಾತನಾಡಿದ ಕೆವಿನ್ ಪೀಟರ್‌ಸನ್, ಇಂಗ್ಲೆಂಡ್ ತಂಡಕ್ಕೆ ಜೇಮ್ಸ್ ಆಂಡರ್ಸನ್ ಅವರ ಅನುಭವದ ಅಗತ್ಯವಿದೆ ಎಂದರು.
"ವೇಗಿ ಜೇಮ್ಸ್ ಆಂಡರ್ಸನ್ ಈ ಪಿಚ್‌ನಲ್ಲಿ ಹೆಚ್ಚು ರನ್‌ಗಳಿಗೆ ಬಿಟ್ಟುಕೊಡುತ್ತಿದ್ದರು ಎಂದು ನಾನು ಭಾವಿಸುವುದಿಲ್ಲ. ಅವರು ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡುತ್ತಿದ್ದರು, ವಿಕೆಟ್ ಟು ವಿಕೆಟ್‌ಗೆ ಬೌಲ್ ಮಾಡುತ್ತಿದ್ದರು," ಎಂದು ಸರಣಿಯ ಮೊದಲ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಕೆವಿನ್ ಪೀಟರ್ಸನ್ ಹೇಳಿದರು.
"ಅವರು ನಿಯಂತ್ರಣದಿಂದ ಬೌಲಿಂಗ್ ಮಾಡುತ್ತಿದ್ದರು ಮತ್ತು ಅವರು ಕ್ರಿಕೆಟ್ ಮೈದಾನದಲ್ಲಿ ನಡೆಯುವಾಗ ನಿಯಂತ್ರಣ ಹೊಂದಿರುತ್ತಾರೆ. ನಿಮಗೆ ಪಂದ್ಯವನ್ನು ಹಿಡಿದಿಡಲು ಪ್ರಯತ್ನಿಸುವ ಪರಿಸ್ಥಿತಿಗಳಲ್ಲಿ ಕನಿಷ್ಠ ಒಬ್ಬ ಬೌಲರ್ ಅಗತ್ಯವಿದೆ," ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟರು.
ನಾಯಕ ಬೆನ್ ಸ್ಟೋಕ್ಸ್ ಮೂರು ಪೂರ್ಣಾವಧಿಯ ಸ್ಪಿನ್ನರ್‌ಗಳು ಮತ್ತು ಒಬ್ಬ ವೇಗಿಯನ್ನು ಆಯ್ಕೆ ಮಾಡಿದ ನಂತರ, ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಬೆಂಚ್ ಕಾಯಿಸಬೇಕಾಯಿತು.
ಅನುಭವಿ ಸ್ಪಿನ್ನರ್ ಜಾಕ್ ಲೀಚ್ ಜೊತೆಗೆ ರೆಹಾನ್ ಅಹ್ಮದ್ ಮತ್ತು ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಟಾಮ್ ಹಾರ್ಟ್ಲಿಯನ್ನು ಬೆನ್ ಸ್ಟೋಕ್ಸ್ ನಂಬಿದರು. ಜೋ ರೂಟ್ ಇಂಗ್ಲೆಂಡ್‌ನ ನಾಲ್ಕನೇ ಸ್ಪಿನ್ನರ್ ಆಗಿ ಕಾರ್ಯನಿರ್ವಹಿಸಿದರೆ, ಮಾರ್ಕ್ ವುಡ್ ತಂಡದಲ್ಲಿ ಏಕೈಕ ವೇಗಿ ಎಂದು ಹೆಸರಿಸಲಾಯಿತು.
2021ರಲ್ಲಿ ಭಾರತದ ಕೊನೆಯ ಪ್ರವಾಸದಲ್ಲಿ ಜೇಮ್ಸ್ ಆಂಡರ್ಸನ್ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವನ್ನು ಸಾಧಿಸಲು ಅತ್ಯುತ್ತಮ ಸಹಾಯದೊಂದಿಗೆ ಸಂವೇದನಾಶೀಲ ಕೌಶಲ್ಯಗಳನ್ನು ತೋರಿಸಿದರು.
ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಅವರ ಕೌಶಲ್ಯಗಳು ಹೈದರಾಬಾದ್‌ನ ಒಣ ಪಿಚ್‌ನಲ್ಲಿ ಸೂಕ್ತವಾಗಿ ಬರುತ್ತಿದ್ದವು ಎಂದು ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟರು.
ಆದರೆ, 42 ವರ್ಷದ ಸ್ಟಾರ್ ವೇಗಿ 2023ರ ಆಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ ಮತ್ತು ಅಂತಿಮವಾಗಿ ಆ ಸರಣಿಯಲ್ಲಿ ಅತ್ಯುತ್ತಮ ವೈಯಕ್ತಿಕ ಪ್ರದರ್ಶನಗಳನ್ನು ಹೊಂದಿದ್ದ ಮಾರ್ಕ್ ವುಡ್‌ಗೆ ಸ್ಥಾನ ನೀಡಲಾಯಿತು.
ಇನ್ನು ಸದ್ಯ ಭಾರತ ತಂಡವು 90 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 360 ರನ್‌ಗಳನ್ನು ಗಳಿಸಿದೆ ಮತ್ತು 2ನೇ ದಿನದಂದು ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 115 ರನ್‌ಗಳ ಮುನ್ನಡೆ ಸಾಧಿಸಿದೆ.