Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ಸೋತರೆ ಈ 4 ಆಟಗಾರರಿಗೆ ಸಂಕಷ್ಟ

ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಮೊದಲು ಟಿ20 ಸರಣಿಯನ್ನು ಆಡಲಾಯಿತು. ಈ ಸರಣಿಯಲ್ಲಿ ಆಡಲಾದ ಐದು ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿ ಸೋಲು ಕಂಡಿದೆ. ಮೊದಲ ಪಂದ್ಯ ಮಳೆಯಿಂದಾಗಿ ಫಲಿತಾಂಶ ರಹಿತವಾಗಿತ್ತು. ಇನ್ನು ಉಳಿದ ನಾಲ್ಕು ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು. ಈಗ ಭಾರತ ಏಕದಿನ ಸರಣಿಗೆ ಅಭ್ಯಾಸ ನಡೆಸಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಕಂಡಿರುವ ಟಿ20 ಪಂದ್ಯದ ಸೋಲಿನ ಕಹಿಯನ್ನು ಮರೆಯಲು ಟೀಮ್ ಇಂಡಿಯಾಕ್ಕೆ ಇದು ಉತ್ತಮ ಅವಕಾಶವಾಗಿದೆ. ಜುಲೈ 14 ರಿಂದ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸುವ ಪ್ಲ್ಯಾನ್ ಹಾಕಿಕೊಂಡಿದೆ. ಒಂದು ವೇಳೆ ಈ ಸರಣಿಯಲ್ಲಿ ಭಾರತ ಸೋಲು ಕಂಡರೆ ಈ ನಾಲ್ಕು ಆಟಗಾರರಿಗೆ ಸಂಕಷ್ಟಕಾದಿದೆ.

IND vs ENG ODI

ಅಕ್ಷರ್ ಪಟೇಲ್

ಟೀಮ್ ಇಂಡಿಯಾದ ಅನುಭವಿ ಸ್ಪಿನ್ ಬೌಲರ್ ಅಕ್ಷರ್‌ ಪಟೇಲ್‌ ಬೌಲರ್‌ ಕಳೆದ ಕೆಲವು ತಿಂಗಳುಗಳಿಂದ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುವಲ್ಲಿ ಎಡವಿದ್ದಾರೆ. ಇವರು ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟಿ20 ಸರಣಿಯಲ್ಲಿ ನಿರಾಸೆ ಅನುಭವಿಸಿದ್ದರು. ಒಂದು ವೇಳೆ ಇದೇ ರೀತಿಯ ಪ್ರದರ್ಶನ ಮುಂದುವರೆಸಿದ ಮುಂಬರುವ ಏಕದಿನ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಪ್ರಸಿದ್ಧ್ ಕೃಷ್ಣ

ಕರ್ನಾಟಕದ ಸ್ಟಾರ್ ವೇಗದ ಬೌಲರ್‌ ಪ್ರಸಿದ್ಧ್ ಕೃಷ್ಣ ಸಹ ಕಳೆದ ಕೆಲವು ದಿನಗಳಿಂದ ಸೀಮಿತ ಓವರ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಇವರ ಸ್ಥಾನದ ಮೇಲೆ ಪ್ರಶ್ನೆಗಳು ಎದ್ದಿವೆ. ಇವರು ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಬಿಗುವಿನ ದಾಳಿ ನಡೆಸುವಲ್ಲಿ ವಿಫಲರಾದರೆ, ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಕನಸಿಗೆ ಪೆಟ್ಟು ಬೀಳಬಹುದು.

IND vs ENG ODI

ವಾಷಿಂಗ್ಟನ್‌ ಸುಂದರ್‌

ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಸ್ಥಾನ ಪಡೆದಿದ್ದ ವಾಷಿಂಗ್ಟನ್‌ ಸುಂದರ್ ಸಿಕ್ಕ ಅವ ಆಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಅಲ್ಲದೆ ಇವರ ಸ್ಥಾನದ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ. ವಾಷಿಂಗ್ಟನ್‌ ಸುಂದರ್ ಇದೇ ರೀತಿ ಆಟವನ್ನು ಮುಂದುವರೆಸಿದರೆ, ಇವರು ಬ್ಲ್ಯೂ ಜೆರ್ಸಿಯಲ್ಲಿ ಆಡುವುದು ಕಷ್ಟವಾಗುತ್ತದೆ.

ಶಿವಂ ದುಬೆ

ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್‌ ಕುಮಾರ್ ರೆಡ್ಡಿ ಅವರಿಗೆ ಗಾಯವಾದ ಕಾರಣ ಶಿವಂ ದುಬೆ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಬಹು ದಿನಗಳ ಬಳಿಕ ಏಕದಿನ ಫಾರ್ಮೆಟ್‌ಗೆ ಕಂ ಬ್ಯಾಕ್ ಮಾಡಲಿದ್ದಾರೆ. ಇವರಿಗೆ ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಮಾತ್ರ ಅವಕಾಶಗಳು ಲಭಿಸುತ್ತವೆ. ಇಲ್ಲದೆ ಇದ್ದರೆ ಇವರಿಗೆ ಸಂಕಷ್ಟ ಕಾದಿದೆ.

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಯಾರು ಅಬ್ಬರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Story first published: Sunday, July 12, 2026, 21:35 [IST]
Other articles published on Jul 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+