For Quick Alerts
ALLOW NOTIFICATIONS  
For Daily Alerts
 

IND vs ENG: ಮೊಹಮ್ಮದ್ ಸಿರಾಜ್ ಆಡಿಸುವ ಅವಶ್ಯಕತೆ ಏನಿತ್ತು?; ಭಾರತ ತಂಡದ ವಿರುದ್ಧ ಆರ್‌ಸಿಬಿ ಮಾಜಿ ಆಟಗಾರ ಕಿಡಿ

ಭಾನುವಾರ, ಜನವರಿ 28ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ 28 ರನ್‌ಗಳ ಹೀನಾಯ ಸೋಲು ಅನುಭವಿಸಿತು.

ಈ ಮೂಲಕ ಇಂಗ್ಲೆಂಡ್ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿದ ಭಾರತ ತಂಡಕ್ಕೆ ಮುಂದಿನ ಪಂದ್ಯಗಳು ನಿರ್ಣಾಯಕವಾಗಿವೆ.

IND vs ENG: Parthiv Patel Questions Mohammed Sirajs Selection in Indias Playing XI

ಇದೇ ವೇಳೆ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಆಯ್ಕೆ ಮತ್ತು ಅವರ ಬಳಕೆಯ ಬಗ್ಗೆ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಅವರು ಭಾರತ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತ ತಂಡವು ವೇಗಿಗಳನ್ನು ಹೆಚ್ಚು ಬಳಸಲು ಯೋಜಿಸದಿದ್ದರೆ, ಮೊಹಮ್ಮದ್ ಸಿರಾಜ್ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಬಾರದು ಎಂದು ಆರ್‌ಸಿಬಿ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಹೇಳಿದರು.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕೇವಲ 11 ಓವರ್‌ಗಳನ್ನು ಎಸೆದರು. ಅದರಲ್ಲಿ ಅವರು 50 ರನ್‌ಗಳನ್ನು ಬಿಟ್ಟುಕೊಟ್ಟರು ಮತ್ತು ವಿಕೆಟ್ ಪಡೆಯಲು ವಿಫಲರಾದರು.

IND vs ENG: Parthiv Patel Questions Mohammed Sirajs Selection in Indias Playing XI

ಮತ್ತೊಂದೆಡೆ, ಮೊಹಮ್ಮದ್ ಸಿರಾಜ್ ಅವರ ವೇಗದ ಬೌಲಿಂಗ್ ಜೊತೆಗಾರ ಜಸ್ಪ್ರೀತ್ ಬುಮ್ರಾ 24.4 ಓವರ್‌ಗಳನ್ನು ಬೌಲ್ ಮಾಡಿದರು. ಈ ವೇಳೆ ಬೆನ್ ಸ್ಟೋಕ್ಸ್, ರೆಹಾನ್ ಅಹ್ಮದ್, ಬೆನ್ ಡಕೆಟ್, ಓಲಿ ಪೋಪ್ ಮತ್ತು ಜೋ ರೂಟ್ ಅವರ ನಿರ್ಣಾಯಕ ವಿಕೆಟ್ ಪಡೆದರು.

ಮೊಹಮ್ಮದ್ ಸಿರಾಜ್ ಬದಲಿಗೆ ಭಾರತ ತಂಡವು ತಮ್ಮ ಬ್ಯಾಟಿಂಗ್‌ಗೆ ಹೆಚ್ಚಿನ ಡೆಪ್ತ್ ನೀಡಲು ವಿಶೇಷ ಬ್ಯಾಟರ್‌ನನ್ನು ಸೇರಿಸಬಹುದು ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟರು. ಅಕ್ಷರ್ ಪಟೇಲ್ ಬದಲಿಗೆ ಕುಲದೀಪ್ ಯಾದವ್ ಅವರನ್ನು ಸೇರಿಸಿಕೊಳ್ಳುವ ಆಯ್ಕೆ ಭಾರತಕ್ಕಿದೆ ಎಂದು ಅವರು ಉಲ್ಲೇಖಿಸಿದರು.

ಹೆಚ್ಚುವರಿ ಬ್ಯಾಟರ್‌ನನ್ನು ಆಡಿಸಿ: ಪಾರ್ಥಿವ್ ಪಟೇಲ್

"3 ಸ್ಪಿನ್ನರ್‌ಗಳು ಸಾಕು ಎಂಬುದರಲ್ಲಿ ಸಂದೇಹವಿಲ್ಲ, ಆದರೆ ನನಗೆ ವಿಭಿನ್ನ ದೃಷ್ಟಿಕೋನವಿದೆ. ಟೆಸ್ಟ್ ಪಂದ್ಯದುದ್ದಕ್ಕೂ ಮೊಹಮ್ಮದ್ ಸಿರಾಜ್ ಅವರನ್ನು ಕೇವಲ 6 ಅಥವಾ 7 ಓವರ್‌ಗಳಿಗೆ ಬಳಸಿದ್ದೀರಿ".

"ಟೆಸ್ಟ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಪ್ರಸ್ತಾಪಿಸಿದಂತೆ ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ಸಾಮರ್ಥ್ಯದಿಂದಾಗಿ ಕುಲದೀಪ್ ಯಾದವ್ ಅವರಿಗಿಂತ ಮೊದಲು ಆಡಿದರು. ನಿಮಗೆ ವೈವಿಧ್ಯತೆ ಬೇಕಾದರೆ, ನೀವು ಅಕ್ಷರ್‌ ಪಟೇಲ್‌ಗಿಂತ ಕುಲದೀಪ್ ಯಾದವ್‌ರನ್ನು ಆಯ್ಕೆ ಮಾಡಬಹುದು," ಎಂದು ಪಾರ್ಥಿವ್ ಪಟೇಲ್ ಜಿಯೋಸಿನಿಮಾಗೆ ತಿಳಿಸಿದರು.

"ಅಲ್ಲದೆ, ನೀವು ಮೊಹಮ್ಮದ್ ಸಿರಾಜ್ ಅವರನ್ನು ಹೆಚ್ಚು ಬಳಸದಿದ್ದರೆ, ಹೆಚ್ಚುವರಿ ಶುದ್ಧ ಬ್ಯಾಟರ್‌ನನ್ನು ಏಕೆ ಆಡಿಸಬಾರದು. ನೀವು ಅಶ್ವಿನ್, ಜಡೇಜಾ ಮತ್ತು ಕುಲದೀಪ್‌ರಲ್ಲಿ ಮೂರು ರೀತಿಯ ಬೌಲರ್‌ಗಳನ್ನು ಹೊಂದಿರುತ್ತೀರಿ ಮತ್ತು ಹೆಚ್ಚುವರಿ ಬ್ಯಾಟರ್ ಬ್ಯಾಟಿಂಗ್‌ ಡೆಪ್ತ್ ಸೇರಿಸಬಹುದು," ಎಂದು ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಪಾರ್ತಿವ್ ಪಟೇಲ್ ಹೇಳಿದರು.

ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 196 ರನ್ ಗಳಿಸಿದ್ದಕ್ಕಾಗಿ ಒಲ್ಲಿ ಪೋಪ್ ಅವರು ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದುಕೊಂಡರು. 231 ರನ್‌ಗಳನ್ನು ರಕ್ಷಿಸಿದ ತ್ರೀ ಲಯನ್ಸ್ ತಂಡವು ಭಾರತವನ್ನು 69.2 ಓವರ್‌ಗಳಲ್ಲಿ 202 ರನ್‌ಗಳಿಗೆ ಸೀಮಿತಗೊಳಿಸಿತು.

ಶುಕ್ರವಾರ, ಫೆಬ್ರವರಿ 2ರಂದು ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುವಾಗ ಭಾರತ ತಂಡವು ಪುಟಿದೇಳಲು ಬಯಸುತ್ತದೆ.

Story first published: Monday, January 29, 2024, 10:18 [IST]
Other articles published on Jan 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+